ಬ್ಯಾಡಗಿ:
ಧಾರ್ಮಿಕ ಕಾರ್ಯಕ್ರಮಗಳನ್ನು ಬಹು ಹಿಂದಿನಿಂದಲೂ ಸಮಾಜವನ್ನುಒಗ್ಗೂಡಿಸುವಂತಹ ಕೆಲಸಗಳನ್ನು ಮಾಡುತ್ತಾ ಬಂದಿವೆ, ಹೀಗಾಗಿ ಬಹಳಷ್ಟು ದಿನಗಳಿಂದ ಹಬ್ಬ ಹರಿದಿನ, ಜಾತ್ರೆ , ಪುರಾಣಇನ್ನಿತರ ಸಾರ್ವಜನಿಕ ನಡೆಯುವಂತಹ ಧಾರ್ಮಿಕ ಕಾರ್ಯಕ್ರಮಗಳು ಇಂದಿಗೂ ಗೌರವವನ್ನು ಕಾಪಾಡಿಕೊಂಡು ಬಂದಿವೆ ಎಂದು ವಿನಾಯಕ ಸ್ನೇಹ ಸಂಘದ ಅಧ್ಯಕ್ಷ ನಾಗರಾಜ ಗಾಜೇರ ಹೇಳಿದರು..
ಅಗಸನಹಳ್ಳಿ ಗ್ರಾಮದಲ್ಲಿಗಣೇಶೋತ್ಸವದ ಅಂಗವಾಗಿ ವಿನಾಯಕಯುವಕ ಮಂಡಳ ವತಿಯಿಂದ ಆಯೋಜಿಸಲಾಗಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು . ಹಬ್ಬ ಹರಿದಿನ ಜಾತ್ರೆಗಳು ಭಕ್ತಿಯಿಂದ ದೇವರನ್ನು ಪೂಜಿಸುವಂತಹ ಕಾರ್ಯಕ್ರಮಗಳಾಗಿವೆ , ಆದರೆ ಇಂತಹುವುಗಳನ್ನು ಆದಷ್ಟು ರಾಜಕಾರಣದಿಂದ ಮುಕ್ತ ವಾಗಿರಿಸಿದಲ್ಲಿ ಭಾಗವಹಿಸುವ ಜನರ ಸಂಖ್ಯೆ ಹೆಚ್ಚಾಗಲಿದೆ ಮಯ್ಯುರಾಜಕೀಯ ಮುಕ್ತ ಧಾರ್ಮಿಕ ಕಾರ್ಯಕ್ರಮಗಳಿಗೆ ಇಂದಿಗೂ ಸಮಾಜದಲ್ಲಿಗೌರವ ಸಿಗುತ್ತಿದೆ ಎಂದರು.ಗಾನಯೋಗಿ ಕಲಾ ತಂಡದ ಅಧ್ಯಕ್ಷ ವೀರಭದ್ರಗೌಡ ಹೊಮ್ಮರಡಿ ಮಾತನಾಡಿ. ಕಲೆ ಸಂಸ್ಕತಿ ಎಂದರೆ ಇಂದು ಭಾರತದತ್ತ ಈಡೀ ಜಗತ್ತೆ ತಿರುಗಿ ನೋಡುತ್ತಿದೆ ಅಷ್ಟರ ಮಟ್ಟಿಗೆ ಭಾರತೀಯ ಸಂಸ್ಕತಿ ತನ್ನ ಹಿರಿಮೆಯನ್ನು ಕಾಯ್ದುಕೊಂಡು ಬಂದಿದೆ ಈ ಹಿನ್ನಲೆಯಲ್ಲಿ ಗಣೇಶೋತ್ಸವದಂತಹ ಕಾರ್ಯಕ್ರಮಗಳು ಎಲ್ಲರನ್ನು ಒಂದುಗೂಡಿಸುವ ಕಾರ್ಯ ಮಾಡುತ್ತಿವೆ ಎಂದರು.
ಈ ಸಂದರ್ಬದಲ್ಲಿ ಗಾನಯೋಗಿ ಕಲಾ ತಂಡದ ವತಿಯಿಂದ ನಡೆದ ರಸಮಂಜರಿ ಹಾಗೂ ಮಿಮಿಕ್ರಿ ಕಾರ್ಯಕ್ರಮಗಳು ನೇರೆದಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು.ಕಾರ್ಯಕ್ರಮದಲ್ಲಿಚಂದ್ರು ಕಚವಿ, ಮಹಾದೇವಪ್ಪ ಪೂಜಾರ, ಸುರೇಶ ಬರಡಿ, ಮೋಹನ ಮುದಿಗೌಡ್ರ, ಮಂಜುನಾಥ ಪೂ ಜಾರಮಾಲತೇಶದೇವಗಿರಿಈರಣ್ಣ ಬೈರಾಪುರ ನಿರ್ಮಲಾ ಹೊಸಪೇಟಿ, ವೀಣಾಚಿರ್ತದುರ್ಗ ವಿರೇಶ ಸಿದ್ದಣ್ಣನವರ, ಮಂಜು ಮುಂಡರಗಿ, ಚಂದ್ರು ಲಿಂಗಮ್ಮನವರ ಸೇರಿದಂತೆಇನ್ನಿತರರು ಉಪಸ್ಥಿತರಿದ್ದರು..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
