ಬಿಡದಿ ಜಟಾಪಟಿ: ಸಿಎಂಗೆ ಹೆಚ್‌ಡಿಡಿ ಪತ್ರ ಸ್ಪಂದಿಸದಿದ್ದರೆ ಸತ್ಯಾಗ್ರಹದ ಎಚ್ಚರಿಕೆ

ಸಿಎಂ ಮಾಡಿದ್ದಕ್ಕೆ ಪ್ರತಿಯಾಗಿ ಹೈಕಮಾಂಡ್ ಆಮಿಷಗಳನ್ನು ಪೂರೈಸಲು ಬಿಡದಿ ಯೋಜನೆ – ಮಾಜಿಪ್ರಧಾನಿ ಆರೋಪ

ಬೆಂಗಳೂರು: ಬಿಡದಿ ಟೌನ್ ಶಿಪ್ ಜಟಾಪಟಿ ತೀವ್ರಗೊಳ್ಳುತ್ತಿದೆ. ಸಮೀಕ್ಷೆಗೆ ಬಂದ ಅಧಿಕಾರಿಗಳಿಗೆ ಪೊರಕೆ ಏಟು ನೀಡಿ ರೈತರು ಓಡಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ರೈತರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಇದೀಗ ಇದು ರಾಜಕೀಯವಾಗಿ ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ರೈತರ ಹೋರಾಟ ತೀವ್ರಗೊಳ್ಳುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಸಿಎಂ ಡಿಕೆ ಶಿವಕುಮಾರ್‌ಗೆ 6 ಬೇಡಿಕೆಗಳನ್ನು ಮುಂದಿಟ್ಟು ಪತ್ರ ಬರೆದಿದ್ದಾರೆ. ಸಮಸ್ಯೆಗೆ ಸ್ಪಂದಿಸದಿದ್ದರೆ ಸತ್ಯಾಗ್ರಹದ ಎಚ್ಚರಿಕೆಯನ್ನು ನೀಡಿದ್ದಾರೆ.

2006-8 ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿರವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಬೆಂಗಳೂರು ನಗರದ ಮೇಲಿನ ಒತ್ತಡ ನಿರ್ವಹಣೆ ಮಾಡುವ ದೂರದೃಷ್ಟಿಯಿಂದ ಮತ್ತು ನಗರ ಮಟ್ಟದಲ್ಲಿ ಹಾದು ಹೋಗುವ ವಾಹನಗಳ ಸಾಂದ್ರತೆಯನ್ನು ತಪ್ಪಿಸಲು ಬೆಂಗಳೂರು ನಗರಕ್ಕೆ ಹೊಂದಿಕೊAಡAತೆ ಐದು (5) ಉಪನಗರಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿತ್ತು.

ಬಿಡದಿ ಟೌನ್‌ಶಿಪ್ ಅನ್ನು ಪೈಲೆಟ್ ಪ್ರಾಜೆಕ್ಟ್ ಆಗಿ ಕೈಗೆತ್ತಿಕೊಂಡು ನವದೆಹಲಿಯ ಡಿಎಲ್‌ಎಫ್ ಸಂಸ್ಥೆಯಿAದ 9684 ಎಕರೆ ಜಮೀನಿನಲ್ಲಿ ಉಪನಗರ ನಿರ್ಮಿಸಲು ನಿರ್ಧರಿಸಲಾಯಿತು. ಆದರೆ, ರೈತರ ವಿರೋಧ ಮತ್ತು ಇಂತಹ ಬೃಹತ್ ಗಾತ್ರದ ಯೋಜನೆಯಿಂದ ಸ್ಥಳೀಯವಾಗಿ ಉಂಟಾಗುವ ಪರಿಣಾಮಗಳನ್ನು ಪರಿಗಣಿಸಿ. ಈ ಯೋಜನೆಯನ್ನು ಕೈಬಿಡಲಾಯಿತು. ಆದರೆ, ಈ ಯೋಜನೆಗೆ ಯಾವುದೇ ಭೂಸ್ವಾಧೀನ ಪ್ರಕ್ರಿಯೆ ನಡೆಸಿರುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Recent Articles

spot_img

Related Stories

Share via
Copy link