ಮಾಸ್ಕೋ
ಸಿರಿಯಾ, ಅಲೆಪ್ಪೊದ ಎರಡು ಜಿಲ್ಲೆಗಳಲ್ಲಿ ಭಯೋತ್ಪಾದಕರು ರಾಕೆಟ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಐವರು ನಾಗರಿಕರು ಮೃತಪಟ್ಟಿರುವ ಘಟನೆ ರವಿವಾರ ನಡೆದಿದೆ.
ಸ್ಥಳೀಯ ಮಾಧ್ಯಮದನುಸಾರ, ಅಲೆಪ್ಪೋದ ಮಿನಿಯನ್ ಹಾಗೂ ಜದೀದ್ ಜಿಲ್ಲೆಯಲ್ಲಿ ಭಯೋತ್ಪಾದಕರು ರಾಕೆಟ್ ದಾಳಿ ನಡೆಸಿದ್ದು, ಐವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಎಂಟು ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.ಸಿರಿಯಾ ದೇಶ 2011ರಿಂದಲ್ಲೇ ಅಂತರ್ ಯುದ್ಧ ಸ್ಥಿತಿ ಎದುರಿಸುತ್ತಿದೆ. ಸಿರಿಯಾದ ಸರ್ಕಾರಿ ಸೇನೆಯೂ ಅನೇಕ ವಿರೋಧಿ ಬಣ ಹಾಗೂ ಭಯೋತ್ಪಾಕದ ಸಂಘಟನೆಗಳ ವಿರುದ್ಧ ಹೋರಾಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








