1.85 ಕೋಟಿ ರೂ ನೂತನ ಕಟ್ಟಡ ಸಂಪೂರ್ಣ ಕಳಪೆ ಕಾಮಗಾರಿಯಿಂದ ಕೂಡಿದೆ :ಸತ್ಯನಾರಾಯಣ್

ಶಿರಾ:

   ಶಾಸಕ ಬಿ.ಸತ್ಯನಾರಾಯಣ್ ಬುಧವಾರದಂದು ತಾಲ್ಲೂಕಿನ ವಿವಿಧ ಕಾಮಗಾರಿಗಳ ಸ್ಥಳಕ್ಕೆ ಧಿಡೀರ್ ಭೇಟಿ ನೀಡಿ ಕಾಮಗಾರಿಗಳ ಗುಣಮಟ್ಟ ಹಾಗೂ ಈಗಾಗಲೇ ಕಳೆದ ಒಂದು ವರ್ಷದ ಹಿಂದೆ ನಡೆದಿದ್ದ ಹಲವು ಕಾಮಗಾರಿಗಳ ಕಳಪೆ ಕಾಮಗಾರಿಯನ್ನು ಕಂಡು ಅಧಿಕಾರಿಗಳ ವಿರುದ್ಧ ಕೆಂಡಾ ಮಂಡಲವಾದ ಘಟನೆ ನಡೆಯಿತು.

    ಕಳೆದ ಒಂದು ವರ್ಷದ ಹಿಂದೆ ಶಿರಾ ನಗರದ ಪಶಯು ಆಸ್ಪತ್ರೆಯ ಆವರಣದಲ್ಲಿ 1.85 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿವಿದೋದ್ದೇಶ ಪಶು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು ಇಲ್ಲಿನ ಕಳಪೆ ಕಾಮಗಾರಿಯನ್ನು ಕಂಡು ದಂಗಾದರು.

   ಕಳೆದ ಒಂದು ವರ್ಷದ ಹಿಂದೆಯೇ ಈ ನೂತನ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು ಸದರಿ ಕಾಮಗಾರಿಯ ಕೆಲಸವನ್ನು ಹೌಸಿಂಗ್ ಬೋರ್ಡ್ ವಹಿಸಿಕೊಂಡಿತ್ತು. ಕಾಮಗಾರಿಯ ಆರಂಭದಿಂದಲೂ ಕಳಪೆ ಕಾಮಗಾರಿಯನ್ನು ಕಂಗೊಂಡ ಹೌಸಿಂಗ್ ಬೋರ್ಡ್ ವಿರುದ್ಧ ಯಾವ ಅಧಿಕಾರಿಗಳೂ ಕ್ರಮ ಕೈಗೊಂಡಿಯೇ ಇಲ್ಲ.

      ಸದರಿ ಆಸ್ಪತ್ರೆಯ ಶೀಥಲೀಕರಣ ಘಟಕ, ಮುಖ್ಯ ವೈಧ್ಯಾಧಿಕಾರಿಯ ಕೊಠಡಿ, ಸ್ಕ್ಯಾನಿಂಗ್ ಯಂತ್ರದ ಕೊಠಡಿ, ಪ್ರಯೋಗಾಲಯದಿಂದಾ ಹಿಡಿದು ಪ್ರತಿಯೊಂದು ಕೊಠಡಿಯನ್ನು ಶಾಸಕರು ಪರೀಕ್ಷೆ ಮಾಡಿದಾಗ ಕಳಪೆ ಕಾಮಗಾರಿಯ ದೃಷ್ಯ ಬೆಳಕಿಗೆ ಬಂತು.

     ಪ್ರತಿಯೊಂದು ಕೊಠಡಿಯ ಬಾಗಿಲುಗಳು ಅತ್ಯಂತ ಕಳಪೆ ಗುಣಮಟ್ಟ ಹೊಂದಿದ್ದು ಜೋರಾಗಿ ತಳ್ಳಿದರೆ ಸಾಕು ಮುರಿದು ಹೋಗುವ ಹಂತದಲ್ಲಿವೆ. ಕಟ್ಟಡವನ್ನು ಕಟ್ಟುವಾಗಿ ಸಿಮೆಂಟ್‍ನ್ನು ಅಗಯತ್ಯಕ್ಕೆ ತಕ್ಕಂತೆ ಬಳಸದ ಪರಿಣಾಮ ನೆಲ ಹಾಸಿನ ಸಿಮೆಂಟ್ ಕಿತ್ತು ಹೋಗುತ್ತಿರುವುದನ್ನು ಕಂಡು ಶಾಸಕರು ಸ್ಥಳದಲ್ಲಿಯೇ ಇದ್ದ ಪಶು ಆರೋಗ್ಯಾಧಿಕಾರಿಗಳ ವಿರುದ್ಧ ಗರಂ ಆದರು.

     ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸತ್ಯನಾರಾಯಣ್ ಸದರಿ ಆಸ್ಪತ್ರೆಯ ಎಲ್ಲಾ ಕೊಠಡಿಗಳ ವೀಕ್ಷಣೆ ಮಾಡಲಾಗಿದ್ದು ಹೌಸಿಂಗ್ ಬೋರ್ಡ್ ಕಾಮಗಾರಿಯನ್ನು ಸರಿಯಾಗಿ ಮಾಡದೇ ಕಳಪೆ ಗುಣಮಟ್ಟದ ಕಾಮಗಾರಿ ಕೈಗೊಂಡಿದೆ. ಸದರಿ ಕಾಮಗಾರಿ ನಡೆದ ಬಗ್ಗೆ ಸ್ಥಳೀಯ ವೈದ್ಯರಲ್ಲಿ ಒಂದೇ ಒಂದು ಸರ್ಕಾರದ ಪತ್ರವೂ ಇಲ್ಲ. ಅಧಿಕಾರಿಗಳು ಹಾಗೂ ಸಿಬ್ಬಂಧಿ ಕಾಟಾಚಾರಕ್ಕೆ ಬಂದು ಹೋಗುತ್ತಿರುವ ಬಗ್ಗೆ ನಮಗೆ ಮಾಹಿತಿ ಇದ್ದು ಈ ಕೂಡಲೇ ಅಧಿಕಾರಿಗಳ ವಿರುದ್ಧ ಹಾಗೂ ಕಳಪೆ ಕಾಮಗಾರಿ ಕೈಗೊಂಡ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಡ ತರಲಾಗುವುದು ಎಂದರು.ಜಿಲ್ಲಾ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಹೆಚ್.ಎಸ್. ಮೂಡಲಗಿರಿಯಪ್ಪ, ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಸ್ವಾಮಯ್ಯ, ಬರಗೂರು ಬೊಪ್ಪಣ್ಣ, ಕೆಂಚೇಗೌಡ, ಪಶು ವೈದ್ಯ ಇಲಾಖೆಯ ಡಾ.ರಂಗನಾಥ್, ಡಾ.ಮಹದೇವಪ್ಪ ಸೇರಿದಂತೆ ಹಲವರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap