ಭಾವುಕರಾದ ‘ದೇವರ’ ನಿರ್ದೇಶಕ : ಕಾರಣ ಗೊತ್ತಾ…?

ತೆಲಂಗಾಣ :

   ‘ಆಚಾರ್ಯ’ ಸಿನಿಮಾ ಮಾಡಿ ದೊಡ್ಡ ಮಟ್ಟದ ಫ್ಲಾಪ್ ಕೊಟ್ಟ ಕುಖ್ಯಾತಿ ನಿರ್ದೇಶಕ ಕೊರಟಾಲ ಶಿವ ಅವರಿಗೆ ಸಿಕ್ಕಿತ್ತು. ಈಗ ಎರಡು ವರ್ಷಗಳ ಬಳಿಕ ಅವರು ‘ದೇವರ’ ಸಿನಿಮಾ ನಿರ್ದೇಶನ ಮಾಡಿ ತೆರೆಗೆ ತರುತ್ತಿದ್ದಾರೆ. ಈ ಸಿನಿಮಾಗೆ ಜೂನಿಯರ್​ ಎನ್​ಟಿಆರ್ ಅವರು ಹೀರೋ ಆದರೆ, ಜಾನ್ವಿ ಕಪೂರ್ ನಾಯಕಿ. ಈ ಚಿತ್ರದಿಂದ ಗೆಲ್ಲುವ ಭರವಸೆಯಲ್ಲಿ ಅವರಿದ್ದಾರೆ. ‘ಆಚಾರ್ಯ’ ಸಿನಿಮಾ ಸೋತಾಗ ಎಲ್ಲದಕ್ಕೂ ಅವರೇ ಕಾರಣ ಎನ್ನುವ ಆರೋಪ ಎದುರಾಯಿತು. ಕೊರಟಾಲ ಶಿವ ವಿರುದ್ಧ ಎಲ್ಲರೂ ತಿರುಗಿ ಬಿದ್ದರು. ಆದರೆ, ಆ ಸಂದರ್ಭದಲ್ಲಿ ಬೆಂಬಲಕ್ಕೆ ನಿಂತಿದ್ದು ಚಿರಂಜೀವಿ ಎನ್ನುವ ಮಾತನ್ನು ಅವರು ಹೇಳಿದ್ದಾರೆ.

  ‘ಆಚಾರ್ಯ’ ಸಿನಿಮಾದಲ್ಲಿ ಚಿರಂಜೀವಿ ಹಾಗೂ ರಾಮ್ ಚರಣ್ ಇಬ್ಬರೂ ನಟಿಸಿದ್ದರು. ನಿಜಕ್ಕೂ ಇದೊಂದು ಅಪರೂಪದ ಕಾಂಬಿನೇಷನ್ ಆಗಿತ್ತು. ಆದರೆ, ಈ ಕಾಂಬಿನೇಷನ್ ಅನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲು ಅವರಿಂದ ಸಾಧ್ಯವಾಗಲೇ ಇಲ್ಲ. ಈ ವಿಚಾರದಲ್ಲಿ ಚಿರಂಜೀವಿ ಹಾಗೂ ರಾಮ್ ಚರಣ್ ಫ್ಯಾನ್ಸ್​ಗೆ ಸಖತ್ ಬೇಸರ ಇತ್ತು. ಈ ಬಗ್ಗೆ ಕೊರಟಾಲ ಶಿವ ಮಾತನಾಡಿದ್ದಾರೆ.

   ‘ಇತ್ತೀಚಿಗಿನ ದಿನಗಳಲ್ಲಿ ನಿರ್ದೇಶಕರು ಉದ್ಯಮ ಗಮನದಲ್ಲಿ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಅವರಿಗೆ ಕ್ರಿಯೇಟಿವ್​ನೆಸ್ ಬೇಕಾಗಿಲ್ಲ. ಇದರಿಂದ ಸಿನಿಮಾಗಳು ಸೋಲುತ್ತಿವೆ’ ಎಂದಿದ್ದರು ಚಿರಂಜೀವಿ. ಇದು ಕೊರಟಾಲ ಶಿವ ಬಗ್ಗೆ ಹೇಳಿದ ಮಾತು ಎಂದು ಎಲ್ಲರೂ ಊಹಿಸಿದ್ದರು. ಆದರೆ, ಹಾಗಿಲ್ಲ ಎನ್ನಲಾಗುತ್ತಿದೆ.

   ‘ಆಚಾರ್ಯ ಸಿನಿಮಾ ರಿಲೀಸ್ ಆದ ಬಳಿಕ ನನಗೆ ಕರೆ ಮಾಡಿದ ಮೊದಲ ವ್ಯಕ್ತಿ ಚಿರಂಜೀವಿ. ಶಿವ ನೀವು ಮತ್ತು ಬೌನ್ಸ್ ಬ್ಯಾಕ್ ಆಗುತ್ತೀರಿ ಎನ್ನುವ ನಂಬಿಕೆ ಇದೆ ಎಂದು ಸ್ಫೂರ್ತಿ ತುಂಬಿದ್ದರು ಎಂದು’ ಶಿವ ಅವರು ಹೇಳಿದ್ದಾರೆ. 

   ‘ಆಚಾರ್ಯ ರಿಲೀಸ್ ಆದ ಮೂರೇ ದಿನದಲ್ಲಿ ದೇವರ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡೆ. ಆ ಬಳಿಕ ಕೆಲವೇ ದಿನದಲ್ಲಿ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ. ಹೀಗಾಗಿ ಆಚಾರ್ಯ ಸೋಲಿನ ಎಫೆಕ್ಟ್ ನನ್ನ ಮೇಲಾಗಿಲ್ಲ. ನಾವು ಮುಂದಿನ ಪರೀಕ್ಷೆಗೆ ಬೇಗ ಸಿದ್ಧನಾಗಿದ್ದೆ’ ಎಂದಿದ್ದಾರೆ ಅವರು. ‘ದೇವರ’ ಸಿನಿಮಾ ಸೆಪ್ಟೆಂಬರ್ 27ರಂದು ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Recent Articles

spot_img

Related Stories

Share via
Copy link