ಜಿಬಿಎ ಜೂನ್ 20ರಿಂದ 24 ರೊಳಗೆ ಚುನಾವಣೆ ನಡೆಸುವುದು ಕಡ್ಡಾಯ

 

ಬೆಂಗಳೂರು, ಮೇ.೮- ಸುಪ್ರೀಂ ಕರ‍್ಟ್ ಸೂಚನೆಯಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್ ೨೦ ರಿಂದ ೨೪ರೊಳಗೆ ಚುನಾವಣೆ ನಡೆಸುವುದು ಕಡ್ಡಾಯವಾಗಿದ್ದು, ಈ ಅವಧಿಯಲ್ಲೇ ಮತದಾನ ನಡೆಯಲಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಗ್ರೇಶಿ ತಿಳಿಸಿದ್ದಾರೆ.

ಇಂದು ಆಯೋಗದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ದಿನಾಂಕ ಪ್ರಕಟಣೆ ಮಾತ್ರ ಬಾಕಿ ಇದ್ದು, ಅದನ್ನು ಒಂದು ವಾರದೊಳಗೆ ನಿಗದಿಪಡಿಸಲಾಗುವುದು ಎಂದರು. ಜಿಬಿಎ ವತಿಯಿಂದ ಚುನಾವಣೆಯನ್ನು ಸ್ವಲ್ಪ ಮುಂದೂಡುವಂತೆ ಮನವಿ ಬಂದಿದ್ದರೂ, ಜೂನ್ ೩೦ರೊಳಗೆ ಚುನಾವಣೆ ಪರ‍್ಣಗೊಳಿಸಬೇಕೆಂದು ಸುಪ್ರೀಂ ಕರ‍್ಟ್ ಸ್ಪಷ್ಟ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಅದನ್ನು ಮುಂದೂಡುವ ಅಧಿಕಾರ ಇಲ್ಲ ಎಂದು ಹೇಳಿದರು. ಜೂನ್ ೨೪ರೊಳಗೆ ರ‍್ಕಾರಿ ಪ್ರಾಯೋಜಿತ ಕರ‍್ಯಕ್ರಮಗಳಿದ್ದರೆ ಅವನ್ನು ಶೀಘ್ರ ಮುಗಿಸಲು ಸೂಚನೆ ನೀಡಲಾಗಿದೆ. ಯಾವ ದಿನ ಮತದಾನ ನಡೆಸಬೇಕು ಎಂಬುದನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಅವರು ತಿಳಿಸಿದರು. “ಜಿಬಿಎ ಯಾವ ಸಮಸ್ಯೆಯನ್ನೇ ಹೇಳಿದರೂ, ನಿಗದಿತ ಅವಧಿಯೊಳಗೆ ಚುನಾವಣೆ ನಡೆಸುವುದು ಅನಿವರ‍್ಯ” ಎಂದು ಅವರು ಖಚಿತಪಡಿಸಿದರು.

ಚುನಾವಣಾ ಸಿದ್ಧತೆಗಳು ಪರ‍್ಣಗೊಳ್ಳುತ್ತಿವೆ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, ಚುನಾವಣೆಗೆ ಅಗತ್ಯವಿರುವ ಬಹುತೇಕ ಪರ‍್ವ ಸಿದ್ಧತೆಗಳು ಪರ‍್ಣಗೊಂಡಿವೆ ಎಂದರು. ಈಗಾಗಲೇ ವರ‍್ಡ್ ವಿಂಗಡಣೆ, ಮೀಸಲಾತಿ ಹಾಗೂ ಅಂತಿಮ ಮತದಾರರ ಪಟ್ಟಿ ಸಿದ್ಧವಾಗಿದೆ. ಮುಂದಿನ ಹಂತದಲ್ಲಿ ಮತಗಟ್ಟೆಗಳ ಅಂತಿಮ ಪಟ್ಟಿ ಪ್ರಕಟಣೆ, ಚುನಾವಣಾಧಿಕಾರಿ , ಸಹಾಯಕ ಚುನಾವಣಾಧಿಕಾರಿ  ಮತ್ತು ಬಿಎಲ್‌ಒಗಳ ನೇಮಕ,
ಸಿಬ್ಬಂದಿ ತರಬೇತಿ, ಮತಪೆಟ್ಟಿಗೆಗಳ ವ್ಯವಸ್ಥೆ ಮತ್ತು ಭದ್ರತಾ ಕ್ರಮಗಳು, ಮತ ಎಣಿಕೆ ಕೇಂದ್ರಗಳ ಸಿದ್ಧತೆ, ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಸಭೆಯಲ್ಲಿ ಐದು ಪಾಲಿಕೆಗಳ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿ, ಚುನಾವಣಾ ನರ‍್ವಹಣೆಗೆ ಸಂಬಂಧಿಸಿದ ವಿವಿಧ ಅಂಶಗಳ ಬಗ್ಗೆ ರ‍್ಚೆ ನಡೆಸಿದರು.

ಒಟ್ಟಾರೆ, ಸುಪ್ರೀಂ ಕರ‍್ಟ್ ಗಡುವಿನೊಳಗೆ ಜಿಬಿಎ ಚುನಾವಣೆ ನಡೆಸುವುದು ಖಚಿತವಾಗಿದ್ದು, ಅಧಿಕೃತ ದಿನಾಂಕ ಘೋಷಣೆಗೆ ಈಗ ಕಾದು ನೋಡಬೇಕಾಗಿದೆ.

Recent Articles

spot_img

Related Stories

Share via
Copy link