ಕಲಬುರಗಿ :
ರಾಜ್ಯದಲ್ಲಿ ಮಸೀದಿಗಳ ಮೇಲಿನ ಧ್ವನಿವರ್ಧಕ ತೆರವಿಗೆ ನೀಡಿದ್ದ ಗಡುವು ಇಂದು ಮುಗಿದಿದ್ದು, ಈ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಅಜಾನ್ ಗೆ ಪರ್ಯಾಯವಾಗಿ ಸುಪ್ರಭಾತ, ಹನುಮಾನ್ ಚಾಲೀಸಾ ಪಠಣೆ ಅಭಿಯಾನ ಮಾಡಲಾಗುತ್ತಿದೆ. ಆದರೆ ಕಲಬುರಗಿಯಲ್ಲಿ ಮುಸ್ಲಿಮರ ಪರ ದಲಿತ ಸಂಘಟನೆಗಳು ನಿಂತಿವೆ.
ಕಲಬುರಗಿಯ ಸೂಪರ್ ಮಾರ್ಕೆಟ್ ನ ಮೆಹಬಾಸ್ ಮಸೀದಿ ಬಳಿ ದಲಿತ ಸಂಘಟನೆ ಕಾರ್ಯಕರ್ತರು ಮಸೀದಿಗೆ ರಕ್ಷಣೆ ನೀಡಿದ್ದಾರೆ. ಈ ಮೂಲಕ ಶ್ರೀರಾಮಸೇನೆ ಅಭಿಯಾನಕ್ಕೆ ದಲತಿ ಸೇನೆ ಟಕ್ಕರ್ ಕೊಟ್ಟಿದೆ.
ಬಿಜೆಪಿ ಮುಖಂಡನಿಂದ ಭಾರಿ ವಂಚನೆ? ಡೆತ್‌ನೋಟ್ ಬರೆದಿಟ್ಟು ಮೈಸೂರು ಉದ್ಯಮಿ ಆತ್ಮಹತ್ಯೆ
ಮಸೀದಿ ಸಮೀಪ ಭಜನೆ, ಮಂತ್ರ ಪಠಣೆಗೆ ಅಕವಾಶ ನೀಡಬಾರದು ಎಂದು ದಲಿತ ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಇದೀ ಮಸೀದಿ ಸಮೀಪ ಶ್ರೀರಾಮಸೇನೆಯಿಂದ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
