ವಕ್ಫ್ ವಿವಾದ: ವಿಧಾನಸಭೆಯಿಂದ ಬಿಜೆಪಿ ಶಾಸಕರ ಸಭಾತ್ಯಾಗ!

ಬೆಳಗಾವಿ: 

   ವಕ್ಪ್ ಆಸ್ತಿ ವಿವಾದ ಕುರಿತ ಚರ್ಚೆಗೆ ಸ್ಪೀಕರ್ ಯುಟಿ ಖಾದರ್ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಶಾಸಕರು ಶುಕ್ರವಾರ ವಿಧಾನಸಭೆಯಿಂದ ಸಭಾ ತ್ಯಾಗ ನಡೆಸಿದರು.

  ಬಿಜೆಪಿ ಶಾಸಕ ಎನ್. ಮುನಿರತ್ನ ವಿರುದ್ಧದ ಹನಿಟ್ರಾಪ್ ಹಾಗೂ ಎದುರಾಳಿಗಳಿಗೆ ಹೆಚ್ ಐವಿ ಸೋಂಕು ತಗುಲುವ ಇಂಜೆಕ್ಷನ್ ಆರೋಪ ಕುರಿತು ಸದನದಲ್ಲಿ ಚರ್ಚೆಗೆ ಕಾಂಗ್ರೆಸ್ ಶಾಸಕರು ಪಟ್ಟು ಹಿಡಿದಾಗ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದ ಬಿಜೆಪಿ ಶಾಸಕರು ಸಭೆಯಿಂದ ನಿರ್ಗಮಿಸಿದರು.

   ಸಭಾತ್ಯಾಗದ ನಂತರ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ಸ್ಪೀಕರ್ ಒಂದು ಕಡೆಯವರಂತೆ ವರ್ತಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ವಕ್ಪ್ ವಿಚಾರ ಕುರಿತ ಚರ್ಚೆಗೆ ಸೋಮವಾರವೇ ಅವರ ಬಳಿ ಮನವಿ ಮಾಡಿದ್ದೆ. ಸಾಮಾನ್ಯವಾಗಿ ಪ್ರಶ್ನೋತ್ತರ ಅವಧಿ ನಂತರ ಚರ್ಚೆಗೆ ಸಮಯವನ್ನು ನೀಡಲಾಗುತ್ತದೆ. ಉದ್ದೇಶಪೂರ್ವಕವಾಗಿ ರಾಜ್ಯ ಸರ್ಕಾರ ಚರ್ಚೆಗೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಆರೋಪಿಸಿದರು.

   ಈ ಸಂಬಂಧ ಮನವಿ ಮಾಡಿ ನಾಲ್ಕು ದಿನ ಕಳೆಯಿತು. ವಕ್ಫ್ ವಿವಾದ, ಬಾಣಂತಿಯರು, ನವಶಿಶುಗಳ ಮರಣ, ರೂ. 700 ಕೋಟಿ ಅಬಕಾರಿ ಹಗರಣ, ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರ ಕುರಿತು ಪ್ರಶ್ನೆಗೆ ಬಯಸಿದ್ದೇವು. ಪ್ರಮುಖವಾದ ಬೇಡಿಕೆಗಳನ್ನು ಎತ್ತಿದಾಗ ಸದನವನ್ನು ಮುಂದೂಡಲಾಯಿತು ಎಂದು ಅವರು ಹೇಳಿದರು. ಕೇಂದ್ರದಿಂದ ಅನುದಾನ ಬಿಡುಗಡೆಯಾಗಿಲ್ಲ ಎಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರು ಕೂಡಾ ಆಕ್ರೋಶ ವ್ಯಕ್ತಪಡಿಸಿದರು. 

   ಸ್ಪೀಕರ್ ಖಾದರ್ ಅವರಿಗೆ ಸಚಿವ ಸ್ಥಾನ ನೀಡದ ಹಿನ್ನೆಲೆಯಲ್ಲಿ ಸದನದಲ್ಲಿ ಕೋಪ ತೋರಿಸುತ್ತಿದ್ದಾರೆ. ಯೋಜಿತ ರೀತಿಯಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿಯೊಂದಿಗೆ ಜಗಳಕ್ಕೆ ನಿಲ್ಲುತ್ತಿದ್ದಾರೆ. ಹೀಗಾಗಿ ಬಿಜೆಪಿ ಶಾಸಕರ ಸದನದಿಂದ ಹೊರ ನಡೆದರು ಎಂದು ಅಶೋಕ್ ಹೇಳಿದರು.

   ಮತ್ತೊಂದೆಡೆ ಸ್ಪೀಕರ್ ಮಾತುಗಳನ್ನು ಕಾಂಗ್ರೆಸ್ ಸದಸ್ಯರು ಗೌರವಿಸುತ್ತಿಲ್ಲ. ಸ್ಪೀಕರ್ ಕೂಡಾ ಒಂದು ಕಡೆಯವರಂತೆ ವರ್ತಿಸುತ್ತಿದ್ದು, ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಅಧಿವೇಶನದಲ್ಲಿ ಏನು ಸಂದೇಶ ರವಾನಿಸುತ್ತಿದ್ದಾರೆ ಎಂದು ಪ್ರಶ್ನಿಸಿದ ಅಶೋಕ್, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡದೆ ಪ್ರತಿಪಕ್ಷಗಳ ಸಂವಿಧಾನಿಕ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.

Recent Articles

spot_img

Related Stories

Share via
Copy link