ಗುಬ್ಬಿ:
ತುಮಕೂರು ಬೆಂಗಳೂರಿನ ಉಪನಗರವೆಂಬಂತೆ ವೇಗವಾಗಿ ಬೆಳೆಯುತ್ತಿದೆ ತುಮಕೂರು ಜಿಲ್ಲೆಯ ಪ್ರಮುಖ ತಾಲ್ಲೂಕುಗಳಲ್ಲಿ ಒಂದಾಗಿರುವ ಗುಬ್ಬಿಯಲ್ಲಿ ಈಗಾಗಲೇ ಹೆಚ್ ಎ ಎಲ್ ಘಟಕವನ್ನು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರಮೋದಿ ಯವರು ಲೋಕಾರ್ಪಣೆ ಮಾಡಿದ್ದಾರೆ. ಅವರ ದೂರದೃಷ್ಟಿಯಿಂದಾಗಿ ಈ ಭಾಗಕ್ಕೆ ಹೆಚ್ಚು ಅನುಕೂಲವಾಗುವ ಯೋಜನೆಗಳು ಇನ್ನು ಬರಲಿವೆ ಎಂದ ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ಬಡವರನ್ನು ಕಡೆಗಣಿಸಬೇಡಿ ಸರ್ಕಾರದ ಯೋಜನೆಗಳನ್ನು ನೇರವಾಗಿ ಪಲಾನುಭವಿಗಳಿಗೆ ತಲುಪಿಸಿ ನಾನು ಗೆದ್ದು 7 ತಿಂಗಳಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸ ಮಾಡುವ ಪ್ರಯತ್ನ ಮಾಡಿದ್ದೀನಿ. ಹೇಮಾವತಿ ಎಕ್ಸ್ ಪ್ರೆಸ್ ಚಾನಲ್ ವಿಷಯವನ್ನು ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಮತನಾಡಿದ್ದೇನೆ ಎಂದರು.
ಗುಬ್ಬಿ ತಾಲೂಕಿನ ಜಿ ಹೊಸಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ನೆಡೆದ ಜನ ಸಂಪರ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಬಾಗದ ವಿದ್ಯುತ್ ಸಮಸ್ಯೆ. ಸ್ಥಗಿತ ಗೊಂಡಿರುವ ಬಿಕ್ಕೆಗುಡ್ಡ ನೀರಾವರಿ ಯೋಜನೆ ಈಬಗ್ಗೆ ಆದಷ್ಟು ಬೇಗ ಪರಿಹರಿಸುವುದಾಗಿ ತಿಳಿಸಿದರು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸೂಕ್ಷ್ಮವಾಗಿ ಚಾಟಿ ಬೀಸಿದರು.ಈ ಸಂದರ್ಭದಲ್ಲಿ ವಿಶೇಷ ಚೇತನರಿಗೆ ಮೂರು ಚಕ್ರದ ವಾಹನಗಳನ್ನು ನೀಡಿದರು.
