ತಿಪಟೂರು :
ತಾಲ್ಲೂಕಿನಲ್ಲಿ 20ಕ್ಕೂ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ಕೊರೋನಾ ಹಾಟ್‍ಸ್ಪಾಟ್‍ಗಳಾದ ನೊಣವಿನಕೆರೆ, ಹುಚ್ಚಗೊಂಡನಹಳ್ಳಿ, ಬಿಳಿಗೆರೆ ಹಾಗೂ ಹಿಂಡಿಸ್ಕೆರೆಗ್ರಾಮ ಪಂಚಾಯಿತಿಗಳಿಗೆ ಶಾಸಕ ಬಿ.ಸಿ ನಾಗೇಶ್ ಹಾಗೂ ತಾಲ್ಲೂಕಿನ ಅಧಿಕಾರಿಗಳು ಭೇಟಿ ನೀಡಿ ಕೈಗೊಳ್ಳ ಬೇಕಾಗದ ಮುಂಜಾಗೃತಾ ಕ್ರಮಗಳ ಬಗ್ಗೆ ತಿಳಿಸಿದರು.
ಈಬಗ್ಗೆ ಬಿಳಿಗೆರೆ ಗ್ರಾಮ ಪಂಚಾಯಿತಿಯಲ್ಲಿ ಶಾಸಕ ಬಿ.ಸಿ.ನಾಗೇಶ್ ಮಾತನಾಡಿ ಕೊರೋನಾ ಸೋಂಕಿತರನ್ನು ಆದಷ್ಟು ಪತ್ತೆ ಹೆಚ್ಚಿ ಅವರಿಗೆ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ಕೊಟ್ಟು ಹೊಂ ಐಸೋಲೇಷನ್ ನಲ್ಲಿದ್ದು ಅವರ ಆರೋಗ್ಯ ತಪಾಸಣೆಯನ್ನು ಪ್ರತಿದಿನ ಕೈಗೊಳ್ಳಬೇಕು ಹೆಚ್ಚಿನ ಚಿಕಿತ್ಸೆ ಅಗ್ಯವಿದ್ದರೆ ಆಸ್ಪತ್ರೆಗೆ ದಾಖಲಿಸುವುದೆಂದು ತಿಳಿಸಿದ ಅವರು ಸದ್ಯಕ್ಕೆ ಸೊಂಕಿತರ ಪ್ರಥಮ ಮತ್ತು ದ್ವೀತಿಯ ಸಂಪರ್ಕಿತರನ್ನು ಪರೀಕ್ಷಿಸಿ ಹಾಗೂ ಬೆಂಗಳೂರಿನಿಂದ ಬಂದವರ ಮಾಹಿತಿಯನ್ನು ಸಂಗ್ರಹಿಸಿ ಎಲ್ಲರ ಪರೀಕ್ಷೆಯನ್ನು ಮಾಡಿಸಿ ಸೋಂಕಿತರು ಇರುವ ಪ್ರದೇಶವನ್ನು ಮೈಕ್ರೋಕಂಟೋನ್ಮೆಟ್ ಜೋನ್ ಮಾಡಿ ಬೆಳಗ್ಗೆ ಮತ್ತು ಸಾಯಂಕಾಲ ಸ್ಯಾನಿಟೈಸಿಂಗ್ ಮಾಡಿ ಹಾಗೂ ಅನಗತ್ಯವಾಗಿ ಈ ಜೋನ್‍ಗಳನ್ನು ಸಂಚಾರನ್ನು ನಿರ್ಭಂದಿಸಿ ಜನರಿಗೆ ಕೋವಿಡ್‍ನ ಬಗ್ಗೆ ಅರಿವು ಮೂಡಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ದಿಗ್ವಿಜಯ್ ಬೋಡ್ಕೆ, ತಹಸೀಲ್ದಾರ್ ಚಂದ್ರಶೇಖರ್, ಗ್ರಾಮಾಂತರ ಸಿ.ಪಿ.ಐ. ಜಯಲಕ್ಷಿ, ಟಿ.ಹೆಚ್.ಓ, ಸಿ.ಡಿ.ಪಿ.ಓ, ಪಿ.ಡಿ.ಓ, ಗಳು ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
