ನವದೆಹಲಿ :
ಬಾಲಿವುಡ್ ನಟಿ ಆಲಿಯಾ ಭಟ್ ಅವರಿಗೆ ಇಂದು ಜನ್ಮ ದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಬರ್ತ್ಡೇಗೂ ಮೊದಲೇ ಆಲಿಯಾ ಭಟ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಈ ಸಂದರ್ಭದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಲಿಯಾ ಭಟ್ ಅವರು ರಣಬೀರ್ ಕಪೂರ್ ಅವರನ್ನು ವಿವಾಹ ಆಗಿ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ. ಆದರೆ, ಆಲಿಯಾ ಭಟ್ ಹೆಸರು ಈ ಮೊದಲು ಅನೇಕ ಸೆಲೆಬ್ರಿಟಿಗಳ ಜೊತೆ ತಳುಕು ಹಾಕಿಕೊಂಡಿತ್ತು. ಆ ಬಗ್ಗೆ ಇಲ್ಲಿದೆ ವಿವರ.
ಚಿತ್ರರಂಗದಲ್ಲಿ ಆ್ಯಕ್ಟೀವ್ ಆದ ಬಳಿಕ ಅವರ ವೈಯಿಕ್ತ ಜೀವನವು ಸಾಕಷ್ಟು ಚರ್ಚೆಯಲ್ಲಿ ಇರುತ್ತದೆ. ಸೆಲೆಬ್ರಿಟಿಗಳ ಜೊತೆ ಹೊಸದಾಗಿ ಯಾರಾದರೂ ಕಾಣಿಸಿಕೊಂಡರೆ ಅವರ ಮಧ್ಯೆ ಲವ್ ಸ್ಟೋರಿ ಇದೆ ಎಂದು ಹೇಳಲಾಗುತ್ತದೆ. ಆಲಿಯಾ ಭಟ್ ಕೂಡ ಇದಕ್ಕೆ ಹೊರತಾಗಿಲ್ಲ. ಅವರ ಹೆಸರು ಸಾಕಷ್ಟು ಸೆಲೆಬ್ರಿಟಿಗಳ ಜೊತೆ ತಳುಕು ಹಾಕಿಕೊಂಡಿತ್ತು. ರಮೇಶ್ ದೂಬೆ ಹೆಸರು ಆಲಿಯಾ ಭಟ್ ಅವರು ಶಾಲಾ ದಿನಗಳಲ್ಲಿ ಇದ್ದ ಸಂದರ್ಭದಲ್ಲಿ ಚರ್ಚೆ ಆಗಿತ್ತು. ಆ ಸಂದರ್ಭದಲ್ಲಿ ಇವರು ಪ್ರೀತಿಯಲ್ಲಿ ಇದ್ದರು ಎನ್ನಲಾಗಿದೆ. ಅಲ್ಲಿಗೆ ಇವರ ಪ್ರೀತಿ ಕೊನೆ ಆಯಿತು.
