ಬೆಂಗಳೂರು:

ರಾಜ್ಯ ಸರ್ಕಾರದ ಅಧೀನದಲ್ಲಿರು 38 ಇಲಾಖೆಗಳಲ್ಲಿ, 7.68 ಲಕ್ಷ ಮಂಜೂರಾದಂತ ಹುದ್ದೆಗಳಲ್ಲಿ, ಕೇವಲ ಭರ್ತಿ ಮಾಡಿಕೊಂಡಿರುವುದು ಮಾತ್ರ, ಕನಿಷ್ಠ ಮಟ್ಟದಲ್ಲಿ ಆಗಿದೆ. ಹಾಗಾದ್ರೇ.. ರಾಜ್ಯದಲ್ಲಿ ಈಗ ಎಷ್ಟು ಸರ್ಕಾರಿ ಹುದ್ದೆಗಳು ಖಾಲಿ ಇದ್ದಾವೆ.?
ರಾಜ್ಯ ಸರ್ಕಾರದ ಅಧೀನದಲ್ಲಿರುವ ಸರ್ಕಾರಿ ಇಲಾಖೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇದ್ದಾವೆ. ಆ ಹುದ್ದೆಗಳಲ್ಲಿ ಎಷ್ಟು ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಾಗಿದೆ ಎಂಬುದಾಗಿ ವಿಧಾನ ಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇಗೌಡ ಅವರು, ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ್ದರು.
SSLC’ ವಿದ್ಯಾರ್ಥಿಗಳೇ ಗಮನಿಸಿ : ನಿಮ್ಮ ಪೋಷಕರ ಫೋನ್ ಗೆ ಬರಲಿದೆ ಪರೀಕ್ಷಾ ಕೊಠಡಿಯ ಮಾಹಿತಿ!
ಈ ಪ್ರಶ್ನೆಗೆ ಉತ್ತರಿಸಿರುವಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯ ಸರ್ಕಾರದ ಅಧೀನದಲ್ಲಿ ಒಟ್ಟು 38 ಪ್ರಧಾನ ಇಲಾಖೆಗಳಿವೆ. ಆರ್ಥಿಕ ಇಲಾಖೆಯ ಮಾಹಿತಿಯನ್ವಯ ಈ ಇಲಾಖೆಗಳಲ್ಲಿ 2021-22ನೇ ಸಾಲಿನಲ್ಲಿರುವಂತೆ ಒಟ್ಟು 7,68,975 ಮುಂಜೂರಾದ ಹುದ್ದೆಗಳಿವೆ ಎಂದು ತಿಳಿಸಿದ್ದಾರೆ.
ಇನ್ನೂ ಹೀಗೆ ಮಂಜೂರಾದಂತ ಹುದ್ದೆಗಳಲ್ಲಿ 5,16,073 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಹೀಗಾಗಿ 2,52,902 ಹುದ್ದೆಗಳು ಖಾಲಿ ಇದ್ದಾವೆ. ಕೋವಿಡ್ 19ರ ಸಾಂಕ್ರಾಮಿಕ ಹಿನ್ನಲೆಯಲ್ಲಿ ಹುದ್ದೆಗಳನ್ನು ನಿರಂತರವಾಗಿ ಭರ್ತಿ ಮಾಡಲು ಸಾಧ್ಯವಾಗದ ಹಿನ್ನಲೆಯಲ್ಲಿ, ಖಾಲಿ ಹುದ್ದೆಗಳ ಸಂಖ್ಯೆಯು ಸ್ವಲ್ಪಮಟ್ಟಿಗೆ ಹೆಚ್ಚಾಗಿರುತ್ತದೆ. ಇದರಿಂದ ಹಾಲಿ ನೌಕರರ ಮೇಲೆ ಕಾರ್ಯದೊತ್ತಡ ಕೂಡ ಹೆಚ್ಚಾಗಿರುತ್ತದೆ ಎಂಬುದಾಗಿ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








