ಬೆಂಗಳೂರು
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೊಸತಾಗಿ 7000 ಬಸ್ಸುಗಳನ್ನು ಖರೀದಿಸಲಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.ಇಂದಿಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು,ಈ ಪೈಕಿ ಕೆಎಸ್‍ಆರ್‍ಟಿಸಿಗೆ ನಾಲ್ಕು ಸಾವಿರ ಮತ್ತು ಬಿಎಂಟಿಸಿಗೆ ಮೂರು ಸಾವಿರ ಬಸ್ಸುಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಸಾರಿಗೆ ಇಲಾಖೆಯ ಬಹುತೇಕ ಬಸ್ಸುಗಳು ಹಳತಾಗಿದ್ದು ಈ ಹಿನ್ನೆಲೆಯಲ್ಲಿ ಅವನ್ನು ಬದಲಿಸಬೇಕಾದ ಅಗತ್ಯವಿದೆ ಎಂದ ಅವರು,ಬಿಎಂಟಿಸಿಗೆ ಬಸ್ಸುಗಳನ್ನು ಖರೀದಿಸಲು ಹಸಿರು ನ್ಯಾಯಪೀಠ ತಕರಾರು ಎತ್ತಿದೆ.ಪರಿಸರ ಮಾಲಿನ್ಯದ ಹಿನ್ನೆಲೆಯಲ್ಲಿ ಬಿಎಂಟಿಸಿಗೆ ಹೊಸ ಬಸ್ಸುಗಳನ್ನು ಖರೀದಿಸದಂತೆ ಸೂಚಿಸಿದೆ.
ಆದರೆ ರಾಜಧಾನಿಯಲ್ಲಿ ಬಿಎಂಟಿಸಿಯ ಐದೂವರೆ ಸಾವಿರ ಬಸ್ಸುಗಳು ಮಾತ್ರವಲ್ಲ,ಇದಕ್ಕಿಂತ ಹಲವು ಪಟ್ಟು ಖಾಸಗಿ ವಾಹನಗಳು ಓಡಾಡುತ್ತಿವೆ.ಇವುಗಳಿಂದ ಪರಿಸರ ಮಾಲಿನ್ಯವಾಗುವುದಿಲ್ಲವೇ?ಎಂದು ಪೀಠಕ್ಕೆ ಮನವರಿಕೆ ಮಾಡಿಕೊಡಲು ನಿರ್ಧರಿಸಲಾಗಿದ್ದು ಅದರ ಆದೇಶವನ್ನು ಕಾಯ್ದಿರಿಸಿದಂತೆಯೇ ಬಸ್ಸುಗಳನ್ನು ಖರೀದಿಸಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ