ಚಿಕ್ಕಬಳ್ಳಾಪುರ
ಕರ್ನಾಟಕ ವಿಧಾನ ಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಅಭ್ಯರ್ಥಿಗಳು ನೀಡುವ ಉಡುಗೊರೆಗಳಿಗೆ ಮರುಳಾಗಬೇಡಿ ಎಂದು ಕೆ.ಪಿ.ಬಚ್ಚೇಗೌಡ ಹೇಳಿದ್ದಾರೆ.
ಸಚಿವ ಡಾ.ಕೆ.ಸುಧಾಕರ್ ನೀಡುವ ಸೀರೆ, ಕುಕ್ಕರ್, ಮಿಕ್ಸಿ, ಸ್ಟೌವ್‍ಗಳಿಗೆ ಮತದಾರರು ಮರಳಾಗಬೇಡಿ. ಅವರು ಮತ ಪಡೆಯುವ ಉದ್ದೇಶದಿಂದ ಈ ತಂತ್ರಗಾರಿಕೆಯನ್ನು ಬಳಸಿ ಜನತೆಗೆ ಮಂಕು ಬೂದಿ ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಚಿಕ್ಕಬಳ್ಳಾಪುರದಲ್ಲಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೀರೆ, ಕುಕ್ಕರ್, ಮಿಕ್ಸಿ, ಸ್ಟೌವ್ ಯಾವುದು ಶಾಶತ್ವವಲ್ಲ. ಇದು ಮತ ಪಡೆಯುವ ಗಿಮಿಕ್ ಅಷ್ಟೇ. ಹೀಗಾಗಿ ಮತದಾರರು ಈಗಲೇ ಎಚ್ಚೇತ್ತುಕೊಂಡು ಮುಂಬರುವ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.