ಜನವರಿ 07 ಭಾರತೀಯರಿಗೆ ಶೀಘ್ರದಲ್ಲೇ ಮೈಕ್ರೋ ಚಿಪ್ ಹೊಂದಿರುವ ಇ-ಪಾಸ್‌ಪೋರ್ಟ್ ಲಭ್ಯವಾಗಲಿದೆ ಎಂದು ವಿದೇಶಾಂಗ ಸಚಿವಾಲಯವು ಘೋಷಣೆ ಮಾಡಿದೆ.
ಈ ಇ ಪಾಸ್‌ಪೋರ್ಟ್ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣ ಮಾಡುವವರಿಗೆ, ವಲಸಿಗರಿಗೆ ಎಲ್ಲಾ ನಾಗರಿಕರು ಲಭ್ಯವಾಗಲಿದೆ ಎಂದು ಕೂಡಾ ಸಚಿವಾಲಯ ಮಾಹಿತಿ ನೀಡಿದೆ.
ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಭಟ್ಟಾಚಾರ್ಯ ಈ ಬಗ್ಗೆ ಟ್ವಿಟ್ಟರ್ ಮೂಲಕ ಘೋಷಣೆ ಮಾಡಿದ್ದಾರೆ.
“ಈ ಹೊಸ ಇ-ಪಾಸ್‌ಪೋರ್ಟ್ ಹೊಸ ಹೊಸ ಫೀಚರ್‌ಗಳನ್ನು ಹೊಂದಿದೆ. ಇದರಲ್ಲಿ ಮೈಕ್ರೋಚಿಪ್ ಇರಲಿದೆ. ಇದು ಪಾಸ್‌ಪೋರ್ಟ್‌ದಾರರ ಬಯೊಮೆಟ್ರಿಕ್ ಡೇಟಾ, ಭದ್ರತೆಯ ವಿಚಾರಗಳು ಇರಲಿದೆ. ಇನ್ನು ಈ ಇ-ಪಾಸ್‌ಪೋರ್ಟ್‌ಅನ್ನು ನಾಸಿಕ್‌ನ ಇಂಡಿಯಾ ಸೆಕ್ಯೂರಿಟಿ ಪ್ರೆಸ್‌ನಲ್ಲಿ ತಯಾರಿ ಮಾಡಲಾಗುತ್ತದೆ.
ಮಾಧ್ಯಮಗಳ ವರದಿಯ ಪ್ರಕಾರ, ಇ ಪಾಸ್‌ಪೋರ್ಟ್‌ನಲ್ಲಿ ಚಿಪ್ ಇರಲಿದ್ದು ಈ ಚಿಪ್‌ನಲ್ಲಿ ಆ ಪಾಸ್‌ಪೋರ್ಟ್‌ದಾರರ ವಿವರಗಳು ಇರಲಿದೆ.
ಪಾಸ್‌ಪೋರ್ಟ್‌ದಾರರ ಫೋಟೋ, ಬೆರಳಚ್ಚು, ಸಹಿ, ವಿಳಾದ, ಹೆಸರು ಇತ್ಯಾದಿ ಡೇಟಾಗಳು ಇರಲಿದೆ. ಹೀಗಾಗಿ ಅನಧಿಕೃತವಾಗಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಮೂಲಕ ಡೇಟಾವನ್ನು ವರ್ಗಾವಣೆ ಮಾಡುವುದು ಸಾಧ್ಯವಿಲ್ಲ.
ಇ ಪಾಸ್‌ಪೋರ್ಟ್ ಉಪಯೋಗಗಳು ಏನು?
ಇ ಪಾಸ್‌ಪೋರ್ಟ್ ಪ್ರಯಾಣ ವ್ಯವಸ್ಥೆಯನ್ನು ಇನ್ನಷ್ಟು ಸರಳ ಮಾಡಲಿದೆ. ಇನ್ನು ಇ ಪಾಸ್‌ಪೋರ್ಟ್ ಅನ್ನು ಬಿಡುಗಡೆ ಮಾಡುವ ಬಗ್ಗೆ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಭಟ್ಟಾಚಾರ್ಯ,
“ಭಾರತದ ನಾಗರಿಕರಿಗೆ ಮುಂದಿನ ಪೀಳಿಗೆಗೆ ತಕ್ಕುದಾದ ಇ ಪಾಸ್‌ಪೋರ್ಟ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಇದು ಬಯೋಮೆಟ್ರಿಕ್ ಡೇಟಾವನ್ನು ಸುರಕ್ಷತೆ ಮಾಡಲಿದೆ.
ಜಾಗತಿಕವಾಗಿ ಸುಲಭವಾಗಿ ಪ್ರಯಾಣ ಮಾಡಲು ಇದು ಸಹಕಾರಿ ಆಗಲಿದೆ. ಇದನ್ನು ನಾಸಿಕ್‌ನ ಇಂಡಿಯಾ ಸೆಕ್ಯೂರಿಟಿ ಪ್ರೆಸ್‌ನಲ್ಲಿ ತಯಾರಿ ಮಾಡಲಾಗುತ್ತದೆ,” ಎಂದು ತಿಳಿಸಿದ್ದಾರೆ.
ಮೊದಲು ಅಧಿಕಾರಿಗಳಿಗೆ, ರಾಜತಾಂತ್ರಕರಿಗೆ ಇ ಪಾಸ್‌ಪೋರ್ಟ್
ಪ್ರಸ್ತುತ ಪಾಸ್‌ಪೋರ್ಟ್ ಮುದ್ರಿತ ಪುಸ್ತಕದ ರೂಪದಲ್ಲಿ ಇದೆ. ಕೇಂದ್ರ ಸರ್ಕಾರವು ಆರಂಭಿಕ ಹಂತದಲ್ಲಿ ಸುಮಾರು 20,000 ಅಧಿಕಾರಿಗಳು ಹಾಗೂ ರಾಜತಾಂತ್ರಕರಿಗೆ ಇ ಪಾಸ್‌ಪೋರ್ಟ್ ಅನ್ನು ವಿತರಣೆ ಮಾಡಲಿದೆ. ಉಳಿದವರು ಈ ಸಂದರ್ಭದಲ್ಲಿ ಮುದ್ರಿತ ಪಾಸ್‌ಪೋರ್ಟ್‌ಗಳನ್ನೇ ಎಂದಿನಂತೆ ಬಳಕೆ ಮಾಡಬಹುದು.
ಆರಂಭಿಕ ಹಂತದಲ್ಲಿ ಇ ಪಾಸ್‌ಪೋರ್ಟ್ ಯಶಸ್ವಿಯಾದರೆ ಬಳಿಕ ನಾಗರಿಕರಿಗೂ ಕೂಡಾ ಈ ಹೊಸ ಇ ಪಾಸ್‌ಪೋರ್ಟ್ ಅನ್ನು ವಿತರಣೆ ಮಾಡಲಾಗುತ್ತದೆ. ಈ ಮೂಲಕ ಪಾಸ್‌ಪೋರ್ಟ್ ವ್ಯವಸ್ಥೆಯನ್ನು ಸರಳೀಕರಣ ಮಾಡಲಾಗುತ್ತದೆ.
ಇ ಪಾಸ್‌ಪೋರ್ಟ್ ನಾಶ ಸುಲಭವಿಲ್ಲ
ಇ ಪಾಸ್‌ಪೋರ್ಟ್‌ಗಳು ಇಂಟರ್‌ನ್ಯಾಷನಲ್ ಸಿವಿಲ್ ಏವಿಯೇಷನ್ ಆರ್ಗನೈಸೇಶನ್‌ನ (ಐಸಿಎಒ) ಮಾನದಂಡವನ್ನು ಪೂರೈಕೆ ಮಾಡುತ್ತಿದ್ದು, ಇದನ್ನು ನಾಶ ಮಾಡಲು ಸುಲಭವಿಲ್ಲ. ಭಾರತದಲ್ಲಿ ವಿದೇಶಾಂಗ ವ್ಯವಹಾರ ಇಲಾಖೆಯ ಅಡಿಯಲ್ಲಿ ಬರುವ ಎಲ್ಲ 36 ಪಾಸ್‌ಪೋರ್ಟ್ ಕಚೇರಿಗಳು ಇ ಪಾಸ್‌ಪೋರ್ಟ್ ಅನ್ನು ವಿತರಣೆ ಮಾಡಲಿದೆ.
ದೇಶದಲ್ಲಿ ಪ್ರಸ್ತುತ 93 ಪಾಸ್‌ಪೋರ್ಟ್ ಕೇಂದ್ರಗಳು, 36 ಪಾಸ್‌ಪೋರ್ಟ್ ಕಚೇರಿಗಳು, 426 ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಸೇರಿದಂತೆ ಒಟ್ಟು 555 ಪಾಸ್‌ಪೋರ್ಟ್ ಕೇಂದ್ರಗಳು ಇದೆ. ಈ ಕೇಂದ್ರಗಳಲ್ಲಿಯೇ ಇ ಪಾಸ್‌ಪೋರ್ಟ್ ಲಭ್ಯವಾಗಲಿದೆ ಎಂದು ಮಾಧ್ಯಮಗಳ ವರದಿಯು ಉಲ್ಲೇಖ ಮಾಡಿದೆ.
ಇ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?
ಇನ್ನು ಇದಕ್ಕೆ ಅರ್ಜಿ ಸಲ್ಲಿಸುವ ವಿಧಾನವು ಸರ್ಕಾರದ ವೆಬ್‌ಸೈಟ್ ಮೂಲಕ ಪಾಸ್‌ಪೋರ್ಟ್‌ಗೆ ಯಾವ ರೀತಿಯಲ್ಲಿ ಅರ್ಜಿ ಸಲ್ಲಿಕೆ ಮಾಡುತ್ತೇವೆ ಅದೇ ರೀತಿಯಲ್ಲಿ ಇರಲಿದೆ. ನೀವು ಸರ್ಕಾರದ ಪಾಸ್‌ಪೋರ್ಟ್ ವೆಬ್‌ಸೈಟ್https://www.passportindia.gov.in/AppOnlineProject/welcomeLinkಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ದಾಖಲೆ ಪ್ರಮಾಣಿಕರಣ ಮಾಡಲು ನೋಂದಣಿಗಾಗಿ ನೀವು ನಿಮ್ಮ ಲೋಕೇಷನ್ ಹಾಗೂ ದಿನಾಂಕವನ್ನು ಗೊತ್ತು ಮಾಡಬೇಕಾಗಿದೆ. ಉಳಿದಂತೆ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡುವ ಎಲ್ಲಾ ವಿಧಾನಗಳು ಹಾಗೆಯೇ ಇದೆ.