ನೀರಿನ ಸಂರಕ್ಷಣೆ ಮತ್ತು ಸುಸ್ಥಿರತೆಯತ್ತ ಪ್ರಮುಖ ಹೆಜ್ಜೆ ಇಟ್ಟ BWSSB.

ಬೆಂಗಳೂರು: 

    ನೀರಿನ ಸಂರಕ್ಷಣೆ ಮತ್ತು ಸುಸ್ಥಿರತೆಯತ್ತ ಪ್ರಮುಖ ಹೆಜ್ಜೆಯಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಟೆಕ್ ದೈತ್ಯ ವಿಪ್ರೋಗೆ ಗುರುವಾರದಿಂದ ಪ್ರತಿದಿನ ಮೂರು ಲಕ್ಷ ಲೀಟರ್ ಸಂಸ್ಕರಿಸಿದ ನೀರು ಪೂರೈಸಲು ಆರಂಭಿಸಿದೆ.

   ಅಗರ ಒಳಚರಂಡಿ ಸಂಸ್ಕರಣಾ ಘಟಕ(ಎಸ್‌ಟಿಪಿ)ದಿಂದ ವಿಪ್ರೋಗೆ ನೀರು ಸರಬರಾಜು ಮಾಡಲಾಗುವುದು ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ವಿ ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.

    ಬಿಡಬ್ಲ್ಯುಎಸ್‌ಎಸ್‌ಬಿ ಪ್ರತಿದಿನ ಮೂರು ಲಕ್ಷ ಲೀಟರ್ ಸಂಸ್ಕರಿಸಿದ ನೀರನ್ನು ಟ್ಯಾಂಕರ್‌ಗಳ ಮೂಲಕ ವಿಪ್ರೋಗೆ ಪೂರೈಸುತ್ತದೆ ಎಂದು ಅವರು ಹೇಳಿದ್ದಾರೆ.

    ಪ್ರಾಯೋಗಿಕವಾಗಿ, BWSSB ಎಂಜಿನಿಯರ್‌ಗಳು ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್(IISc) ನಡುವಿನ ಸಹಯೋಗದಲ್ಲಿ ನೂತನ ತಂತ್ರಜ್ಞಾನದ ಮೂಲಕ ಶುದ್ದೀಕರಿಸಲಾಗುತ್ತಿರುವ ಝೀರೋ ಬ್ಯಾಕ್ಟೀರಿಯಾ ನೀರು ಪೂರೈಕೆ ಸಾಧ್ಯವಾಗಿದೆ.

     ಈ ಹಿಂದೆ, BWSSB ಯ STP ಗಳ ನೀರು ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳನ್ನು ಪೂರೈಸಿದೆ. ಆದರೆ ಇನ್ನೂ ಕೆಲವು ಬ್ಯಾಕ್ಟೀರಿಯಾಗಳನ್ನು ಹೊಂದಿರುವುದರಿಂದ ಈ ನೀರನ್ನು ಫ್ಲಶಿಂಗ್ ಮತ್ತು ತೋಟಗಾರಿಕೆಗೆ ಮಾತ್ರ ಬಳಸಲು ಸಲಹೆ ನೀಡಲಾಗಿತ್ತು ಎಂದು ಮನೋಹರ್ ತಿಳಿಸಿದ್ದಾರೆ.

     BWSSB ಮತ್ತು IISc ಸಂಸ್ಕರಿಸಿದ ನೀರಿನ ಗುಣಮಟ್ಟವನ್ನು ಸುಧಾರಿಸುವ ಸ್ಥಳೀಯ ನೂತನ ತಂತ್ರಜ್ಞಾನದಲ್ಲಿ ಕೆಲಸ ಮಾಡಿದ್ದು, ಇದನ್ನು ಅಗರ, ಕೆಸಿ ವ್ಯಾಲಿ ಮತ್ತು ಬೆಳ್ಳಂದೂರು STP ಗಳಲ್ಲಿ ಅಳವಡಿಸಲಾಗಿದೆ ಎಂದು ಮನೋಹರ್ ಅವರು ಹೇಳಿದ್ದಾರೆ.

     ಈ ನೂತನ ತಂತ್ರಜ್ಞಾನವು ಎರಡು ವಾರಗಳಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿತು ಎಂದು ಅವರು ತಿಳಿಸಿದ್ದಾರೆ.

     “ನಮ್ಮಲ್ಲಿ 34 ಒಳಚರಂಡಿ ನೀರು ಸಂಸ್ಕರಣಾ ಘಟಕಗಳಿವೆ. ಇವುಗಳ ಮೂಲಕ ಪ್ರತಿ ದಿನ 1200 ಎಂ.ಎಲ್‌.ಡಿ ಯಷ್ಟು ಉತ್ತಮ ಗುಣಮಟ್ಟದ ಸಂಸ್ಕರಿಸಿದ ನೀರು ಲಭ್ಯವಾಗುತ್ತಿದೆ. ಇದರ ಬಳಕೆಯನ್ನು ಹೆಚ್ಚಿಸುವ ಮೂಲಕ ಕಾವೇರಿ ನೀರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕಳೆದ 2 ತಿಂಗಳಲ್ಲಿ ಕೈಗೊಂಡ ಕಾರ್ಯಗಳಿಗೆ ಐಟಿ ಕಂಪನಿಗಳು ಹಾಗೂ ಬಲ್ಕ್‌ ಯೂಸರ್ಸ್‌ಗಳು ಸಾಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂಸ್ಕರಿಸಿದ ನೀರಿನ ಬೇಡಿಕೆ 60 ಸಾವಿರ ಲೀಟರ್‌ಗಳಿಂದ 6 ಎಂ.ಎಲ್‌.ಡಿ ಗೆ ತಲುಪಿದೆ. ಇದನ್ನು ಇನ್ನಷ್ಟು ಹೆಚ್ಚು ಮಾಡುವ ಗುರಿ ನಮ್ಮದಾಗಿದೆ ಎಂದು BWSSB ಅಧ್ಯಕ್ಷರು ಹೇಳಿದ್ದಾರೆ.

 

Recent Articles

spot_img

Related Stories

Share via
Copy link
Powered by Social Snap