ತಿಪಟೂರು :
ಪರಿಸ್ಥಿತಿಗೆ ತಕ್ಕಹಾಗೆ ಪ್ರತಿಕ್ರಿಯಿಸುವುದು ಪ್ರಕೃತಿಯ ಪ್ರೌವೃತ್ತಿ ಹಾಗೆಯೇತಪ್ಪು ಮಾಡಿ ಕ್ಷಮೆಕೇಳುವ ಮೊದಲುತಪ್ಪನ್ನು ಮಾಡದಿದ್ದರೆ ಕ್ಷಮೇಕೇಳುವ ಪರಿಸ್ಥಿತಿಯೇ ಬರುವುದಿಲ್ಲವೆಂದುಡಿವೈಎಸ್ಪಿ ಚಂದನ್‍ಕುಮಾರ್‍ಕರೆ ನೀಡಿದರು.
ನಗರದ ಕಲ್ಪತರು ಆಡಿಟೋರಿಯಂನಲ್ಲಿ ನಡೆದಗೌರಿ-ಗಣೇಶ ಹಬ್ಬದ ಪ್ರಯುಕ್ತಗಣೇಶಶಾಂತಿ ಸಭೆಯಯಲ್ಲಿ ಮಾತನಾಡಿದಅವರುಭಾರತ ವಿವಿಧತೆಯಲ್ಲಿಏಕತೆಯನ್ನು ಸಾರುವದೇಶ, ಹಲವಾರುಜಾತಿ, ಧರ್ಮ, ಮತಗಳಿದ್ದರು ನಾವೆಲ್ಲಾ ಭಾರತೀಯರುಎಂಬಂತೆ ಬಾಳುತ್ತಿದ್ದು ಸೌಹಾರ್ದತೆಯನ್ನು ಸಾರುತ್ತಿದ್ದೇವೆ. ಹಾಗೆಯೇ ಹಬ್ಬ ಹರಿದಿನಗಳೆಂದರೇ ಎಲ್ಲರೂ ಸೇರಿಆಚರಿಸುವ ಸಂತೋಷಕೂಟವಿದ್ದಂತೆಎಲ್ಲರ ಸಹಕಾರದಿಂದಯಾವುದೇ ವಿಘ್ನಗಳಿಲ್ಲದಂತೆ ಗಣೇಶನ ಹಬ್ಬವನ್ನುಆಚರೀಸೋಣವೆಂದುಕರೆನೀಡಿದಅವರು ಸರ್ಕಾರದಎಸ್.ಓ.ಪಿ ನಿಯಮದಂತೆ4 ಅಡಿಗಿಂತಎತ್ತರ ಮೂರ್ತಿಯನ್ನು ಪ್ರತಿಷ್ಠಾಪಿಸಬಾರದು ಹಾಗೂ 5ದಿನಕ್ಕಿಂತ ಹೆಚ್ಚಿನ ದಿನಗಳು ಗಣೇಶನನ್ನು ಕುಳ್ಳರಿಸುವ ವ್ಯವಸ್ಥೆಇಲ್ಲ ಮುಖ್ಯವಾಗಿಗಣೇಶನ ಪ್ರತಿಷ್ಠಾಪನೆಗೆ ಬೇಕಾದಅನುಮತಿಯನ್ನು ನಗರ ಪೋಲಿಸ್‍ಠಾಣೆಯಲ್ಲಿ ಸಿಂಗಲ್ ವಿಂಡೋಮೂಲಕನೀಡಲಾಗುವುದೆಂದು ತಿಳಿಸಿಸದರು.
ಕೆ.ಪಿ.ಟಿ.ಸಿ.ಎಲ್ ಎ.ಇ.ಇ ಮನೋಹರ್ ಮಾತನಾಡಿಸಂತೋಷಕ್ಕಾಗಿ ನಮ್ಮಗಣೇಶಚೆನ್ನಾಗಿಕಾಣಲಿ ಎಂದು ವಿದ್ಯುತ್‍ಅಲಂಕಾರಮಾಡಲು ಹೋಗಿ ಅಪಾಯತಂದುಕೊಳ್ಳಬೇಡಿ.ಸಾದ್ಯವಾದಷ್ಟು ಹೊಸ ವೈರ್‍ಅಥವಾಚೆನ್ನಾಗಿರುವ ವೈರ್ ಬಳಸಿ, ಬೇಕಾದರೆ ಬೆಸ್ಕಾಂ ಸಹಾಯ ತೆಗೆದುಕೊಳ್ಳಿ ಎಂದು ತಿಳಿಸಿದರು.
ತಾಲೂಕಿನಲ್ಲಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸಿ ವಿವಿಧ ವ್ಯಾಪಾರ ಮಾಡುವಅಪರಿಚಿತ ಹೆಚ್ಚಾಗಿದ್ದುಅನುಮಾನ ಬಂದರೆತಡೆದು ಕೇಳಿ ಹಾಗೂ ಮನೆಯಲ್ಲಿಯಾರು ಇಲ್ಲದವೇಳೆ ಅಕ್ಕಪಕ್ಕದ ಮನೆಗೆ ತಿಳಿಸಿ ಇಲ್ಲ ಹತ್ತಿರದ ಪೋಲೀಸ್‍ಠಾಣೆಗೆ ಮಾಹಿತಿ ನೀಡಿ.
ಸಭೆಯಲ್ಲಿತಹಸೀಲ್ದಾರ್ ಚಂದ್ರಶೇಖರ್, ಸಿ.ಪಿ.ಐ ಜಯಲಕ್ಷ್ಮಿ ಸದಾಶಿವ್, ಶ್ರೀಶೈಲಮೂರ್ತಿ, ಸಾರ್ವಜನಿಕರು ಮತ್ತಿತರರುಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
