ತಮಿಳುನಾಡು:
ಅಶ್ರುವಾಯು ಅಥವಾ ಗಲಭೆ-ನಿಯಂತ್ರಣ ಬಳಸುವ ಗ್ಯಾಸ್ ಉತ್ಪಾದಿಸಲು ಬಳಸಬಹುದಾದ ಆರ್ಥೋ-ಕ್ಲೋರೊ ಬೆಂಜೈಲಿಡೀನ್ ಮ್ಯಾಲೋನೊನೈಟ್ರೈಲ್ (ಸಿಎಸ್) ರಾಸಾಯನಿಕವನ್ನು ತಮಿಳುನಾಡಿನ ಬಂದರಿನಲ್ಲಿ ಚೀನಾದ ಹಡಗಿನಿಂದ ಭದ್ರತಾ ಏಜೆನ್ಸಿಗಳು ವಶಪಡಿಸಿಕೊಂಡಿವೆ.
ತಲಾ 25 ಕೆಜಿಯಂತೆ 103 ಡ್ರಮ್‌ಗಳಲ್ಲಿ ಸುಮಾರು 2560 ಕೆಮಿಕಲ್ ಹೊತ್ತು ಏಪ್ರಿಲ್ 18 ರಂದು ಚೀನಾದ ಶಾಂಘೈ ಬಂದರಿನಲ್ಲಿ ಈ ಹಡಗು ಹೊರಟಿದ್ದ ಈ ಹಡಗನ್ನು ತಪಾಸಣೆಯ ಸಮಯದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಡೆದಾಗ ಈ ವಿಚಾರ ಬೆಳಕಿಗೆ ಬಂದಿದೆ.
ಈ ಕೆಮಿಕಲ್ ಅನ್ನು ಚೆಂಗ್ಡು ಶಿಚೆನ್ ಟ್ರೇಡಿಂಗ್ ಕಂ ಲಿಮಿಟೆಡ್ ಚೀನಾದ ಸಂಸ್ಥೆಯೂ ರಾವಲ್ಪಿಂಡಿ ಮೂಲದ ರಕ್ಷಣಾ ಪೂರೈಕೆದಾರ, ರೋಹೈಲ್ ಎಂಟರ್‌ಪ್ರೈಸಸ್ ಸಂಸ್ಥೆಗೆ ರವಾನಿಸಿತ್ತು.
ಅಧಿಕಾರಿಗಳ ಪ್ರಕಾರ, ಪಾಕಿಸ್ತಾನವು ತನ್ನ ಸ್ನೇಹಿತ ಚೀನಾದ ಸಹಾಯದಿಂದ ಭಾರತದ ವಿರುದ್ದ ಆಕ್ರಮಣಕಾರಿ ರಾಸಾಯನಿಕ ಮತ್ತು ಜೈವಿಕ ಯುದ್ಧ ಯೋಜನೆ ರೂಪಿಸುತ್ತಿದೆ ಎಂದು ಆರೋಪಿಸಿದ್ದಾರೆ. ಚೀನಾ-ಪಾಕಿಸ್ತಾನ ರಕ್ಷಣಾ ಸಹಯೋಗದಲ್ಲಿ ಭಾರತದ ನಾಗರಿಕರ ವಿರುದ್ಧ ಇಂತಹ ರಾಸಾಯನಿಕಗಳನ್ನು ಬಳಸುವ ಸಾಧ್ಯತೆಯ ಬಗ್ಗೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ