ಹೆಲ್ಮೆಟ್ ಬಗ್ಗೆ ಮಕ್ಕಳೇ ಪೋಷಕರಿಗೆ ಮನ ಒಲಿಸಬೇಕು:ವಿಜಯಲಕ್ಷ್ಮಿ

ಚಿತ್ರದುರ್ಗ;

   ಮಕ್ಕಳಿಗೆ ಒಲಿದಷ್ಟು ಪೋಷಕರು ಮತ್ತ್ಯಾರಿಗೂ ಒಲಿಯರು. ಮಕ್ಕಳ ಮೂಲಕ ಹೆಲ್ಮೆಟ್ ಧರಿಸುವಂತೆ ಮಾಡುವ ದಾರಿ ಹೆಚ್ಚು ಸೂಕ್ತವೆಂದು ತರಳಬಾಳು ಪ್ರೌಡಶಾಲಾ ಮುಖ್ಯೋಪದ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮಿನುಡಿದರು.ಅವರು ವಿಜ್ಞಾನ ಕಾಲೇಜು ರಸ್ತೆ ಮುಂಬಾಗದಲ್ಲಿ, ವಿಜ್ಞಾನ ಕೇಂದ್ರ, ವಿಜ್ಞಾನ ಕಾಲೇಜು, ಪತಂಜಲಿ ಯೋಗ ಸಂಸ್ಥೆ, ಬಾಪೂಜಿ ಪ್ರೌಡಶಾಲೆ ಸಂಯುಕ್ತವಾಗಿ ಆಯೋಜಿದ್ದ ಹೆಲ್ಮೆಟ್ ಜನ ಜಾಗೃತಿ ಕಾರ್ಯಕ್ರವದಲ್ಲಿ ಮಾತನಾಡುತ್ತಿದ್ದರು.

    ಶಾಲಾ ಮಕ್ಕಳು ಪ್ರತಿಯೋಂದನ್ನು ವಿಚಾರ ಮಾಡಿ, ಮನಸ್ಸಿಗೆ ತೆಗೆದುಕೊಂಡರೆ, ಜನರಿಗೆ ಹೆಲ್ಮೆಟ್‍ನ ಬಗ್ಗೆ ಜಾಗೃತಿ ಮೂಡಿಸುವುದು ಸುಲಭ, ಶಿಕ್ಷಕರು ಮಕ್ಕಳಿಗೆ ಶಾಲಾ ಸಮಯದಲ್ಲಿ ಪೋಷಕರಿಗೆ ಹೆಲ್ಮೆಟ್ ಧರಿಸಿಕೊಂಡು, ಗಾಡಿ ಚಲಾಯಿಸುವಂತೆ ತಿಳಿಸಿ ಹೇಳಬೇಕು ಎಂದರು.

    ಬಾಪೂಜಿ ಪ್ರೌಡಶಾಲಾ ಮು.ಶಿ. ನಾಗರಾಜ. ಕೆ.ವಿ. ಮಾತನಾಡುತ್ತಾ, ಪ್ರೌಡಶಾಲಾ ಮಕ್ಕಳು ಪ್ರಯತ್ನ ಪಟ್ಟರೆ, ರಸ್ತೆ ನಿಯಮಗಳನ್ನ ಸರಿಯಾದ ರೀತಿಯಲ್ಲಿ ಅಳವಡಿಸಲು ಸಾದ್ಯವಾಗುವುದು. ಅದಕ್ಕಾಗಿ ನಾವು ಒಗ್ಗಟ್ಟಿನಿಂದ ಪ್ರಯತ್ನ ಪಟ್ಟರೆ ಅಪಘಾತಗಳನ್ನ ತಪ್ಪಿಸಬಹುದು ಎಂದರು.

    ಪ್ರೋ. ಕೆ.ಕೆ. ಕಾಮನಿ, ವಿಜ್ಞಾನ ತಜ್ಞರು ಮಾತನಾಡುತ್ತಾ, ಹತ್ತನೆಯ ತರಗತಿಗೆ ಬಂದ ವಿದ್ಯಾರ್ಥಿಗಳು ಪರವಾನಗಿ ಇಲ್ಲದೆ ಗಾಡಿ ಚಲಾಯಿಸುವುದು ಸರಿಯಲ್ಲ. ರಸ್ತೆ ನಿಯಮಗಳನ್ನ ಉಲ್ಲಂಘನೆ ತಪ್ಪು. ಜೀವ ರಕ್ಷಣೆ ಸಾಧನವಾದ ಹೆಲ್ಮೆಟ್‍ನ ಉಪಯೋಗ ಅರಿತುಕೊಂಡು, ಗಾಡಿ ಚಲಾಯಿಸಬೇಕು ಎಂದರು.

    ಪರಿಸರವಾದಿ ಡಾ|| ಹೆಚ್.ಕೆ. ಎಸ್. ಸ್ವಾಮಿ ಮಾತನಾಡಿ ಮಕ್ಕಳಿಗೆ ಬೆಳೆಗ್ಗೆ ಪ್ರಾರ್ಥನೆ ವೇಳೆ ಹೆಲ್ಮೆಟ್‍ನ ಬಗ್ಗೆ ಜಾಗೃತಿಗೊಳಿಸಿ, ನಂತರ ಅವರನ್ನ ಸಾರ್ವಜನಿಕ ರಸ್ತೆಗಳ ಬಳಿ, ಜನ ಸಂದಣಿ ಇರುವ ವೃತ್ತಗಳ ಸುತ್ತ ಮಾನವ ಸರಪಳಿ ನಿರ್ಮಿಸಿ, ಹೆಲ್ಮೆಟ್ಟ ಬಳಕೆ ಹೆಚ್ಚಿಸಬೇಕಿದೆ. ಮಕ್ಕಳು ಸಹ ಇಂತಹ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಶಾಲೆಗಳು ಸಹಕರಿಸಬೇಕು ಎಂದರು.

   ಪತಂಜಲಿ ಯೋಗ ಗುರುಗಳಾದ ಶ್ರೀ. ರವಿಯವರು ಮಾತನಾಡುತ್ತಾ ಯೋಗ ಮತ್ತು ರಸ್ತೆ ನಿಯಮಗಳು ಜೀವನದ ಯಶಸ್ವಿಗೆ ಸಹಕಾರಿಯಾಗಿದೆ. ಯೋಗ ಕೇಂದ್ರಗಳು ಯೋಗದ ಜೊತೆಗೆ, ಇನ್ನಿತರ ಕಾರ್ಯಗಳಲ್ಲೂ ಬಾಗವಹಿಸಿ, ಜನರಲ್ಲಿ ಶಿಸ್ತು, ಸಂಯಮ, ಸಹಕಾರ ಬರುವಂತೆ ಮಾಡಬಹುದು ಎಂದರು.

    ಕಾರ್ಯಕ್ರಮದಲ್ಲಿ ತರಳಬಾಳು ಶಾಲೆಯ ಸ.ಶಿ. ಮಂಜುನಾಥ, ಭರತ್, ಅರ್ಚನ, ಶಾಜಿಯ ಬಾನು, ಸವಿತ, ಬಾಪೂಜಿ ಶಾಲಾ ಸ.ಶಿ. ಶಿವಪ್ರಕಾಶ, ದೈ.ಶಿ. ಎಲ್. ಚಂದ್ರಪ್ಪ, ಜಾಗೃತಿ ಜಾಥಾದಲ್ಲಿ ಬಾಗವಹಿಸಿದ್ದರು. ಮಕ್ಕಳು ಹೆಲ್ಮೆಟ್ ಧರಿಸಿ, ಜೀವ ಉಳಿಸಿಕೊಳ್ಳಿ, ಎಂಬ ಘೋಷಣೆ ಕೂಗಿ, ಹೆದ್ದಾರಿ, ವಿಜ್ಞಾನ ಕಾಲೇಜು ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link