ಗಣೇಶೋತ್ಸವ : ಬೆಂಗಳೂರಿನ ಹಲವೆಡೆ ಸಂಚಾರ ನಿಷೇಧ , ಮಾರ್ಗ ಬದಲು : ಎಲ್ಲೆಲ್ಲಿ ಗೊತ್ತಾ…?

ಬೆಂಗಳೂರು: 

    ಸಾರ್ವಜನಿಕ ಗಣೇಶ ಮೆರವಣಿಗೆ, ವಿಸರ್ಜನೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಕೆಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಸಂಚಾರ ನಿರ್ಬಂಧ, ವಾಹನ ನಿಲುಗಡೆ ನಿಷೇಧಿಸಿ ಬೆಂಗಳೂರು ನಗರ ಸಂಚಾರ ಪೊಲೀಸರು ಮಾರ್ಗಸೂಚಿ ಹೊರಡಿಸಿದ್ದಾರೆ.

    ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಹಲಸೂರು ಲೇಕ್​ ಕಲ್ಯಾಣಿಯಲ್ಲಿ ನಾಳೆಯಿಂದ 9ರವರೆಗೆ ಬೆಂಗಳೂರು ನಗರದ ವಿವಿಧ ಪ್ರದೇಶಗಳ ಸುಮಾರು 40 ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗುತ್ತದೆ. ಕೆರೆಯ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗುತ್ತದೆ. ವಾಹನ ಸವಾರರ ಸುಗಮ ಸಂಚಾರಕ್ಕಾಗಿ ಸಂಜೆ 4 ಗಂಟೆಯಿಂದ ಮರುದಿನ ಬೆಳಗಿನ ಜಾವ 4 ಗಂಟೆಯವರೆಗೆ ಸಂಚಾರ ನಿರ್ಬಂಧಿಸಲಾಗಿದೆ.

   ಕೆನ್ಸಿಂಗ್‌ಟನ್-ಮರ್ಫೀ ರಸ್ತೆ ಜಂಕ್ಷನ್ ಕಡೆಯಿಂದ ಎಂ.ಇ.ಜಿ ಮೂಲಕ-ಹಲಸೂರು ಲೇಕ್ ಕಡೆಗೆ ಕೆನ್ಸಿಂಗ್‌ಟನ್ ರಸ್ತೆಯಲ್ಲಿ ದ್ವಿಮುಖ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಕೇವಲ ಎಂಇಜಿ ಕಡೆಯಿಂದ ಕನ್ನಿಂಗ್‌ಟನ್-ಮರ್ಫೀ ರಸ್ತೆ ಜಂಕ್ಷನ್ ಕಡೆಗೆ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

   ತಿರುವಳ್ಳವರ್ ಪ್ರತಿಮೆ ಜಂಕ್ಷನ್-ಅಣ್ಯಸ್ವಾಮಿ ಮೊದಲಿಯಾರ್ ರಸ್ತೆ ಕಡೆಯಿಂದ ಆರ್.ಬಿ.ಐ ಜಂಕ್ಷನ್ ಮುಖಾಂತರ ಹಲಸೂರು ಲೇಕ್ ಕಡೆಗೆ ಅಣಸ್ವಾಮಿ ಮೊದಲಿಯಳ ರಸ್ತೆಯಲ್ಲಿ, ದ್ವಿಮುಖ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಕಣ್ಮು ಹಲಸೂರು ಲೇಕ್ ಕಡೆಯಿಂದ ತಿರುವಳ್ಳವರ್ ಪ್ರತಿಮೆ ಜಂಕ್ಷನ್ ಕಡೆಗೆ ವಿಕಮುಖ ಸಂಚಾರಕ್ಕೆ, ಅನುವು ಮಾಡಿಕೊಡಲಾಗಿದೆ.

   ಕೆನ್ಸಿಂಗ್‌ಟನ್ ರಸ್ತೆ ಕಡೆಯಿಂದ ಎಂ.ಇ.ಜಿ ಮೂಲಕ-ಹಲಸೂರು ಲೇಕ್ ಕಡೆಗೆ ಹೋಗುವ ವಾಹನಗಳ ಮಾರ್ಗ ಬದಲಾವಣೆ ಮಾಡಿ ಕೆನ್ಸಿಂಗ್‌ಟನ್ ನಿಂದ ಗುರದ್ವಾರ ಜಂಕ್ಷನ್ ಬಲ ತಿರುವು- ಗಂಗಾಧರ ಚಿಟ್ಟೆ ರಸ್ತೆ ಡಿಕನ್ಸನ್ ರಸ್ತೆ ಬಲ ತಿರುವು- ಸೆಂಟ್ ಜಾನ್ಸ್ ರಸ್ತೆ – ಶ್ರೀ ಸರ್ಕಲ್ ಲಾವಣ್ಯ ಥಿಯೇಟರ್ ಜಂಕ್ಷನ್- ನಾಗಾ ಜಂಕ್ಷನ್ ಮುಖಾಂತರ ಪುಲಕೇಶಿನಗರ – ಪ್ರಾಮಿನೇಡ್ ರಸ್ತೆ-ವೀರ ರಸ್ತೆ ಅಥವಾ ಹಲಸೂರು ಕೆರೆ ಕಡೆಗೆ ಹೊಗಬಹುದು.

   ತಿರುವಳ್ಳವರ್ ಪ್ರತಿಮೆ ಜಂಕ್ಷನ್-ಅಣಸ್ವಾಮಿ ಮೊದಾಲಿಯರ್ ರಸ್ತೆ ಕಡೆಯಿಂದ ಹಲಸೂರು ಲೇಕ್ ಕಡೆಗೆ ಹೋಗುವ ವಾಹನಗಳ ಮಾರ್ಗ ಬದಲಾವಣೆ ಮಾಡಿ ಗಂಗಾಧರ್ ಚೆಟ್ಟಿ ರಸ್ತೆಯ ಮುಖಾಂತರ ಆರ್.ಬಿ.ಎನ್.ಎಮ್.ಎಸ್ ಹತ್ತಿರ ಎಡತಿರುವು ಪಡೆದು ಡಿಕೆ ರಸ್ತೆಯ ಮುಖಾಂತರ ಸೆಂಟ್ ಜಾನ್ಸ್ ರಸ್ತೆ ತಲುಪಿ ಸೆಂಟ್ ಚಾನ್ಸ್ ರಸ್ತೆ – ಶ್ರೀ ಸರ್ಕಲ್ – ಲಾವಣ್ಯ ಥಿಯೇಟ‌ರ್ ಜಂಕ್ಷನ್- ನಾಗಾ ಜಂಕ್ಷನ್ ಮುಖಾಂತರ ಪುಲಕೇಶಿನಗರ ಮಿಲ್ಲರೆ ರಸ್ತೆ ಕಡೆಗೆ ಅಥವಾ ಹಲಸೂರು ಕೆರೆ ಕಡೆಗೆ ಹೋಗಬಹುದು. 

   ಹಲಸೂರು ಕೆರೆಯ ಮುಖ್ಯದ್ವಾರ ಮತ್ತು ಸುತ್ತಲೂ ಇರುವ ಕೆನ್ಸಿಂಗ್‌ಟನ್ ರಸ್ತೆ-ಅಣ್ಣಸ್ವಾಮಿ ಮೊದಲಿಯಾರ್ ರಸ್ತೆ-ಟ್ಯಾಂಕ್ ರಸ್ತೆಗಳಲ್ಲಿ ಪಾರ್ಕಿಂಗ್‌ಅನ್ನು ಸೆಪ್ಟೆಂಬರ್​ 7 ರಿಂದ 9 ವರೆಗೆ ಎಲ್ಲ ರೀತಿಯ ವಾಹನಗಳ ಪಾರ್ಕಿಂಗ್ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

Recent Articles

spot_img

Related Stories

Share via
Copy link
Powered by Social Snap