ಉತ್ತರ ಪ್ರದೇಶ:
ವರದಕ್ಷಿಣೆ ನೀಡದಿದ್ದಕ್ಕೆ ಪತ್ನಿಯನ್ನು ಹಿಂಸಿಸಿ ಕೊಂದ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಪತಿ ಸುರ್ಜೀತ್ ತನ್ನ ಹೆಂಡತಿ ರೇಷ್ಮಾ(28) ಳನ್ನು ಭೀಕರವಾಗಿ ಕೊಂದು ಹಾಕಿದ್ದಾನೆ. ಪತ್ನಿಯ ಕೈ ಕಾಲುಗಳನ್ನು ಹಗ್ಗದಿಂದ ಬಿಗಿದು ಆಕೆಯ ಖಾಸಗಿ ಅಂಗಕ್ಕೆ ಲಟ್ಟಣಿಗೆ ತುರುಕಿ ಹಿಂಸಿಸಿ ಕೊಂದಿರುವುದಾಗಿ ವರದಿಯಾಗಿದೆ. ಈ ಪ್ರಕರಣ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಮರಣೋತ್ತರ ಪರೀಕ್ಷೆಯ ವೇಳೆ ಮಹಿಳೆಯ ಇಡೀ ದೇಹದ ಮೇಲೆ ಗಾಯಗಳ ಗುರುತುಗಳು ಪತ್ತೆಯಾಗಿದ್ದು, ಇದಲ್ಲದೇ ಆಕೆಯ ಮರ್ಮಾಂಗದೊಳಗೆ ವಸ್ತುವಿರುವುದು ಕಂಡುಬಂದಿದೆ. ಬಳಿಕ ಹೊರತೆಗೆದಾಗ ಚಪಾತಿ ಮಾಡುವ ಲಟ್ಟಣಿಗೆಯನ್ನು ತುರುಕಿ ಹಿಂಸಿಸಿರುವುದು ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಲಟ್ಟಣಿಗೆ ಮಹಿಳೆಯ ಕರುಳಿನವರೆಗೂ ತಲುಪಿ ಹಾನಿಗೊಳಿಸಿದ್ದರಿಂದ ಆಕೆ ಸಾವನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ.
ರೇಷ್ಮಾ ಮತ್ತು ಸುರ್ಜೀತ್ ಮದುವೆಯಾಗಿ ಒಂದು ದಶಕವಾಗಿತ್ತು ಮತ್ತು ಸುರ್ಜೀತ್‌ನ ಕುಡಿತದ ಚಟದಿಂದಾಗಿ ದಂಪತಿಯ ನಡುವೆ ಪತೀ ದಿನ ಜಗಳಗಳು ನಡೆಯುತ್ತಿದ್ದವು. ಇದಲ್ಲದೇ ತವರು ಮನೆಯಿಂದ ವರದಕ್ಷಿಣೆಯನ್ನು ತರುವಂತೆ ಆಕೆಯ ಕಿರುಕುಳ ನೀಡುತ್ತಿದ್ದ. ಇದೀಗ ಈ ಹಿಂಸಾತ್ಮಕನ ಕೊಲೆಯನ್ನು ಸುರ್ಜೀತ್ನ ಸಹೋದರನೂ ಕೂಡ ಭಾಗಿಯಾಗಿರುವುದು ಪೊಲೀಸ್ ತನಿಖೆಯ ವೇಳೆ ತಿಳಿದುಬಂದಿದೆ. ಇದೀಗ ಆಕೆಯ ಸುರ್ಜೀತ್ನನ್ನು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಸುರ್ಜೀತ್ನ ಸಹೋದರನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.