ದೇವರಹೊಸಹಳ್ಳಿಯಲ್ಲಿ ಶ್ರೀ ಭದ್ರಕಾಳಮ್ಮ ಸಮೇತ ವೀರಭದ್ರಸ್ವಾಮಿಯ ಕಲ್ಯಾಣೋತ್ಸವ ಯಶಸ್ವಿ

 ಧಾರ್ಮಿಕ ವಿಧಿ-ವಿಧಾನಗಳಿಂದ ೫೦ ಕ್ಕೂ ಅಧಿಕ ಋತ್ವಿಕರ ತಂಡದಿಂದ ಕಾರ್ಯಕ್ರಮ

ದಾಬಸ್ ಪೇಟೆ:

     ಹಿಂದೂ ಧರ್ಮದಲ್ಲಿ ದೇವರು ಶ್ರದ್ಧಾ ಪೂರ್ವಕವಾಗಿ, ಭೂಮಿಯಲ್ಲಿ ಹಲವಾರು ರೂಪದಲ್ಲಿ ಕರುಣಿಸುತ್ತಾನೇ ಎಂಬ ಪ್ರತೀತಿ ಇದೆ, ಶ್ರೀ ವೀರಭದ್ರೇಶ್ವರ ಸ್ವಾಮಿ ಕಲ್ಯಾಣೋತ್ಸವ ವೈಯಕ್ತಿಕವಾಗಿ ಅತ್ಯಂತ ಹೆಚ್ಚು ಸಂತಸ ತಂದಿದೆ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.ಸೋಂಪುರ ಹೋಬಳಿಯ ದೇವರಹೊಸಹಳ್ಳಿ ಫ್ರೌಢ ಶಾಲಾ ಆವರಣದಲ್ಲಿ ಗುರುವಾರ ರಾತ್ರಿ ಅದ್ದೂರಿಯಾಗಿ ಶ್ರೀ ಭದ್ರಕಾಳಮ್ಮ ಸಮೇತ ವೀರಭದ್ರಸ್ವಾಮಿ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

    ಸಾಮಾನ್ಯವಾಗಿ ಶ್ರೀನಿವಾಸ ಕಲ್ಯಾಣ ನೋಡಿರುತ್ತೇವೆ, ಆದರೆ ದೇವರಹೊಸಹಳ್ಳಿ ಗ್ರಾಮದಲ್ಲಿ ಎರಡನೇ ಸಾರಿ ಶ್ರೀನಿವಾಸ ಕಲ್ಯಾಣದ ರೀತಿಯಲ್ಲೇ, ವೀರಭದ್ರ ಸ್ವಾಮಿಯ ಕಲ್ಯಾಣೋತ್ಸವ ಸಂಪನ್ನವಾಗಿದೆ, ಭಕ್ತಿ ಪೂರ್ವಕ ಕೈಂಕರ್ಯ ಸ್ವಾಮಿಯ ಆಶೀರ್ವಾದ ಇಡೀ ನೆಲಮಂಗಲ ಕ್ಷೇತ್ರದ ಜನತೆಗೆ ಈ ಕಲ್ಯಾಣದಿಂದ ಸಿಗಲಿದೆ, ಆಸ್ತಿಕನಾದ ನನಗಂತೂ ತುಂಬಾ ಸಂತೋಷವಾಗಿದೆ, ಪುರೋಹಿತರು ತಮ್ಮನ್ನು-ತಾವು ಈ ಕಾರ್ಯದಲ್ಲಿ ಅರ್ಪಿಸಿಕೊಂಡಿದ್ದಾರೇ, ನನ್ನ ಮನಸ್ಸು ಈ ಕಲ್ಯಾಣೋತ್ಸವದಿಂದ ಪ್ರಶಾಂತವಾಗಿದೆ, ರೈತರ ಬದುಕಲ್ಲಿ ಸಂತಸ ತಂದು ಕ್ಷೇತ್ರದಲ್ಲಿ ಮಳೆ-ಬೆಳೆ ಉತ್ತಮವಾಗಿ ಉಂಟಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.

    ಪ್ರಧಾನ ಅರ್ಚಕರಾದ ಜಗಜ್ಯೋತಿ ಬಸವೇಶ್ವರ ಮಾತನಾಡಿ, ಸ್ವಾಮಿಯ ಕಲ್ಯಾಣೋತ್ಸವವು ಶಾಸ್ತ್ರೋಕ್ತವಾಗಿ, ಗಣಪತಿ ಪೂಜೆ, ನವಗ್ರಹ ಪೂಜೆ, ಕಾಶೀ ಯಾತ್ರೆ, ಸಮನಮಾಲೆ, ಭಸ್ಮ ಸಂಪ್ರೋಕ್ಷಣೆ, ಫಲ ಪಂಚಾಮೃತ ಅಭಿಷೇಕ, ಮಾಂಗಲ್ಯಧಾರಣೆ,ಶಯನೋತ್ಸವ ಸೇರಿದಂತೆ ಹಲವಾರು ಧಾರ್ಮಿಕ ಕ್ರಮ ಜರುಗಿದವು ಸುಮಾರು ೬೦ ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರಾದ ಫಣಿಭೂಷಣ್, ಸತೀಶ್.ಡಿ.ಜೆ, ಚನ್ನಬಸವರಾಧ್ಯ, ಹರೀಶ್ ಆರಾಧ್ಯ, ಅಭಿಲಾಷ್, ಲೋಕೇಶ್ ಆರಾಧ್ಯ, ಸತೀಶ್ ಆರಾಧ್ಯ, ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ನಗರಸಭಾ ಸದಸ್ಯ ಪ್ರದೀಪ್, ಕೆ.ಕೆ.ಕೃಷ್ಣಪ್ಪ, ಎಂ.ಕೆ.ನಾಗರಾಜು, ಯೋಗಾನಂದೀಶ್, ವೆಂಕಟಾಚಲಯ್ಯ, ಪಾರ್ಥಣ್ಣ, ಕೆ.ಪಿ.ಭೃಂಗೇಶ್ ಇನ್ನೀತರರಿದ್ದರು.

    ” ದೇವರಹೊಸಹಳ್ಳಿಯ ಶ್ರೀ ಕ್ಷೇತ್ರ ಇತಿಹಾಸ ಪ್ರಸಿದ್ಧವಾದದ್ದು, ಗೂಳೂರು ಪ್ರಾಂತ್ಯಕ್ಕೆ ಒಳಪಟ್ಟ ಈ ದೇವಾಲಯದಲ್ಲಿ ಸ್ವಾಮಿಯ ಕಲ್ಯಾಣೋತ್ಸವ ಹೊಸ ಧಾರ್ಮಿಕ ಶಕ್ತಿಗೆ ಮುನ್ನುಡಿಯಾಗಿದೆ”-ಶ್ರೀ ಸಿದ್ದಲಿಂಗ ಸ್ವಾಮೀಜಿ, ಮಠಾಧ್ಯಕ್ಷರು ಸಿದ್ದಗಂಗಾ ಮಠ