ನವದೆಹಲಿ :
ಹೆಚ್ಚಿನ ಮಕ್ಕಳಿಗೆ ಗಣಿತ ಎಂದ್ರೆ ಕಬ್ಬಿಣದ ಕಡಲೆ. ವಯಸ್ಕರರಲ್ಲೂ ನನಗೆ ಸರಿಯಾಗಿ ಲೆಕ್ಕ ಬರಲ್ಲ ಅನ್ನುವವರೇ ಹೆಚ್ಚು. ಗಣಿತ ಕಬ್ಬಿಣದ ಕಡಲೆಯಲ್ಲ ಬದಲಿಗೆ ಅದು ಸಿಹಿಯಾದ ಸಕ್ಕರೆ ಎಂದು ಭಾವಿಸಿದ ಕೆಲವರು ಮಾತ್ರ ಅದೇ ಗಣಿತದಲ್ಲಿ ಅಪ್ರತಿಮ ಯಶಸ್ಸು ಗಳಿಸುತ್ತಾರೆ. ಹೀಗೆ ತನ್ನ ಭೌದ್ಧಿಕ ಸಾಮರ್ಥ್ಯದಿಂದಲೇ ಫಟಾಫಟ್ ಅಂತ ಗಣಿತದ ಲೆಕ್ಕಗಳನ್ನು ಪರಿಹರಿಸುವ ಮೂಲಕ ಇಲ್ಲೊಬ್ಬ ಬಾಲಕ ಒಂದೇ ದಿನದಲ್ಲಿ ಬರೋಬ್ಬರಿ 6 ಗಿನ್ನೆಸ್ ವಿಶ್ವ ದಾಖಲೆಗಳನ್ನು ಸೃಷ್ಟಿಸಿದ್ದಾನೆ. ಹೀಗೆ ತನ್ನ ಸಾಧನೆಯ ಮೂಲಕವೇ ಮಾನವ ಕ್ಯಾಲ್ಕುಲೇಟರ್ ಎಂಬ ಮನ್ನಣೆಗೆ ಪಾತ್ರನಾದ ಈ ಬಾಲಕನ ಅಸಾಧಾರಣ ಗಣಿತ ಪ್ರತಿಭೆ ಹಾಗೂ ಗಣಿತ ಕೌಶಲ್ಯಕ್ಕೆ ಉದ್ಯಮಿ ಆನಂದ್ ಮಹೀಂದ್ರಾ ಫುಲ್ ಫಿದಾ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆತನ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಆರ್ಯನ್ ಶುಕ್ಲಾ “ಧನ್ಯವಾದಗಳು ಸರ್, ಈ ತಂತ್ರವನ್ನು ಫ್ಲ್ಯಾಶ್ ಅಂಝಾನ್ ಎಂದು ಕರೆಯಲಾಗುತ್ತದೆ. ಇಲ್ಲಿನ ನಾವು ಮಿಂಚಿನ ವೇಗದಲ್ಲಿ ಪರದೆಯಲ್ಲಿ ಕಾಣಿಸುವ ಸಂಖ್ಯೆಗಳು, ಲೆಕ್ಕದ ಸಮಸ್ಯೆಗಳನ್ನು ಬಗೆಹರಿಸಬೇಕು. ಈ ಕೌಶಲ್ಯವನ್ನು ಕರಗತ ಮಾಡಲು ನಾನು 8 ವರ್ಷಗಳಿಂದ ತರಬೇತಿ ಪಡೆಯುತ್ತಿದ್ದೇನೆ” ಎಂದು ಹೇಳಿದ್ದಾನೆ.
ಮಹಾರಾಷ್ಟ್ರ ಮೂಲದ 14 ವರ್ಷ ವಯಸ್ಸಿನ ಆರ್ಯನ್ ಶುಕ್ಲಾ ತನ್ನ ಅಪ್ರತಿಮ ಸಾಧನೆಯ ಮೂಲಕ ಮಾನವ ಕ್ಯಾಲ್ಕುಲೇಟರ್ ಎಂಬ ಮನ್ನಣೆಗೆ ಪಾತ್ರನಾಗಿದ್ದಾನೆ. ಗ್ಲೋಬಲ್ ಮೆಂಟಲ್ ಕ್ಯಾಲ್ಕುಲೇಟರ್ಸ್ ಅಸೋಸಿಯೇಷನ್‌ನ ಸ್ಥಾಪಕ ಮಂಡಳಿಯ ಸದಸ್ಯರಲ್ಲಿ ಒಬ್ಬನಾದ ಆರ್ಯನ್ ತನ್ನ ಆರನೇ ವಯಸ್ಸಿನಿಂದಲೂ ಮಾನಸಿಕ ಗಣಿತವನ್ನು ಅಭ್ಯಾಸ ಮಾಡುತ್ತಿದ್ದಾನೆ.
ಎಂಟನೇ ವಯಸ್ಸಿನಲ್ಲಿ ಗಣಿತ ಸ್ಪರ್ಧೆಯಲ್ಲಿ ಭಾಗವಹಿಸಲು ಆರಂಭಿಸಿದ ಆರ್ಯನ್ 2018 ರಲ್ಲಿ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 7 ಚಿನ್ನ, 1 ಬೆಳ್ಳಿ ಮತ್ತು 2 ಕಂಚು ಸೇರಿದಂತೆ 10 ಪದಕಗಳನ್ನು ಗೆದ್ದಿದ್ದನು. ಹೀಗೆ ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿರುವ ಈ ಬಾಲಕ ಇದೀಗ ಗಣಿತ ಲೆಕ್ಕಾಚಾರದಲ್ಲಿ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾನೆ.
