ಆದಾಯ ಹೆಚ್ಚಿಸಲು ಬಿಎಂಟಿಸಿ ಹೊಸ ಜಾಹೀರಾತು ನೀತಿ

ಬೆಂಗಳೂರು

    ಆರ್ಥಿಕ ಸಂಕಷ್ಟದಲ್ಲಿರುವ ಬಿಎಂಟಿಸಿ, ಆದಾಯ ಹೆಚ್ಚಿಸಲು ಹೊಸ ಜಾಹೀರಾತು ನೀತಿ ರೂಪಿಸಿದೆ. ಈ ಮೂಲಕ ಆದಾಯ ಸಂಗ್ರಹಕ್ಕೆ ಹೊರಟಿದೆ. ಇದೀಗ ಬಸ್ ಸುತ್ತ ಇಡೀ ಜಾಹೀರಾತು ಹಾಕಲು ಅವಕಾಶ ಕೊಡುವ ಮೂಲಕ ಆದಾಯ ಹೆಚ್ಚಿಸಲು ಯೋಜನೆ ರೂಪಿಸಿದೆ. 3000 ಬಸ್‌ಗಳಲ್ಲಿ ಸಂಪೂರ್ಣ ಸುತ್ತುವರಿದಂತೆ ಜಾಹೀರಾತು ಪ್ರದರ್ಶನಕ್ಕೆ ತಯಾರಿ ಮಾಡಿದೆ‌.

   ಇಷ್ಟು ದಿನ ಬಸ್‌ಗಳ ಹಿಂಭಾಗದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಇತ್ತು ಇದೀಗ. ಬಸ್‌ಗಳ ಮುಂದಿನ ಮತ್ತು ಹಿಂಭಾಗದ ಗಾಜುಗಳನ್ನು ಹೊರತುಪಡಿಸಿ ಉಳಿದ ಎಲ್ಲ ಭಾಗದಲ್ಲೂ ಜಾಹೀರಾತು ಅಳವಡಿಸಿ ಪ್ರದರ್ಶನಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಟೆಂಡರ್ ಕರೆಯಲಾಗಿದೆ. ಡಿಸೆಂಬರ್- 7 ರ ವರೆಗೆ ಟೆಂಡರ್​ನಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. 

   ಒಂದು ಬಸ್ ಸುತ್ತ ಜಾಹೀರಾತು ಅಳವಡಿಸಲು 12 ರಿಂದ 13 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ. ಮೂರು ಸಾವಿರ ಬಸ್​ಗಳಿಂದ ತಿಂಗಳಿಗೆ 3 ಕೋಟಿ ರೂಪಾಯಿಯಿಂದ 75 ಕೋಟಿ ರೂಪಾಯಿ ವರೆಗೆ ಆದಾಯವನ್ನು ನಿರೀಕ್ಷೆ ಮಾಡಿದ್ದೇವೆ ಎಂದು ಬಿಎಂಟಿಸಿಯ ಸಿಟಿಎಂಸಿ ನಾಗೇಂದ್ರ ತಿಳಿಸಿದ್ದಾರೆ.

 
   ಒಟ್ಟಿನಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಿಎಂಟಿಸಿ ಬಸ್​ಗಳ ಮೇಲಿನ ಜಾಹೀರಾತುಗಳ ಮೂಲಕ ಭರ್ಜರಿ ಆದಾಯಕ್ಕೆ ಪ್ಲಾನ್ ಮಾಡಿಕೊಂಡಿದೆ. ಆದರೆ ಎಷ್ಟು ಕಂಪನಿಗಳು ಇದರಲ್ಲಿ ಭಾಗಿಯಾಗಲಿವೆ ಎಂದು ಕಾದು ನೋಡಬೇಕಿದೆ.

Recent Articles

spot_img

Related Stories

Share via
Copy link