ಪ್ಯಾರಿಸ್ :
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯೆ ಮತ್ತು ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಹಾಗೂ ಅವರ ಕುಟುಂಬ ಒಲಂಪಿಕ್ಸ್ ನ ಪಂದ್ಯ ವೀಕ್ಷಣೆಗೆ ಪ್ಯಾರಿಸ್‌ಗೆ ತೆರಳಿದ್ದಾರೆ. ಈ ವೇಳೆ ನವ ದಂಪತಿಗಳಾದ ಅನಂತ್ ಅಂಬಾನಿ ಹಾಗೂ ರಾಧಿಕ ಮರ್ಚೆಂಟ್ ಕೂಡ ಭಾಗಿಯಾಗಿದ್ದು, ಮುಖೇಶ್ ಅಂಬಾನಿಯ ಮುದ್ದಿನ ಸೊಸೆಯನ್ನು ಕಂಡು ನೆಟ್ಟಿಗರು ಭಾರೀ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪ್ಯಾರಿಸ್‌ನಲ್ಲಿ ವೆಸ್ಟರ್ನ್ ಡ್ರೆಸ್ ಧರಿಸಿದ್ದರೂ ಕೂಡ ರಾಧಿಕ ಮಂಗಳಸೂತ್ರಕ್ಕೆ ವಿಶೇಷ ಗೌರವ ನೀಡಿದ್ದಾರೆ. ಸದ್ಯ ರಾಧಿಕಾ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. @ambani_update ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಹಂಚಿಕೊಳ್ಳಲಾಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ವಿವಾಹಿತ ಮಹಿಳೆಯರು ಕಡ್ಡಾಯವಾಗಿ ಮಂಗಳಸೂತ್ರವನ್ನು ಧರಿಸಬೇಕು. ವಿವಾಹದ ನಂತರ ಸ್ತ್ರೀ ಎಷ್ಟೇ ಅಲಂಕಾರವನ್ನು ಮಾಡಿಕೊಂಡರೂ ಮಂಗಳ ಸೂತ್ರವಿಲ್ಲದ ಅವಳ ಅಲಂಕಾರ ಕೂಡ ವ್ಯರ್ಥ ಅನ್ನೋ ಭಾವನೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಂಗಳಸೂತ್ರ ಅಥವಾ ಕರಿಮಣಿ ಧರಿಸುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಆದರೆ ಬಿಲಿಯನೇರ್ ಆಗಿದ್ದರೂ ಕೂಡ ಮುಖೇಶ್ ಅಂಬಾನಿಯ ಮುದ್ದಿನ ಸೊಸೆ ರಾಧಿಕಾ ಮರ್ಚೆಂಟ್ ಭಾರತೀಯ ಸಂಸ್ಕ್ರತಿಯನ್ನು ಮರೆತಿಲ್ಲ ಎಂಬುದು ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ.