ಲಾಂಗ್ ಝಳಪಿಸಿದ ವಿನಯ್-ರಜತ್ ಮೇಲೆ ಬಿತ್ತು ಕೇಸ್

ಬೆಂಗಳೂರು :

     ವಿನಯ್ ಗೌಡ ಹಾಗೂ ರಜತ್ ಇತ್ತೀಚೆಗೆ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಾರೆ. ಈಗ ಅದೇ ವಿಚಾರ ಸಂಕಷ್ಟ ತಂದಿದೆ. ಹೌದು, ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ಹಾಗೂ ರಜತ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆ ಅಡಿ‌ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ಹಾಕಲಾಗಿದೆ.  ಸಾರ್ವಜನಿಕ ಸ್ಥಳದಲಿ, ಕಾನೂನು ಬಾಹಿರವಾಗಿ ಲಾಂಗ್ ಹಿಡಿದುಕೊಂಡು ರಿಲ್ಸ್ ಮಾಡಿದ್ದೇ ಇವರಿಗೆ ಸಮಸ್ಯೆ ತಂದಿದೆ. ರಜತ್ ಅವರು ಈ ವಿಡಿಯೋನ ಅಪ್​ಲೋಡ್ ಮಾಡಿದ್ದರು.