ಕೊಡಿಸಿದ್ದ ಕೆಲಸ ಕಳೆದುಕೊಂಡು ಕಣ್ಣೀರಿಡುತ್ತಿರುವ ವಿಶೇಷಚೇತನ ಯುವತಿ

ಮಂಡ್ಯ:

ಆಕೆ ವಿಕಲಚೇತನ ಯುವತಿ. ಆದ್ರೂ ಕೂಡ ದುಡಿಬೇಕು, ಛಲದಿಂದ ಬದುಕು ಸಾಗಿಸಬೇಕು ಎಂಬ ಹಂಬಲ. ಆ ಹಂಬಲ ನೋಡಿಯೇ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ  ತಮ್ಮ ಆಡಳಿತದ ವೇಳೆ ಜನತಾ ದರ್ಶನದಲ್ಲಿ  ಸರ್ಕಾರಿ ಕಚೇರಿಯಲ್ಲಿ ಒಂದು ಕೆಲಸ ಕೊಡಿಸಿದ್ರು.
ಕೆಲಸಕ್ಕೆ ಸೇರಿ ಮೂರು ವರ್ಷಗಳೇ ಕಳೆದ್ರು ಒಂದು ರೂಪಾಯಿ ಸಂಬಳವೂ ಸಿಗದೆ ಕಣ್ಣೀರು ಹಾಕ್ತಿದ್ದಾಳೆ. ಅವಕಾಶ ವಂಚಿತೆ ವಿಕಲಚೇತನ ಯುವತಿಯ ಹೆಸರು ನಂದಿನಿ. ಮಂಡ್ಯ ತಾಲೂಕಿನ ಕಾರಸವಾಡಿ ಗ್ರಾಮದವರು.
ಈಕೆ ಎಂಎ ಪದವೀಧರೆಯಾಗಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜನತಾ ದರ್ಶನಕ್ಕೆ ತೆರಳಿದ್ದರು. ಆ ವೇಳೆ ಅವರ ಕುಟುಂಬದ ಪರಿಸ್ಥಿತಿ, ಆಕೆಯಲ್ಲಿನ‌ ಛಲ ನೋಡಿದ ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟರು. ಅನುಕಂಪದ ಆಧಾರದ ಮೇಲೆ ಕೆಲಸ ನೀಡುವಂತೆ ಮೌಖಿಕ ಆದೇಶ ಮಾಡಿದ್ರು.

34 ತಿಂಗಳುಗಳ ಸಂಬಳಕ್ಕಾಗಿ ಅಲೆದಾಟ

2018 ರ ಅಕ್ಟೋಬರ್ ನಿಂದ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಮಂಡ್ಯ ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಕಂಪ್ಯೂಟರ್ ಡೇಟಾ ಆಪರೇಟ್ ಆಗಿ ಕೆಲಸಕ್ಕೆ ಸೇರಿದ್ರು. ಆದ್ರೆ ಕೆಲಸಕ್ಕೆ ಸೇರಿ ಮೂರು ವರ್ಷ ಕಳೆದ್ರು ಒಂದು ರೂಪಾಯಿ ಸಂಬಳ ಸಿಕ್ಕಿಲ್ಲ.

ಇದರಿಂದ ಕಂಗಾಲಾಗಿದ್ದ ಯುವತಿ 34 ತಿಂಗಳ ಸಂಬಳಕ್ಕಾಗಿ ದಿನನಿತ್ಯ ಕಚೇರಿಗಳಿಗೆ ಅಲೆದು ಅಲೆದು ಬೇಸತ್ತು ಹೋಗಿದ್ದು, ಜೀವನ ನಡೆಸಲು ಆಗದೇ ಕಣ್ಣೀರು ಹಾಕ್ತಿದ್ದಾರೆ.
6 ತಿಂಗಳಿಂದ ಕೆಲಸವೂ ಇಲ್ಲ

ಅತ್ತ ಸಂಬಳ ಕೇಳಿದ್ದಕ್ಕೆ ಹಿಂದೆ ಇದ್ದ ತಹಸಿಲ್ದಾರ್ ಸಂಬಳ ಕ್ಲಿಯರ್ ಮಾಡಿಕೊಂಡು ಬಳಿಕ ಕೆಲಸಕ್ಕೆ ಹಾಜರಾಗಿ ಎಂದಿದ್ದು, 6 ತಿಂಗಳಿಂದ ಕೆಲಸವು ಇಲ್ಲದೇ ಇತ್ತ ದುಡಿದ ಹಣವು ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಜೊತೆಗೆ ಪ್ರತಿನಿತ್ಯ ಈಕೆಯ ತಂದೆ ಕೂಡ ತಾಲೂಕು ಕಚೇರಿಗೆ ಅಲೆದಾಡುತ್ತಿದ್ದಾರೆ.

ಮಾಧ್ಯಮಗಳಲ್ಲಿ ವರದಿ ಬಳಿಕ ಅಧಿಕಾರಿಗಳಿಂದ ಆಶ್ವಾಸನೆ

ಇನ್ನು ಈ‌ ಸಂಬಂಧ ಮಾಧ್ಯಮವರು ಸುದ್ದಿ ಮಾಡಲು ಹೋದಾಗ ವಿಕಲಚೇತನೆ ಮನವಿಯನ್ನ ತಹಸಿಲ್ದಾರ್ ಸ್ವೀಕರಿಸಿದ್ದು, ಕೂಡಲೇ ಹಾಜರಾತಿ ಪುಸ್ತಕದ ಪ್ರಕಾರ 22 ತಿಂಗಳ ಸಂಬಳವನ್ನ ನೀಡುತ್ತೇವೆ.

ಉಳಿದ ತಿಂಗಳ ಸಂಬಳವನ್ನ ಶೀಘ್ರವೇ ಪರಿಶೀಲಿಸಿ ಕೊಡುತ್ತೇವೆ. ಮತ್ತೆ ಕೆಲಸ ನೀಡುವ ಸಂಬಂಧ ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿದ್ದು, ಮುಂದಿನ ದಿನಗಳಲ್ಲಿ ವಾಪಸ್ಸು ಕೆಲಸ ಒದಗಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.

ಹಲವು ಕನಸ್ಸುಗಳನ್ನ‌ ಹೊತ್ತು ಕೆಲಸಕ್ಕೆ ಸೇರಿದ್ದ ವಿಕಲanಚೇತನೆ ನಂದಿನಿ ಕಣ್ಣೀರು ಸುರಿಸುವಂತಾಗಿದೆ. ಈಗಲಾದರೂ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಆಕೆಗೆ ಸೇರಬೇಕಿದ್ದ ಸಂಬಳ ಕೊಡಿಸಿ ಆಸರೆಯಾಗ್ತಾರಾ ಎಂದು ಕಾದು ನೋಡಬೇಕಿದೆ

ಬುಡಕಟ್ಟು ಯುವಕನ ಸಾಧನೆ

ಶ್ರೀನಗರದ ಮುಲ್ನಾರ್ ಹರ್ವಾನ್‌ ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು ಸಮುದಾಯದ ಹುಡುಗನೊಬ್ಬ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾನೆ.

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಪಾಸು ಮಾಡಿದ ಮೊದಲ ಬುಡಕಟ್ಟು ಸಮುದಾಯದ ಹುಡುಗ ಎಂಬ ಖ್ಯಾತಿ ಪಡೆದಿದ್ದಾನೆ.
ಜೊತೆಗೆ ತನ್ನ ಸಾಧನೆಯಿಂದ ಇಡೀ ಕುಟುಂಬ ಮತ್ತು ಸಮುದಾಯಕ್ಕೆ ಹೆಮ್ಮೆ, ಕೀರ್ತಿ ತಂದಿದ್ದಾನೆ. ಎಷ್ಟೋ ಬಾರಿ ಎಲ್ಲಾ ಸೌಕರ್ಯಗಳಿದ್ದರೂ ಪರೀಕ್ಷೆಯಲ್ಲಿ ಪಾಸಾಗುವುದು ಕಠಿಣವಾಗುತ್ತದೆ.
ಅಂಥದ್ದರಲ್ಲಿ ತನಗೆ ಸಿಕ್ಕ ಸೌಕರ್ಯ, ಸೌಲಭ್ಯಗಳನ್ನೇ ಚೆನ್ನಾಗಿ ಬಳಸಿಕೊಂಡು ನೀಟ್ ಪರೀಕ್ಷೆಯನ್ನು ಪಾಸು ಮಾಡಿ, ಈ ಹುಡುಗ ಎಲ್ಲರಿಗೂ ಮಾದರಿಯಾಗಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link