ಹಾಸ್ಟಲ್‌ ಗೆ ಅಕ್ರಮ ಪ್ರವೇಶ :ಯುವಕನ ವಿರುದ್ಧ ಪೋಕ್ಸ್‌ ಅಡಿ FIR ದಾಖಲು

ಕೊಚ್ಚಿ:

      ಹಾಸ್ಟೆಲ್​ ಒಳಗಡೆ ಅತಿಕ್ರಮ ಪ್ರವೇಶ ಮಾಡಿ ಹುಡುಗಿಯರ ಜತೆ ಮಲಗಲು ಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ತೋಡಪುಳದಲ್ಲಿ ನಡೆದಿದೆ.ಬಂಧಿತ ಯುವಕನನ್ನು 23 ವರ್ಷದ ಅಖಿಲ್​ ಎಂದು ಗುರುತಿಸಲಾಗಿದೆ.ಈತ ಅರಕ್ಕುಲಂ ಗ್ರಾಮದ ನಿವಾಸಿ. ಬುಡಕಟ್ಟು ಹುಡುಗಿಯರ ವಸತಿ ನಿಲಯದಲ್ಲಿ ಜೂನ್​ 15ರ ಬೆಳಗಿನ ಜಾವ ಈ ಘಟನೆ ನಡೆದಿದೆ.

     ಹಾಸ್ಟೆಲ್​ ಪ್ರವೇಶಿಸಿ ಅಖಿಲ್​, ಹುಡುಗಿಯರ ಪಕ್ಕದಲ್ಲಿ ಹೋಗಿ ಮಲಗಲು ಯತ್ನಿಸಿದ್ದಾನೆ. ಈ ವೇಳೆ ಆತನನ್ನು ನೋಡಿದ ಹುಡುಗಿಯರು ಗಾಬರಿಗೆ ಒಳಗಾಗಿ ಜೋರಾಗಿ ಕಿರುಚಿಕೊಂಡಿದ್ದಾರೆ. ಇದರಿಂದ ಭಯಗೊಂಡ ಅಖಿಲ್​ ಅಲ್ಲಿಂದ ಪರಾರಿಯಾಗಿದ್ದ.

     ಪ್ರಕರಣ ದಾಖಲಾದ ಬಳಿಕ ಸಿಸಿಟಿವಿ ದೃಶ್ಯಾವಳಿ ನೆರವಿನೊಂದಿಗೆ ಆರೋಪಿ ಅಖಿಲ್​ನನ್ನು ಕಂಜಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಖಿಲ್​ ಓರ್ವ ಬಸ್​ ಕ್ಲೀನರ್​ ಆಗಿ ಕೆಲಸ ಮಾಡುತ್ತಿದ್ದ. ಪೂಮಲಾ-ಮುವಾಟ್ಟುಪುಳ ಮಾರ್ಗವಾಗಿ ಸಂಚರಿಸುವ ಬಸ್‌ನ ಕ್ಲೀನರ್. ವರದಿಗಳ ಪ್ರಕಾರ ಈತ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap