ತುಮಕೂರು: ‘ದೇವರಾಣೆ ನಾನು ನಯಾಪೈಸೆ ಪಡೆದಿಲ್ಲ’-ಎಸ್ಪಿಎಂ ಸ್ಪಷ್ಟನೆ

ತುಮಕೂರು :

      ನಾನು ನಾಮಪತ್ರ ಹಿಂಪಡೆಯಲು ದೇವರಾಣೆ ನಯಾ ಪೈಸೆ ಹಣ ಪಡೆದಿಲ್ಲ. ನನ್ನ ಕೈ ಶುದ್ದವಾಗಿದೆ ಎಂದು ವೈರಲ್ ಆದ ಆಡಿಯೋ ಬಗ್ಗೆ ಸಂಸದ ಮುದ್ದಹನುಮೇಗೌಡ ಸ್ಪಷ್ಟನೆ ನೀಡಿದ್ದಾರೆ.

      ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ತುಮಕೂರಿನ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ, ಆಡಿಯೋದಲ್ಲಿ ಮಾತಾಡಿರುವ ಇಬ್ಬರು ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಿದ್ರೇ, ಪ್ರಕರಣದ ಹಿಂದಿನ ಸತ್ಯಾಸತ್ಯತೆ ತಿಳಿಯಲಿದೆ. ಯಾಕೆಂದರೇ ನಾನಾಗಲೀ ಅಥವಾ ಯಾವುದೇ ಜವಾಬ್ದಾರಿಯುತ ವ್ಯಕ್ತಿಯಾಗಲೀ ಆಡಿಯೋದಲ್ಲಿ ಮಾತಾಡಿಲ್ಲ. ನಾನು ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಾನೂ ಒಂದೇ ಒಂದು ನಯಾ ಪೈಸೆ ದುಡ್ಡು ಪಡೆದಿಲ್ಲ. ಈ ಕೈನ ಬಹಳ ಶುದ್ದವಾಗಿಟ್ಟುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ನಾಮಪತ್ರ ಹಿಂಪಡೆಯಲು ಮುದ್ದಹನುಮೇಗೌಡ ಪಡೆದ್ರಾ 3.5ಕೋಟಿ!!?

     ನಮ್ಮ ಜಿಲ್ಲೆಯಲ್ಲಿ ಪ್ರಚಾರ ಪ್ರಾರಂಭಿಸಿದಾಗ ದೇವೇಗೌಡರು, ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಬಂದಿದ್ದರು. ಈ ಸಮಯದಲ್ಲಿ ನನ್ನ ಮನೆಗೆ ಪರಮೇಶ್ವರ್ ಹಾಗೂ ದಿನೇಶ್ ಗುಂಡೂರಾವ್ ಬಂದಿದ್ದರು. ಆಗ ಕಾಂಗ್ರೆಸ್ ಗೆ ಸಂಬಂಧಿಸಿದ ಚೆಕ್ ಗಳನ್ನು ತಂದಿದ್ದರು. ಇದನ್ನೇ ಕೆಲವರು ಚೆಕ್ ಕೊಟ್ಟಿದ್ದಾರೆಂದು ಹಬ್ಬಿಸಿದ್ದಾರೆ ಎಂದು ಗರಂ ಆದ್ರು.

      ಇನ್ನೂ ಮುಂದುವರೆದು ಮಾತನಾಡಿದ ಮುದ್ದಹನುಮೇಗೌಡ, ನಾನು ನಾಮಪತ್ರ ಹಿಂಪಡೆದ ಬಳಿಕ ಪ್ರಚಾರದಲ್ಲಿ ಭಾಗವಹಿಸಿದ್ದ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಪರಮೇಶ್ವರ್ ಅವರ ಮುಂದೆಯೇ ನಾನು ಘೋಷಣೆ ಮಾಡಿರೋದು. ಅದಕ್ಕಿಂತ ಇನ್ನೇನು ನಾನು ಘೋಷಣೆ ಮಾಡಬೇಕು ಎಂದು ಆಡಿಯೋ ವೈರಲ್ ಬಗ್ಗೆ, ಆಡಿಯೋ ವೈರಲ್ ಮಾಡಿದವರ ಬಗ್ಗೆ ಕಿಡಿಕಾರಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap