ಮುಂಬೈನಲ್ಲಿ I.N.D.I.A ಸಭೆ : ಈ ಬಾರಿಯ ಘೋಷ ವಾಕ್ಯವೇನು ಗೊತ್ತೇ…?

ಮುಂಬೈ: 

     ಮುಂಬೈನಲ್ಲಿ ಎರಡು ದಿನಗಳ ಪ್ರತಿಪಕ್ಷಗಳ ಸಭೆಯಲ್ಲಿ ‘ಬಿಜೆಪಿ ಚಲೇ ಜಾವೋ’ಗೆ INDIA ಕರೆ ನೀಡಲಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಸೋಮವಾರ ಹೇಳಿದ್ದಾರೆ.

    ಪ್ರತಿಪಕ್ಷಗಳ ಮೈತ್ರಿಕೂಟ, ಪ್ರಧಾನಿ ಹುದ್ದೆಗೆ ಅನೇಕ ಸಮರ್ಥ ಅಭ್ಯರ್ಥಿಗಳನ್ನು ಹೊಂದಿದೆ ಮತ್ತು ಪ್ರಸ್ತುತ ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ)ದಲ್ಲಿರುವ ಕೆಲವು ಪಕ್ಷಗಳು ಇಂಡಿಯಾಗೆ ಸೇರಬಹುದು ಎಂದು ಪಟೋಲೆ ಅವರು ತಿಳಿಸಿದ್ದಾರೆ.

    ಈಗ ಎರಡು ಡಜನ್‌ಗಿಂತಲೂ ಹೆಚ್ಚು ಪಕ್ಷಗಳನ್ನು ಹೊಂದಿರುವ ಬಿಜೆಪಿ ವಿರೋಧಿ ಬಣ ಇಂಡಿಯಾದ ಪ್ರಮುಖ ನಾಯಕರು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈ ಉಪನಗರದಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ಸಭೆ ನಡೆಸುತ್ತಿದ್ದು, ಇದು ಪ್ರತಿಪಕ್ಷಗಳ ಮೂರನೇ ಸಭೆಯಾಗಿದೆ.

    ಇಂದು ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಟೋಲೆ, ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅರ್ಧ ಡಜನ್ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

    ಸಭೆಯಲ್ಲಿ ಇಂಡಿಯಾ ಮೈತ್ರಿಕೂಟದ ಲಾಂಛನವನ್ನು ಅನಾವರಣಗೊಳಿಸಲಾಗುವುದು ಮತ್ತು 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ತಮ್ಮ ಕಾರ್ಯಸೂಚಿಯನ್ನು ಪ್ರತಿಪಕ್ಷ ನಾಯಕರು ಚರ್ಚಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link