ಯೆಲ್ಲೋ ಲೈನ್ ಮೆಟ್ರೋ ಓಪನ್ ಬೆನ್ನಲ್ಲೇ ಬಿಎಂಆರ್​​​ಸಿಎಲ್​​ ಅಧಿಕಾರಿಗಳ ಎಡವಟ್ಟು….!

ಬೆಂಗಳೂರು

    ನಮ್ಮ ಮೆಟ್ರೋ  ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಯಡವಟ್ಟಿನಿಂದಾಗಿ ಪ್ರತಿದಿನ ಆಸ್ಪತ್ರೆಗೆ ಬರುವ ಸಾವಿರಾರು ರೋಗಿಗಳು ಮತ್ತು ಜನರು ಪ್ರಾಣ ಕೈಯಲ್ಲಿ ಹಿಡಿದು ರಸ್ತೆ ಕ್ರಾಸ್ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ರಸ್ತೆ ಬಂದ್ ​​ ಮಾಡಿದ ಹಿನ್ನಲೆ ಆಸ್ಪತ್ರೆಗೆ ಬರುವ ರೋಗಿಗಳು ಬ್ಯಾರಿಕೇಡ್ ಜಂಪ್ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

   ಆರ್.ವಿ ರೋಡ್ ನಿಂದ ಬೊಮ್ಮಸಂದ್ರ ಮಾರ್ಗಕ್ಕೆ ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಹಳದಿ ಮಾರ್ಗದಲ್ಲಿ ರಾಗಿಗುಡ್ಡ- ಸಿಲ್ಕ್ ಬೋರ್ಡ್ ವರೆಗೆ ಡಬಲ್ ಫ್ಲೈ ಓವರ್ ನಿರ್ಮಾಣ ಮಾಡಲಾಗಿದೆ. ಆದರೆ ರಸ್ತೆ ಕೆಳಭಾಗದಲ್ಲಿ ಆ ಭಾಗದಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ರಸ್ತೆ ಕ್ರಾಸ್ ಮಾಡಲು ಇದ್ದ ಸಾಕಷ್ಟು ಜಾಗಗಳನ್ನು ಬಿಎಂಆರ್​ಸಿಎಲ್​ ಅಧಿಕಾರಿಗಳು ಬ್ಯಾರಿಕೇಡ್ ಹಾಕಿ ಬಂದ್​ ಮಾಡಿದ್ದಾರೆ. 

    ಇತ್ತ ಜಯದೇವ ಹೃದ್ರೋಗ ಆಸ್ಪತ್ರೆ ಬಳಿ ರಸ್ತೆ ಕ್ರಾಸ್ ಮಾಡಲು ಈ ಹಿಂದೆ ಜಾಗ ನೀಡಲಾಗಿತ್ತು. ನಮ್ಮ ಮೆಟ್ರೋ ಅಧಿಕಾರಿಗಳು ಇದೀಗ ಆ ಜಾಗದಲ್ಲಿ ಬ್ಯಾರಿಕೇಡ್ ಹಾಕಿ, ರಸ್ತೆ ಬಂದ್​ ಮಾಡಿದ್ದಾರೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಬ್ಯಾರಿಕೇಡ್ ಜಂಪ್ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್​ವರೆಗೆ ಜನರು ರಸ್ತೆ ಕ್ರಾಸ್ ಮಾಡಲು ಇದ್ದ ಎಲ್ಲಾ ಮಾರ್ಗವನ್ನು ಅಧಿಕಾರಿಗಳು ಬಂದ್​ ಮಾಡಿದ್ದಾರೆ. ಇದರಿಂದ ರಸ್ತೆ ಕ್ರಾಸ್ ಮಾಡಲು ವ್ಯವಸ್ಥೆ ಇಲ್ಲದೆ ಆ ಭಾಗದ ಜನರು ಕಂಗಾಲಾಗಿದ್ದಾರೆ‌.

    ಯೆಲ್ಲೋ ಲೈನ್ ಮೆಟ್ರೋ ಮಾರ್ಗ ಓಪನ್ ಆಗುತ್ತಿದ್ದಂತೆ ಬ್ಯಾರಿಕೇಡ್ ಹಾಕಿ ರಸ್ತೆ ಕ್ಲೋಸ್ ಮಾಡಿದ್ದಾರಂತೆ. ಬಸ್ ಹತ್ತಲು, ರಸ್ತೆ ಕ್ರಾಸ್ ಮಾಡಲು ಅವಕಾಶ ನೀಡದೆ ರಸ್ತೆ ಬಂದ್​ ಮಾಡಲಾಗಿದೆ. ಬ್ಯಾರಿಕೇಡ್ ಹಾಕಿರುವುದರಿಂದ ಕಿಮೀ ಗಟ್ಟಲೇ ಸುತ್ತಿಕೊಂಡು ರಾಗಿಗುಡ್ಡ ಹೋಗಿ ರೋಗಿಗಳು ಮತ್ತು ಜನರು ಬಸ್ ಹತ್ತುತ್ತಿದ್ದಾರೆ.

    ಆಸ್ಪತ್ರೆ ಎದುರಿಗೆ ಬಿಎಂಟಿಸಿ ಬಸ್ ನಿಲ್ದಾಣವಿದೆ. ಈ ನಿಲ್ದಾಣಕ್ಕೆ ರಾಗಿಗುಡ್ಡ, ಬನಶಂಕರಿ, ಕೆಂಗೇರಿ, ಜಯನಗರ, ಕೆ.ಆರ್ ಮಾರ್ಕೆಟ್, ಮೆಜಸ್ಟಿಕ್ ಭಾಗಕ್ಕೆ ಹೋಗುವವರಿಗೆ ಬಸ್ ಬರುತ್ತದೆ. ಆದರೆ ಬಸ್ ನಿಲ್ದಾಣಕ್ಕೆ ಹೋಗುವ ದಾರಿಯನ್ನು ಮೆಟ್ರೋ ಆಗುತ್ತಿದ್ದಂತೆ ಅಧಿಕಾರಿಗಳು ಬಂದ್​ ಮಾಡಿದ್ದಾರೆ. ಪ್ರತಿದಿನ ಜಯದೇವ ಆಸ್ಪತ್ರೆಗೆ ಸಾವಿರಾರು ರೋಗಿಗಳು ಮತ್ತು ಅವರ ಸಂಬಂಧಿಕರು ಬರುತ್ತಾರೆ, ಆದರೆ ರೋಡ್ ಕ್ರಾಸ್ ಮಾಡಲು ವ್ಯವಸ್ಥೆ ಇಲ್ಲದಂತೆ ಆಗಿದೆ. ಇದರಿಂದ ಮೂರು ಅಡಿಯಿರುವ ದೊಡ್ಡದಾದ ಬ್ಯಾರಿಕೇಡ್ ಜಂಪ್ ಮಾಡಿಕೊಂಡು ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾರೆ.

Recent Articles

spot_img

Related Stories

Share via
Copy link