ನವದೆಹಲಿ:
ಸರ್ಚ್ ಎಂಜಿನ್ ದೈತ್ಯ ಗೂಗಲ್ 18ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ವಿಶೇಷವಾದ ಡೂಡಲ್ನೊಂದಿಗೆ ಶುಭ ಹಾರೈಸಿದೆ. ಇಂದು ನಡೆಯುವ ಉದ್ಘಾಟನ ಪಂದ್ಯದಲ್ಲಿ ಆರ್ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಲಿವೆ. ಗೂಗಲ್ನ ಡೂಡಲ್ನಲ್ಲಿ ಬ್ಯಾಟ್ಸ್ಮನ್ ಚೆಂಡನ್ನು ಹೊಡೆಯುವ ಆ್ಯನಿಮೇಟೆಡ್ ವಿಡಿಯೊ ಕಾಣಬಹುದು. ಇದನ್ನು ಕ್ಲಿಕ್ ಮಾಡಿದರೆ ಪಂದ್ಯದ ವೇಳಾಪಟ್ಟಿ, ಸಮಯ ಸೇರಿದಂತೆ ಎಲ್ಲಾ ಐಪಿಎಲ್ ವಿವರಗಳು ತೆರೆದುಕೊಳ್ಳುತ್ತದೆ.
ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ಘೋಷಿಸಿದ್ದು, ಈಡನ್ ಗಾರ್ಡನ್ನಲ್ಲಿ ಇಂದು ನಡೆಯುವ ಉದ್ಘಾಟನ ಪಂದ್ಯ ಮಳೆಯ ಪಾಲಾಗಬಹುದೆಂಬ ಆತಂಕ ಮೂಡಿದೆ. 17 ವರ್ಷಗಳ ಹಿಂದೆ ಐಪಿಎಲ್ನ ಮೊದಲ ಪಂದ್ಯ ಈ ಎರಡು ತಂಡಗಳ ನಡುವೆ ಇದೇ ಕ್ರೀಡಾಂಗಣದಲ್ಲಿ ನಡೆದಿತ್ತು.
ಉದ್ಘಾಟನಾ ಸಮಾರಂಭದಲ್ಲಿ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್, ಗಾಯಕರಾದ ಅರಿಜಿತ್ ಸಿಂಗ್ ಮತ್ತು ಕರಣ್ ಔಜ್ಲಾ ಅವರು ಹಾಡಲಿದ್ದಾರೆ. ಪಂದ್ಯಕ್ಕೆ ಬಾಲಿವುಡ್ ತಾರೆಯರ ದಂಡು ಇಲ್ಲಿ ಸೇರುವ ನಿರೀಕ್ಷೆ ಇದೆ.
ಚಾಂಪಿಯನ್ ಟ್ರೋಫಿಯಲ್ಲಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ವರುಣ್ ಚಕ್ರವರ್ತಿ, ವೆಸ್ಟ್ ಇಂಡೀಸಿನ 36 ವರ್ಷ ವಯಸ್ಸಿನ ಆಲ್ರೌಂಡರ್ ಸುನೀಲ್ ನಾರಾಯಣ್ ಅವರು ಕೋಲ್ಕತ್ತದ ಪ್ರಮುಖ ಸ್ಪಿನ್ ಆಟಗಾರರು. ಇವರ ದಾಳಿಯನ್ನು ಅನುಭವಿ ವಿರಾಟ್ ಕೊಹ್ಲಿ ಹೇಗೆ ನಿಭಾಯಿಸಬಲ್ಲರು ಎಂಬುದರ ಮೇಲೆ ಎಲ್ಲರ ಗಮನವಿದೆ. ಕೊಹ್ಲಿ ಅಭ್ಯಾಸ ವೇಳೆ ಬಹುತೇಕ ಸ್ಪಿನ್ ಬೌಲರ್ಗಳನ್ನೇ ಎದುರಿಸಿದ್ದಾರೆ.
