ಹಾಸನ ಜಿಲ್ಲೆಯಲ್ಲಿ ಕಾರ್ಮಿಕರ ಕೊರತೆ ಉದ್ಭವಿಸಿದೆ. ಹೀಗಾಗಿ, ಕೆಲ ಏಜೆಂಟ್ರು ಬಾಂಗ್ಲಾದೇಶದ ಜನರನ್ನು ಕರೆತಂದು, ಇಲ್ಲಿ, ಅವರ ಹೆಸರಿನಲ್ಲಿ ಆಸ್ಸಾಂ ರಾಜ್ಯದ ನಿವಾಸಿ ಅಂತ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದ್ದಾರೆ. 5 ರಿಂದ 10 ಸಾವಿರ ಹಣ ಪಡೆದು ನಕಲಿ ಆಧಾರ್ ಕಾರ್ಡ್ ಸೃಷ್ಟಿ ಮಾಡುತ್ತಿರುದ್ದಾರೆ. ಈ ನಕಲಿ ಆಧಾರ್ ಕಾರ್ಡ್ಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲೇ ವಿತರಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ನಕಲಿ ದಾಖಲೆ ಮೂಲಕ ಅಕ್ರಮವಾಗಿ ವಲಸಿಗರು ಬರುತ್ತಿರುವ ಬಗ್ಗೆ ಬೆಂಗಳೂರು ವಿಭಾಗದ ಆಧಾರ್ ವಿತರಣೆ ಸಂಸ್ಥೆ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಈ ಸಂಬಂಧ ಅಧಿಕಾರಿಗಳು ಪರಿಶೀಲನೆಗೆ ಇಳಿದರು. ಪರಿಶೀಲನೆ ವೇಳೆ ಒಂದೇ ದಾಖಲೆ ಬಳಸಿ ದಿನಾಂಕ, ಹೆಸರು ತಿದ್ದಿ ಹತ್ತಾರು ಆಧಾರ್ ಕಾರ್ಡ್ ವಿತರಣೆ ಮಾಡಲಾಗಿದೆ. ಆದಾರ್ ಕಾರ್ಡ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಯಾವುದೇ ಮಾಹಿತಿ ದೊರೆಯದಿದ್ದಾಗ ಅನುಮಾನ ಗಾಢವಾಗಿದೆ. ಗಂಡು, ಹೆಣ್ಣು ಕಲಂನಲ್ಲೂ ತಪ್ಪು ಮಾಹಿತಿಗಳು ನಮೂದಿಸಿರುವುದು ಬಯಲಾಗಿದೆ.
ಅಧಿಕಾರಿಗಳು ಹಾಸನದ ಜಿಲ್ಲಾಧಿಕಾರಿ ಕಚೇರಿಯ ಆಧಾರ್ ಕೇಂದ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿ ಅನುಶ್ರಿ ಎಂಬುವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.