ಜಾನಪದ ವಿದ್ವಾಂಸೆ ಡಾ.ಶಾಂತಿ ನಾಯಕ ನಿಧನ

ಹೊನ್ನಾವರ:

    ಪ್ರಸಿದ್ಧ ಜಾನಪದ ವಿದ್ವಾಂಸರು, ಕರ್ಕಿ ಚನ್ನಕೇಶವ ಪೌಢ ಶಾಲೆಯ ನಿವೃತ್ತ ಮುಖ್ಯೊಧ್ಯಾಪಕಿ ಹೊನ್ನಾವರದ ಶ್ರೀಮತಿ ಶಾಂತಿ ನಾಯಕ ಶುಕ್ರವಾರ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

    1943ರಲ್ಲಿ ಅಂಕೋಲಾ ಬೇಲೆಕೇರಿಯಲ್ಲಿ ಜನಿಸಿದ ‌ ಶಾಂತಿ ನಾಯಕ ಬಿ.ಎಡ್, ಎಂ.ಎ. ಅಧ್ಯಯನ ಮಾಡಿದ ಶಾಂತಿ ನಾಯಕ ಅವರು ಹಿರಿಯ ಜಾನಪದ ವಿದ್ವಾಂಸ ಡಾ.ಎನ್. ಆರ್. ನಾಯಕ ಇವರನ್ನು ವಿವಾಹವಾಗಿ ಹೊನ್ನಾವರಕ್ಕೆ ಬಂದರು.‌ ಕರ್ಕಿಯ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಸೇವೆ ಆರಂಭಿಸಿ ಮುಖ್ಯಾಧ್ಯಾಪಕಿಯಾಗಿ ನಿವೃತ್ತಿ ಹೊಂದಿದ್ದಾರೆ. 1960ರಿಂದ ಈವರೆಗೆ 60 ವರ್ಷಗಳಿಂದ ತಮ್ಮ ಬಿಡುವಿನಲ್ಲಿ ಜಾನಪದ ಕ್ಷೇತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

    2001ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯೆಯಾಗಿ, 2003ರಿಂದ ಜಾನಪದ ಪರಿಷತ್ತಿನ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದಾರೆ. 1982ರಲ್ಲಿ ಡಾ. ಎನ್.ಆರ್.ನಾಯಕ ಜೊತೆ ಜಾನಪದ ಪ್ರಕಾಶನ ಸಂಸ್ಥೆ ಸ್ಥಾಪಿಸಿ, ಜನಪದ ಸಸ್ಯ, ಜನಪದ ಔಷದ ಸಸ್ಯ, ಜಾನಪದ ಆಹಾರ ಮೊದಲಾದ ವಿಷಯಗಳಲ್ಲಿ 50ಕ್ಕೂ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಗೊಟಗೋಡಿಯ ಜನಪದ ವಿಶ್ವವಿದ್ಯಾಲಯ ಸ್ಥಾಪಕ ಸದಸ್ಯರಾಗಿದ್ದ ಇವರು ಅದರ ಬೆಳವಣಿಗೆಗೆ ತುಂಬಾ ಕೊಡುಗೆಯನ್ನು ನೀಡಿದ್ದಾರೆ.

Recent Articles

spot_img

Related Stories

Share via
Copy link