ದೊಡ್ಮನೆಯನ್ನು ಬಾಯ್ತುಂಬ ಹಾಡಿ ಹೊಗಳಿದ ಧ್ರುವ ಸರ್ಜಾ: ಕಾರಣ ಗೊತ್ತಾ…?

ಬೆಂಗಳೂರು :

    ದೊಡ್ಮನೆಯ ಬಗ್ಗೆ ಸ್ಯಾಂಡಲ್​ವುಡ್​ನಲ್ಲಿರುವ ಬಹುತೇಕರಿಗೆ ಗೌರವ ಇದೆ. ಅವರ ಬೆಂಬಲದಿಂದ ಅನೇಕರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ರಾಜ್​ಕುಮಾರ್ ಹಾಗೂ ಪಾರ್ವತಮ್ಮ ನೀಡಿದ ಅವಕಾಶದಿಂದ ಚಿತ್ರರಂಗದಲ್ಲಿ ನೆಲೆಕಂಡುಕೊಂಡ ಅನೇಕರು ಇದ್ದಾರೆ. ಅವರ ಅನೇಕರನ್ನು ಬೆಳೆಸಿದ್ದಾರೆ. ಶಿವಣ್ಣ ಕೂಡ ಇದನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಈಗ ‘ಮಾರ್ಟಿನ್ ಚಿತ್ರಕ್ಕಾಗಿ ಶಿವರಾಜ್​ಕುಮಾರ್ ಅವರು ‘ಭೈರತಿ ರಣಗಲ್’ ಚಿತ್ರದ ರಿಲೀಸ್​ನ ಒಂದು ತಿಂಗಳು ಮುಂದಕ್ಕೆ ಹಾಕಿಕೊಂಡಿದ್ದರು ಎನ್ನುವ ವಿಚಾರ ರಿವೀಲ್ ಆಗಿದೆ. ಈ ಬಗ್ಗೆ ಧ್ರುವ ಸರ್ಜಾ ಮಾತನಾಡಿದ್ದಾರೆ.

   ‘ಹಾರ್ಡ್​ವರ್ಕರ್, ಡ್ಯಾನ್ಸ್, ಆ್ಯಕ್ಷನ್ ಒಳ್ಳೆಯದಾಗಿ ಮಾಡ್ತಾರೆ. ಯಂಗ್​ಸ್ಟರ್ಸ್​ನಲ್ಲಿ ಧ್ರುವ, ಅಪ್ಪು ಒಳ್ಳೆಯ ಡ್ಯಾನ್ಸರ್ಸ್ ಅನ್ನೋ ಖುಷಿ ನನಗೆ ಇದೆ’ ಎಂದರು ಶಿವಣ್ಣ. ‘ಭೈರತಿ ರಣಗಲ್ ಅಕ್ಟೋಬರ್ 4ಕ್ಕೆ ರಿಲೀಸ್ ಆಗಬೇಕಿತ್ತು. ನಾನು ಕರೆ ಮಾಡಿ ಅಣ್ಣ ನಮ್ಮ ಸಿನಿಮಾಗೆ ಥಿಯೇಟರ್ ಸಮಸ್ಯೆ ಆಗುತ್ತದೆ ಎಂದೆ. ನಾನು ಕಾಲ್ ಮಾಡ್ತೀನಿ ಎಂದರು’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
   ನೀವು ನನ್ನ ಕುಟುಂಬ. ಒಂದು ತಿಂಗಳು ಮುಂದಕ್ಕೆ ಹೋಗುತ್ತೇವೆ. ನಿಮ್ಮ ಸಿನಿಮಾಗೆ ಒಳ್ಳೆಯದಾಗಲಿ ಎಂದರು. ನಾವು ಇಂಡಸ್ಟ್ರಿನ ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದುಕೊಳ್ಳುತ್ತೇವೆ. ಅವರು ಇಂಡಸ್ಟ್ರಿನ ಮೇಲಕ್ಕೆ ತೆಗೆದುಕೊಂಡು ಹೋಗಿ ಇಟ್ಟಿದ್ದಾರೆ. ಇದನ್ನು ನಾವು ಹತ್ತಿಕೊಂಡು ಹೋದರೆ ಸಾಕಾಗಿದೆ’ ಎಂದರು ಧ್ರುವ. ಆ ಬಳಿಕ ಶಿವಣ್ಣನ ಕಾಲಿಗೆ ಅವರು ನಮಸ್ಕರಿಸಿದರು.

Recent Articles

spot_img

Related Stories

Share via
Copy link
Powered by Social Snap