ಬೆಮೆಲ್ ನೇತೃತ್ವ : ಪಕ್ಷಕ್ಕೆ ಬಹುಮತದ ವಿಜಯ

ತುರುವೇಕೆರೆ:

ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ ಮುರಳೀಧರ ಹಾಲಪ್ಪ ಹೇಳಿಕೆ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ತಾಲ್ಲೂಕಿನಲ್ಲಿ ಹೆಚ್ಚಿನ ಬಹುಮತ ಪಡೆದು ಗೆಲುವು ಸಾಧಿಸಲಿದೆ ಎಂದು ಕೆಪಿಸಿಸಿ ಜಿಲ್ಲಾ ವಕ್ತಾರ ಮುರಳೀಧರ ಹಾಲಪ್ಪ ತಿಳಿಸಿದರು.

ಪಟ್ಟಣದ ಕೆರೆಕೋಡಿಯಲ್ಲಿರುವ ಗುರುಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ತಾಲ್ಲೂಕು ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನ ಮತ್ತು ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಮುಖಿಯಲ್ಲದ ಆಡಳಿತದಿಂದ ಬೇಸತ್ತು ತಾಲ್ಲೂಕಿನಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದುಕೊಳ್ಳುತ್ತಿರುವುದು ನಿಜಕ್ಕೂ ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಮಾತನಾಡಿ, ಇಡೀ ದೇಶದಲ್ಲೇ ಎಲ್ಲ ವರ್ಗದವರನ್ನೂ ಪಕ್ಷದಲ್ಲಿ ಒಳಗೊಳ್ಳುವಂತೆ ಮಾಡಿದ ಏಕೈಕ ಪಕ್ಷ ಕಾಂಗ್ರೆಸ್ ಆಗಿದೆ.

ಆ ನಿಟ್ಟಿನಲ್ಲಿ ಪಕ್ಷದ ವರಿಷ್ಟರಾದ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಅವರುಗಳ ಆಶಯದಂತೆ ಹೆಚ್ಚಿನ ಸಂಖ್ಯೆಯ ಸದಸ್ಯತ್ವ ನೋಂದಣಿ ಮಾಡುವ ಗುರಿ ಹೊಂದಲಾಗಿದೆ. ತಾಲ್ಲೂಕಿನಲ್ಲಿ ಹಲವು ಜ್ವಲಂತ ಸಮಸ್ಯೆಗಳಿವೆ ನಾನು ಮುಂದಿನ ಬಾರಿ ಗೆದ್ದರೆ ತಾಲ್ಲೂಕಿನ ಅಭಿವೃದ್ಧಿಗಾಗಿ ದುಡಿಯುವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕೆಪಿಸಿಸಿ ವಕ್ತಾರ ಗೋಪಿನಾಥ್, ಚೆಲುವರಾಜ್, ಮುಖಂಡರುಗಳಾದ ಎನ್.ಆರ್.ಜಯರಾಂ, ಗುಡ್ಡೇನಹಳ್ಳಿ ನಂಜುಂಡಪ್ಪ, ದಾನಿಗೌಡ, ಬುಗಡನಹಳ್ಳಿ ಕೃಷ್ಣಮೂರ್ತಿ, ಹನುಮಂತಯ್ಯ, ಪ್ರಸನ್ನಕುಮಾರ್, ನಾಗೇಶ್, ಶಿವರಾಜು, ರಾಯಸಂದ್ರ ರವಿಕುಮಾರ್, ಕೆಂಪರಾಜು, ಮಹಾಲಿಂಗಪ್ಪ, ಭೈರಪ್ಪ, ಲಕ್ಷ್ಮಿದೇವಮ್ಮ, ಮುಖಂಡರು ಮತ್ತು ಕಾರ್ಯಕರ್ತರುಗಳು ಪಾಲ್ಗೊಂಡಿದ್ದರು.

 

ತಾಲ್ಲೂಕಿನಲ್ಲಿ ಪ್ರತಿಯೊಬ್ಬ ಮುಖಂಡರು, ಕಾರ್ಯಕರ್ತರಾದಿಯಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಭದ್ರವಾಗಿ ಕಟ್ಟಲು ಶ್ರಮಿಸುತ್ತಿದ್ದೇನೆ. ಇದಕ್ಕೆ ಎಲ್ಲರ ಕೈ ಜೋಡಿಸುವಿಕೆ ಅಗತ್ಯವಾಗಿ ಬೇಕಿದೆ.

-ಬೆಮೆಲ್ ಕಾಂತರಾಜು, ಕಾಂಗ್ರೆಸ್ ಮುಖಂಡ

 

ಕಾಂಗ್ರೆಸ್ ಪಕ್ಷವು ದೇಶದಲ್ಲಿ ಸ್ವಾತಂತ್ರ್ಯ ನಂತರದಿಂದ ಮೊದಲುಗೊಂಡು ಇಲ್ಲಿಯ ತನಕವೂ ನೊಂದವರ, ಅಸಹಾಯಕರ, ದುರ್ಬಲರ, ಮಹಿಳೆಯರ, ಕಾರ್ಮಿಕರ ಹೀಗೆ ಜನಸ್ನೇಹಿಯಾಗಿ ಆಡಳಿತ ನಡೆಸಿ ಎಲ್ಲರಿಂದ ಪಕ್ಷವು ಸೈ ಎನಿಸಿಕೊಂಡಿದೆ.

-ಮುರಳೀಧರ ಹಾಲಪ್ಪ, ವಕ್ತಾರರು, ಕೆಪಿಸಿಸಿ

ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಕಗ್ಗೊಲೆ ಖಂಡಿಸಿ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಬುಧವಾರ ಹಿಂದೂಪರ ಸಂಘಟನೆ ಹಾಗೂ ಬಜರಂಗದಳ, ಎಬಿವಿಪಿ, ತುರುವೇಕೆರೆ ತಾಲ್ಲೂಕು ಬಿಜೆಪಿ ಹಾಗೂ ಹಲವು ಸಂಘನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಬೈಕ್‍ರ್ಯಾಲಿ ಹಾಗೂ ಪ್ರತಿಭಟನೆ ಕೈಗೊಂಡಿದ್ದರು.

ಪ್ರತಿಭಟನೆಯಲ್ಲಿ ಶಾಸಕ ಮಸಾಲಜಯರಾಮ್, ಬಿಜೆಪಿ ಅಧ್ಯಕ್ಷ ಎಡಗಿಹಳ್ಳಿ ವಿಶ್ವನಾಥ್, ಪಪಂ ಅಧ್ಯಕ್ಷ ಚಿದಾನಂದ್, ಮುಖಂಡರಾದ ದುಂಡಾರೇಣಕಪ್ಪ, ಬಜರಂಗದಳದ ನವೀನ್‍ಬಾಬು, ಎಬಿವಿಪಿ ಗಣೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap