ರಸ್ತೆ ಕಾಮಗಾರಿ ಸ್ಥಗಿತ : ಧೂಳಿನಿಂದ ಜನತೆ ಅಸ್ತಮಾಕ್ಕೆ ಬಲಿ

 ಬ್ಯಾಲ್ಯ : 

      ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿಯಿಂದ ಕೋಡಗದಾಲ ಗ್ರಾಮದವರೆಗೆ ನೂತನ ರಸ್ತೆ ನಿರ್ಮಿಸಲಾಗುತ್ತಿದೆ. ಪುರವರ ಗ್ರಾಮದಿಂದ ದೊಡ್ಡ ಹೊಸಹಳ್ಳಿ ಯವರೆಗೂ ರಸ್ತೆ ಕಾಮಗಾರಿಗೆಂದು ರಸ್ತೆ ಅಗೆದು, ಜಲ್ಲಿ ಮತ್ತು ಗ್ರೌಟ್ ಪುಡಿ ಹಾಕಿದ್ದಾರೆ.

      ರಸ್ತೆ ನಿರ್ಮಾಣಕ್ಕೆ ಬೇಕಾದ ಕಚ್ಛಾ ಸಾಮಗ್ರಿಗಳು ದೊರೆಯುತ್ತಿಲ್ಲವೆಂದು ಮೂರು ತಿಂಗಳಿನಿಂದಲೂ ಕಾಮಗಾರಿ ಸ್ಥಗಿತ ಗೊಂಡಿದೆ. ಸಮಸ್ಯೆ ಅದಲ್ಲವೆ ಅಲ್ಲ, ಧೂಳಿನದು!

      ರಸ್ತೆಯಲ್ಲಿ ಹರಡಿದ ಜಲ್ಲಿ ಹಾಗೆಯೆ ಇದೆ. ಸಣ್ಣ ಜಲ್ಲಿಯಲ್ಲಿ ಚಕ್ರಗಳು ಸಿಲುಕಿ ಮುಂದೆ ಸಾಗದೆ ಅದೆಷ್ಟು ದ್ವಿಚಕ್ರ ವಾಹನಗಳವರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೋ ಲೆಕ್ಕವಿಲ್ಲ. ವಾಹನಗಳು ಓಡಾಡುವಾಗ ಏಳುವ ಧೂಳು ರಸ್ತೆ ಪಕ್ಕದ ಮನೆಗಳಿಗೆ ಅಡರಿಕೊಳ್ಳುತ್ತ್ತಿದೆ. ಪುರವರ, ಗಂಕಾರನಹಳ್ಳಿ ಕ್ರಾಸ್ ಮತ್ತು ದೊಡ್ಡ ಹೊಸಹಳ್ಳಿ ಗ್ರಾಮಗಳಲ್ಲಿ ರಸ್ತೆ ಪಕ್ಕದಲ್ಲಿರುವ ಮನೆಗಳವರ ಗೋಳಂತೂ ಹೇಳತೀರದು.

      ಮನೆಗಳಲ್ಲಿರುವ ಎಳೆ ಕೂಸುಗಳು, ಬಾಣಂತಿಯರು, ವೃದ್ದರು ಪದೆ ಪದೆ ಅನಾರೋಗ್ಯಕ್ಕೆ ಈಡಾಗಿ, ಅಸ್ತಮಾಕ್ಕೆ ಬಲಿಯಾಗುತ್ತಿದ್ದಾರೆ.
ಇನ್ನು ಪುರವರ ಮತ್ತು ಬ್ಯಾಲ್ಯ ಸರ್ಕಾರಿ ಪ್ರೌಢ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ನಿತ್ಯವೂ ಧೂಳಿನ ಸ್ನಾನ ತಪ್ಪಿದ್ದಲ್ಲ. ಈ ಎಲ್ಲ ಸಮಸ್ಯೆಗಳನ್ನು ಸಂಬಂಧಿಸಿದ ಗುತ್ತಿಗೆದಾgರಿಗೆ ಹೇಳಿ, ದಿನವೂ ರಸ್ತೆಗೆ ನೀರನ್ನಾದರೂ ಹಾಕಿಸಲು ಕೇಳಿಕೊಂಡರೂ ಗುತ್ತಿಗೆದಾರರು ಆ ಕೆಲಸ ಮಾಡದೆ, ಸಮಸ್ಯೆ ಬಗೆ ಹರಿದಿಲ್ಲ. ಪುರವರ, ಗಂಕಾರನಹಳ್ಳಿ, ದೊಡ್ಡ ಹೊಸಹಳ್ಳಿ ಗ್ರಾಮಗಳ ರಸ್ತೆ ಪಕ್ಕದ ನಿವಾಸಿಗಳು ದಯವಿಟ್ಟು ಸಂಬಂಧಪಟ್ಟವರು ಇತ್ತ ಗಮನ ಹರಿಸಿ, ತಮ್ಮ ಸಮಸ್ಯೆಯನ್ನು ಬಗೆಹರಿಸಿ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link