ಎಂ.ಎನ್.ಕೋಟೆ :
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಗ್ರಾಮದ ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ಸುಮಾರು ದಿನಗಳೆ ಕಳೆದಿದೆ ಸಂಬಂಧ ಪಟ್ಟಧಿಕಾರಿಗಳು ಕ್ರಮ ಕೈಗೊಂಡಿಲ್ಲ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಬೇಸಿಗೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗಲವಾಡಿ ಹೋಬಳಿ ಕೇಂದ್ರವಾಗಿದ್ದು ತಿಂಗಳಿಗೆ ಎರಡು ಮೂರು ಸಾರಿ ಶುದ್ದ ನೀರಿನ ಘಟಕ ಕೆಟ್ಟು ಹೋಗುತ್ತಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಇದೆ ಘಟಕವನ್ನು ಅವಲಂಬಿಸಿದ್ದು ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಪಾರದಾಡುವಂತಾಗಿದೆ. ಎಂದು ಗ್ರಾಮಸ್ಥರು ಅಳಲು ತೊಂಡಿಕೊಡಿದ್ದಾರೆ.
ಶುದ್ದ ನೀರಿನ ಘಟಕವನ್ನು ಸರಿಪಡಿಸುವಲ್ಲಿ ಗ್ರಾಮ ಪಂಚಾಯಿತಿಯವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹಾಗಲವಾಡಿ ಕೇಂದ್ರ ಹಿಂದೂಳಿದ ಪ್ರದೇಶವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಯಾವುದೆ ಕ್ರಮ ಕೈಗೊಂಡಿಲ್ಲ ಸುತ್ತಮುತ್ತಲಿನ ಗ್ರಾಮಸ್ಥರು ಇದೆ ಘಟಕವನ್ನು ಅವಲಂಬಿಸಿದ್ದು. ಕೊರೋನಾ ಸಂದರ್ಭದಲ್ಲೂ ಕೂಡ ಶುದ್ದ ನೀರಿನ ಘಟಕ ಸರಿಪಡಿಸುವಲ್ಲಿ ಹಾಗಲವಾಡಿ ಗ್ರಾಮ ಪಂಚಾಯಿತಿ ವಿಫಲವಾಗಿದೆ. ಸಂಬಂಧ ಪಟ್ಟಧಿಕಾರಿಗಳು ತುರ್ತಾಗಿ ದುರಸ್ಥಿಗೊಳಿಸಿ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಬೇಕು.
ಶಿವಾರಾಜು ಹಾಗಲವಾಡಿ ಗ್ರಾಮಸ್ಥ
ಹಾಗಲವಾಡಿ ಗ್ರಾಮದಲ್ಲಿ ಶುದ್ದ ನೀರಿನ ಘಟಕ ಕೆಟ್ಟು ಹೋಗಿರುವುದು ನಮ್ಮ ಗಮನಕ್ಕೆ ಬಂದಿದೆ ನಾನು ಕೂಡ ಸಂಬಂಧಪಟ್ಟಧಿಕಾರಿಗಳ ಜತೆ ಚರ್ಚಿಸಿದ್ದೇನೆ ಅದಷ್ವು ಬೇಗನೆ ಸರಿಪಡಿಸಲಾಗುವುದು.
ದೊಡ್ಡಯ್ಯ ಪಿ.ಡಿ.ಓ. ಹಾಗಲವಾಡಿ
ಹಾಗಲವಾಡಿಯಲ್ಲಿ ಶುದ್ದ ನೀರಿನ ಘಟಕ ತಾಂತ್ರಿಕ ದೋಷದಿಂದ ಸಮಸ್ಯೆಯಾಗಿದೆ. ಇನ್ನ ಎರಡು ಮೂರು ದಿನಗಳಲ್ಲಿ ನೀರಿನ ಘಟಕವನ್ನು ಸರಿಪಡಿಸಲಾಗುತ್ತದೆ ಗ್ರಾಮಸ್ಥರು ಸಹಕರಿಸಬೇಕು.
ಶ್ರೀ ಪಾದ ಎ.ಇ.ಇ. ಇಂಜಿನಿಯರ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
