ನೇಪಾಳದಲ್ಲಿ ಆದಿಪುರುಷ್ ಸಿನಿಮಾ ಪ್ರಸಾರ ನಿಷೇಧ….!

ಕಠ್ಮಂಡು:

     ನೇಪಾಳದಲ್ಲಿ ಆದಿಪುರುಷ್ ಸಿನಿಮಾ ಹೊರತುಪಡಿಸಿ ಎಲ್ಲಾ  ಹಿಂದಿ ಸಿನಿಮಾಗಳ ಪ್ರದರ್ಶನವನ್ನೂ ಪುನಾರಂಭ ಮಾಡಲಾಗಿದೆ.ಆದಿ ಪುರುಷ್ ಸಿನಿಮಾದಲ್ಲಿ ಸೀತಾದೇವಿಯನ್ನು ಭಾರತದ ಮಗಳು ಎಂಬ ಹೇಳಿಕೆ ಇರುವ ಹಿನ್ನೆಲೆಯಲ್ಲಿ ಸಿನಿಮಾವನ್ನು ನಿಷೇಧಿಸಲಾಗಿತ್ತು.
 
    ಕಠ್ಮಂಡು ಸೇರಿದಂತೆ ಹಲವು ಸ್ಥಳಗಳಲ್ಲಿ ಹಲವು ಸಿನಿಮಾ ಹಾಲ್ ಗಳಲ್ಲಿ ಆದಿ ಪುರುಷ್ ಹೊರತುಪಡಿಸಿ ಉಳಿದೆಲ್ಲಾ ಹಿಂದಿ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ಆದಿ ಪುರುಷ್ ಗೆ ವಿಧಿಸಲಾಗಿರುವ ನಿಷೇಧ ಮುಂದುವರೆಯಲಿದೆ.

    ನಗರದ ಸುಂದರಾದಲ್ಲಿರುವ ಮಲ್ಟಿಪ್ಲೆಕ್ಸ್ ಕ್ಯೂಎಫ್‌ಎಕ್ಸ್ ಚಿತ್ರಮಂದಿರದಲ್ಲಿ ಸಾರಾ ಅಲಿ ಖಾನ್ ಮತ್ತು ವಿಕ್ಕಿ ಕೌಶಲ್ ಅಭಿನಯದ ಹಿಂದಿ ಚಲನಚಿತ್ರ ಜರಾ ಹಟ್ಕೆ, ಜರಾ ಬಚ್ಕೆ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಆದಿಪುರುಷ್ ನ್ನು ಹೊರತುಪಡಿಸಿ ಎಲ್ಲಾ ನೇಪಾಳಿ ಮತ್ತು ವಿದೇಶಿ ಚಲನಚಿತ್ರಗಳನ್ನು ಶುಕ್ರವಾರದಿಂದ ಪ್ರದರ್ಶಿಸಲಾಗುವುದು ಎಂದು  ನೇಪಾಳ ಮೋಷನ್ ಪಿಕ್ಚರ್ ಅಸೋಸಿಯೇಷನ್ ಹೇಳಿಕೆ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link