ತುಮಕೂರು:
ಕಾಂಗ್ರೆಸ್ ಅಭ್ಯರ್ಥಿಯಾಗಿರುವವರ ತಂದೆ ಹಿಂದೆ ಬೆಳ್ಳಾವಿಯಲ್ಲಿ ನಿಂತಾಗ ಅವರ ಪರ ಗೌಡರು ಬಂದು ದೊಡ್ಡೇರಿ ಹೋಬಳಿಯಲ್ಲಿ ಪ್ರಚಾರ ಮಾಡಿ ಗೆಲ್ಲಿಸಿಕೊಂಡರು. ಅದೆಲ್ಲವನ್ನು ಮರೆತು ಗೌಡರನ್ನು ಸೋಲಿಸಿದರು. ಡಿಸಿಸಿ ಬ್ಯಾಂಕ್ ಮೂಲಕ ಬಡ್ಡಿರಹಿತವೆಂದು ಒಂದು ಲಕ್ಷ ರೂ. ಸಾಲ ನೀಡುವುದಾಗಿ ಗ್ರಾಪಂ ಸದಸ್ಯರನ್ನುಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಆ ಸಾಲವನ್ನು ನೀವು ಕಟ್ಟಲೇ ಬೇಕು. ಇಲ್ಲವೇ ಮನ್ನಾ ಮಾಡಲು ನಮ್ಮ ಜೆಡಿಎಸ್ ಸರಕಾರ ಬರಬೇಕು ಎಂದರು.
ನೆರವಾಗಿದ್ದು ನಾವು:
ನಾಯಕ ಸಮುದಾಯದ ಅನಭಿಷಕ್ತ ನಾಯಕರಂತೆ ಮೆರೆಯುತ್ತಿರುವ ಅವರು ನಾಯಕ ಸಮುದಾಯದ ಸ್ವಾಮಿಯೊಬ್ಬರು ಅಪಘಾತದಲ್ಲಿ ಮೃತರಾದಾಗ, ಅವರ ತಂದೆತಾಯಿ ಬೀದಿ ಪಾಲಾದರು. ಅಗ ಅವರಿಗೆ ನೆರವಿಗೆ ಧಾವಿಸಿದ್ದು ನಾವು ಎಂದು ರಾಜಣ್ಣ ಅವರು ಹೆಸರು ಪ್ರಸ್ತಾಪಿಸದೆ ಟೀಕಿಸಿದರು.
ಜೆಡಿಎಸ್ ಪಕ್ಷದ ಭವಿಷ್ಯವಿರುವುದು ಪಕ್ಷದ ಕಾರ್ಯಕರ್ತರ ಕೈಯಲ್ಲಿ ಆ ಪಕ್ಷವನ್ನು ಮುಗಿಸಲು ಯಾರಿಂದಲೂ ಆಗದು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪರಸ್ಪರ ಒಳ ಒಪ್ಪಂದಮಾಡಿಕೊಂಡಿದ್ದು. ಬಿಜೆಪಿ ಅಭ್ಯರ್ಥಿ ರಾಜಧಾನಿಯವರಾಗಿದ್ದು, ಅವರು ಚುನಾವಣೆಗಾಗಿ ಇಲ್ಲಿಗೆ ಬಂದಿದ್ದಾರೆ. ಅನಿಲ್‍ಕುಮಾರ್ ಈ ನೆಲದಲ್ಲಿ ಹುಟ್ಟಿದವರಾಗಿದ್ದು, ಅವರನ್ನು ಗೆಲ್ಲಿಸುವ ಮೂಲಕ ಪಕ್ಷಕ್ಕೆ ಶಕ್ತಿತುಂಬಬೇಕು. ನಾಯಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕೆಂದರು.
ಬಿಜೆಪಿಯವರಿಂದ ಅಪಪ್ರಚಾರ: ತುಮಕೂರಿನ ನೀರಾವರಿ ಯೋಜನೆಗಳಿಗೆ ದೇವೇಗೌಡರು ಅಡ್ಡಿಯಾಗಿದ್ದರು ಎಂದು ಕಳೆದ ಲೋಕಸಭಾ ಚುನಾವಣೇಯಲ್ಲಿ ಆರೋಪಿಸಿ ಅವರ ಸೋಲಿಗೆ ಬಿಜೆಪಿಯವರು ಕಾರಣರಾದರು. ಆದರೆ ಹೇಮಾವತಿ ಜಲಾಶಯ ನಿರ್ಮಾಣಕ್ಕೆ ಕಾರಣರಾದವರು ದೇವೇಗೌಡರು ಎಂಬ ಸತ್ಯವನ್ನು ಯಾರೂ ಹೇಳುವುದಿಲ್ಲ ಎಂದು ಹೇಳಿ ಸಮ್ಮಿಶ್ರ ಸರಕಾರದ ಸಂದರ್ಭದಲ್ಲಿ ಕಾಂಗ್ರೆಸ್ ಕಿರುಕಳದ ಬಗ್ಗೆ ಪ್ರಸ್ತಾಪಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ.ಶಾಸಕ ಎಂ.ವಿ.ವೀರಭದ್ರಯ್ಯ,ಮಾಜಿ ಸಚಿವ ಡಿ.ನಾಗರಾಜಯ್ಯ, ಎಂಎಲ್ಸಿ ತಿಪ್ಪೇಸ್ವಾಮಿ ಮಾಜಿ ಶಾಸಕರಾದ ಪಿ.ಆರ್.ಸುಧಾಕರಲಾಲ್, ಎಂ.ಟಿ.ಕೃಷ್ಣಪ್ಪ, ಸಿ.ಬಿ.ಸುರೇಶ್‍ಬಾಬು, ಗುಬ್ಬಿ ನಾಗರಾಜು, ಎನ್.ಗೋವಿಂದರಾಜು, ಕಾಯಾಧ್ಯಕ್ಷ ಟಿ.ಆರ್.ನಾಗರಾಜು, ಬೆಳ್ಳಿಲೋಕೇಶ್, ಜಿಪಂ ಮಾಜಿ ಸದಸ್ಯ ರಾಮಾಂಜಿನಪ್ಪ, ನರಸೇಗೌಡ, ವಕ್ತಾರ ಮಧು ಸೇರಿದಂತೆ ಹಲವು ಜಿಲ್ಲೆಯ ವಿವಿಧ ಭಾಗದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡರು. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಎಂಎಲ್ಸಿ ಕಾಂತರಾಜ್ ನಿರೀಕ್ಷೆಯಂತೆ ಗೈರಾಗಿದ್ದರು.
ರಾಜಕೀಯ ಆರಂಭ, ಅಂತ್ಯ ಎರಡೂ ಜೆಡಿಎಸ್‍ನಲ್ಲೇ..!
ಜೆಡಿಎಸ್ ಅಭ್ಯರ್ಥಿ ಅನಿಲ್‍ಕುಮಾರ್ ಮಾತನಾಡಿ ಜೆಡಿಎಸ್‍ಗೆ ಅಭ್ಯರ್ಥಿಯಾಗಿ ಬರುವವರು ಮುಂದೆ ಗೆದ್ದು ಅಧಿಕಾರ ಸಿಕ್ಕ ಬಳಿಕ ಪಕ್ಷವನ್ನು ತೊರೆಯುತ್ತಾರೆಂಬ ನೋವು ಕಾರ್ಯಕರ್ತರ ಮನದಲ್ಲಿದೆ. ನಾನು ಈ ವೇದಿಕೆ ಮೂಲಕ ಪ್ರಮಾಣೀಕರಿಸಿ ಹೇಳುತ್ತಿದ್ದೇನೆ. ನನ್ನ ರಾಜಕೀಯ ಆರಂಭ ಜೆಡಿಎಸ್‍ನಿಂದಲೇ ಆಗಿದ್ದು, ಅಂತ್ಯವೂ ಜೆಡಿಎಸ್‍ನಲ್ಲೇ ಆಗಲಿದೆ. ಶಾಸಕ ಗೌರಿಶಂಕರ್ ದೇವೇಗೌಡರು, ಕುಮಾರಸ್ವಾಮಿ ಆಶೀರ್ವಾದ ಮಾಡಿಸಿ ಅಭ್ಯರ್ಥಿಯಾಗಿಸಿದ್ದು, ಸ್ಥಳೀಯ ಸಂಸ್ಥೆ ಕ್ಷೇತ್ರದಲ್ಲಿ ಗೆಲ್ಲಿಸಿದರೆ ಪಕ್ಷ ಸಂಘಟನೆ, ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.
ಆಮಿಷಕ್ಕೆ ಮತಬರೋಲ್ಲ, ಬಿಜೆಪಿ ಅಭ್ಯರ್ಥಿ ಯಾರೆಂಬುದೇ ಗೊತ್ತಿಲ್ಲ
ಕಾಂಗ್ರೆಸ್‍ನವರು ಪಂಚೆ ಶರ್ಟ್ ಹಂಚಿ, ಸಾಲಕೊಡಿಸುವುದಾಗಿ ಪ್ರಚಾರ ಮಾಡುತ್ತಿದ್ದಾರೆ. ಗ್ರಾಪಂ ಸದಸ್ಯರು ಅದಕ್ಕೆಮರಳಾಗುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಅವರ ಪಕ್ಷದ ಗುಂಪೇ ಕಾಯುತ್ತಿದೆ. ಇನ್ನೂ ಬಿಜೆಪಿ ಅಭ್ಯರ್ಥಿ ಬೆಂಗಳೂರಿನಿಂದ ಬಂದವರಾಗಿದ್ದು, ಬಿಜೆಪಿ ಅಭ್ಯರ್ಥಿ ಯಾರೆಂಬುದೇ ಜಿಲ್ಲೆಯವರಿಗೆ ಗೊತ್ತಿಲ್ಲ. ಈ ನೆಲದಲ್ಲಿ ಹುಟ್ಟಿ ಬೆಳೆದ ವಿದ್ಯಾವಂತ ಅನಿಲ್‍ಕುಮಾರ್ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದು, ಅವರನ್ನು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹತ್ತು ಸ್ಥಾನದಲ್ಲಿ ಪಕ್ಷ ಗೆಲ್ಲಲು ವೇದಿಕೆ ಅಣಿಗೊಳಿಸಬೇಕೆಂದರು.
ಜೆಡಿಎಸ್ ಜನತಾ ಸಂಗಮ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ. ಅಭ್ಯರ್ಥಿ ಅನೀಲ್‍ಕುಮಾರ್ , ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರುಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ