ಎಂ.ಎನ್.ಕೋಟೆ :
ಕೆರೆಯಲ್ಲಿ ಹೂಳು ತೆಗೆಯುವ ಸಂದರ್ಭದಲ್ಲಿ ಸುಮಾರು 600 ವರ್ಷಗಳ ಪುರಾತನ ಕಲ್ಲಿನ ವಿಷ್ಣು ವಿಗ್ರಹ ಪತ್ತೆಯಾದ ಘಟನೆ ಮಂಗಳವಾರ ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಗ್ರಾಮದಲ್ಲಿ ನಡೆದಿದೆ.
ಕೆರೆಯಲ್ಲಿ ಹೂಳು ತೆಗೆಯುವ ಸುಮಾರು ವರ್ಷಗಳಿಂದ ನಡೆಯದ ಕಾರಣ ಮಣ್ಣು ತೆಗೆಯಲಾಗುತ್ತಿತ್ತು ಸುಮಾರು 15 ಅಡಿಗಳ ಆಳದಲ್ಲಿ ಜೆ.ಸಿ.ಬಿ ಯಂತ್ರಕ್ಕೆ ಸಿಲುಕಿದ ಈ ವಿಗ್ರಹವನ್ನು ಗ್ರಾಮಸ್ಥರು ಸುರುಕ್ಷಿತವಾಗಿ ಮೇಲೆತ್ತಿದರು ಕೂಡಲೇ ಪುರಾತತ್ವ ಇಲಾಖೆಗೆ ಮಾಹಿತಿ ರವಾನಿಸಲಾಯಿತು ನಂತರ ಸ್ಥಳಕ್ಕೆ ಬಂದ ಇತಿಹಾಸ ತಜ್ಞ ಶ್ರೀನಿವಾಸ್ ಅಮ್ಮನಘಟ್ಟ ವಿಗ್ರಹವನ್ನು ಪರಿಶೀಲನೆ ನಡೆಸಿದರು.
ಸುಮಾರು 5 ಅಡಿಗಳ ಈ ಕಲ್ಲು ವಿಗ್ರಹ ಪೂಜೆ ಪುನಸ್ಕಾರ ಪಡೆದಿರಬಹುದು ಎನ್ನಲಾಗಿದೆ. ಸ್ಥಳೀಯ ಹಿರಿಯರು ಚನ್ನಕೇಶವಸ್ವಾಮಿ ದೇವಾಲಯ ಸಹ ಹೊಯ್ಸಳರ ಕಾಲದ್ದಾಗಿದೆ ಈ ವಿಗ್ರಹ ಇಲ್ಲಿಗೆ ಸಂಬಂಧಿಸಿರಬಹುದು. ದಾಳಿ ನಡೆದ ಸಂದರ್ಭದಲ್ಲಿ ಕೆರೆಯ ಪಾಲಾಗಿದೆ ಈಗ ವಿಗ್ರಹ ಸಿಕ್ಕಿರುವುದು ಗ್ರಾಮಕ್ಕೆ ಒಳ್ಳೆಯ ದಾಗಲಿದೆ ಎಂದು ನಂಬಿದ್ದಾರೆ ಸದ್ಯಕ್ಕೆ ಚನ್ನಕೇಶವ ದೇವಾಲಯದಲ್ಲೆ ಈ ವಿಗ್ರಹವನ್ನು ಇಡಲಾಗಿದೆ ಎಂದು ಪುರಾತತ್ವ ಇಲಾಖೆ ವಿಗ್ರಹದ ಸ್ಪಷ್ಟ ಚಿತ್ರಣ ನೀಡಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ