ತೈಪೆ:
ತೈವಾನ್‌ನ ದಂಪತಿ ತಮ್ಮ ಮಗನ ಪದವಿ ಪ್ರದಾನ ಸಮಾರಂಭದಂದು ಅವನ ಶಾಲೆಯ ಹೊರಗೆ ಇಬ್ಬರು ಪೋಲ್ ಡ್ಯಾನ್ಸರ್‌ಗಳನ್ನು ಕರೆದುಕೊಂಡು ಬಂದು ಡ್ಯಾನ್ಸ್ ಮಾಡಿಸಿದ್ದಾರೆ. ಇಬ್ಬರು ಮಹಿಳಾ ಪೋಲ್ ಡ್ಯಾನ್ಸರ್‌ಗಳು ತೈವಾನ್‌ನ ಬೀದಿಗಳಲ್ಲಿ ಪದವಿ ಪಡೆದ ಶಾಲಾ ಬಾಲಕನ ಪಕ್ಕದಲ್ಲಿ ನಿಂತು ಪ್ರದರ್ಶನ ನೀಡಿದ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್(Viral Video) ಆಗಿದೆ. ಇದನ್ನು ನೋಡಿ ನೆಟ್ಟಿಗರು ಕಿಡಿಕಾರಿದ್ದಾರೆ.
ಪದವಿ ಪ್ರದಾನ ಸಮಾರಂಭ ಮುಗಿದು ವಿದ್ಯಾರ್ಥಿಗಳು ಆವರಣದಿಂದ ಹೊರಬರಲು ಶುರುಮಾಡಿದ ಸ್ವಲ್ಪ ಸಮಯದ ನಂತರ, ರಸ್ತೆ ಮಧ್ಯದಲ್ಲಿ ತೈಚುಂಗ್ ಮುನ್ಸಿಪಲ್ ವಾನ್ಹೆ ಜೂನಿಯರ್ ಹೈಸ್ಕೂಲ್ ಹೊರಗೆ ಈ ಪ್ರದರ್ಶನ ನಡೆಯಿತು. ಈ ವಿಡಿಯೊ ವೈರಲ್ ಆಗಿದ್ದು, ಯಾವುದು ಸೂಕ್ತ ಆಚರಣೆ ಮತ್ತು ಅದನ್ನು ಎಲ್ಲಿ ಮಾಡಬೇಕು ಎಂಬುದರ ಕುರಿತು ಚರ್ಚೆಗೆ ನಾಂದಿ ಹಾಡಿದೆ. ಅನೇಕ ಸೋಶಿಯಲ್ ಮೀಡಿಯಾ ನೆಟ್ಟಿಗರು ಬಾಲಕ ಬೇಸರಗೊಂಡಂತೆ ಕಾಣಿಸಿದೆ. ಮತ್ತು ಆ ಪ್ರದರ್ಶನವು ಅವನನ್ನು ಖುಷಿಪಡಿಸುವ ಬದಲು ಮುಜುಗರಕ್ಕೀಡು ಮಾಡಿದಂತೆ ತೋರುತ್ತಿದೆ ಎಂದು ಹೇಳಿದ್ದಾರೆ.
“ಇದು ತುಂಬಾ ಹಾಸ್ಯಾಸ್ಪದವಾಗಿದೆ. ಹುಡುಗನ ಪೋಷಕರಿಗೆ ನಾಚಿಕೆಯಾಗಬೇಕು” ಎಂದು ಒಬ್ಬ ನೆಟ್ಟಿಗರು ಬರೆದರೆ, ಇನ್ನೊಬ್ಬರು, “ನೀವು ಪೋಲ್ ಡ್ಯಾನ್ಸರ್‌ಗಳನ್ನು ಆಹ್ವಾನಿಸಬಹುದು, ಆದರೆ ನೀವು ಶಾಲೆಯ ಬಳಿ ಪ್ರದರ್ಶನವನ್ನು ಆಯೋಜಿಸಿದ್ದು ಸರಿಯಲ್ಲ” ಎಂದು ಹೇಳಿದ್ದಾರೆ.
