ಧಾರವಾಡ:
ನಗರದಲ್ಲಿ ನೋಡನೋಡುತ್ತಿದ್ದಂತೆ ನಿರ್ಮಾಣ ಹಂತದಲ್ಲಿದ್ದ 5 ಅಂತಸ್ತಿನ ಕಟ್ಟಡ ಕುಸಿದು ಮೂವರು ಸಾವನ್ನಪ್ಪಿ, 100ಕ್ಕೂ ಹೆಚ್ಚು ಕಾರ್ಮಿಕರು ಅವಶೇಷದಡಿಯಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸದ್ಯ ಕಟ್ಟಡದಡಿಯಲ್ಲಿ ಸಿಲುಕಿದ್ದ 10- 15 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಗಾಯಗೊಂಡಿರುವವರನ್ನು ಬಸ್‍ಗಳ ಮೂಲಕ ಸ್ಥಳೀಯ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು, ಮೂರು ಅಗ್ನಿಶಾಮಕ ವಾಹನ ಹಾಗೂ ಜೆಸಿಬಿಗಳು, 10 ಆಯಂಬುಲೆನ್ಸ್‍ಗಳು ಧಾವಿಸಿದ್ದು, ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ಮಾಜಿ ಸಚಿವ ವಿನಯ್‍ಕುಲಕರ್ಣಿ ಅವರ ಮಾವ (ಪತ್ನಿ ತಂದೆ) ಒಡೆತನದಲ್ಲಿ ಸುಮಾರು 7 ಅಂತಸ್ತಿನ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಕಾಮಗಾರಿ ನಡೆದಿತ್ತು. ಈಗಾಗಲೇ ನೆಲಮಾಳಿಗೆ, ಮೊದಲ ಹಾಗೂ ಎರಡನೇ ಅಂತಸ್ತಿನ ಕಟ್ಟಡದ ಕಾಮಗಾರಿ ಮುಗಿದಿದ್ದು, 4ನೇ ಮಹಡಿಯ ಛಾವಣಿಗಾಗಿ ಸಾರ್ವೇ ಮರಗಳನ್ನು ಕಟ್ಟಲಾಗಿತ್ತು.
ಇಂದು ಮಧ್ಯಾಹ್ನ 4.15ರ ಸಂದರ್ಭದಲ್ಲಿ ಏಕಾಏಕಿ ಕಟ್ಟಡ ಸಂಪೂರ್ಣ ನೆಲಕ್ಕೆ ಕುಸಿದು ಬಿದ್ದಿದ್ದು, ಅದರಡಿ 100ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿದ್ದರು. ಕೆಲವರು ದಿಕ್ಕಾಪಾಲಾಗಿ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಮತ್ತೆ ಕೆಲವರನ್ನು ಕಾರ್ಮಿಕರೇ ರಕ್ಷಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
