ಶಿವಮೊಗ್ಗ:
ಈಗಾಗಲೇ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸೋದಕ್ಕೆ ಅನುಮತಿಸುವಂತೆ ರಾಜ್ಯಾಧ್ಯಂತ ಪ್ರತಿಭಟನೆ ನಡೆಸಲಾಗಿತ್ತು. ಹೈಕೋರ್ಟ್ ಮಧ್ಯಂತರ ಆದೇಶದ ಬಳಿಕ, ಕೊಂಚ ತಣ್ಣಗಾಗಿತ್ತು.
ಈಗ ಜಿಲ್ಲೆಯಲ್ಲಿ ಹಿಜಾಬ್ ಮತ್ತೊಂದು ರೂಪದಲ್ಲಿ ಸುದ್ದು ಮಾಡುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳ ಬಳಿಕ, ಉಪನ್ಯಾಸಕಿಯರೂ ಹಿಜಾಬ್ ಧರಿಸಿ, ಪಾಠ ಮಾಡೋದಕ್ಕೆ ಬೇಡಿಕೆ ಇಡ್ಡಿದ್ದಾರೆ ಎನ್ನಲಾಗಿದೆ.
ಶಿವಮೊಗ್ಗ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ಮೂವರು ಉಪನ್ಯಾಸಕಿಯರಿಗೆ ಈ ಮೊದಲು ಹಿಜಾಬ್ ತೆಗೆದು ಪಾಠ ಮಾಡುವಂತೆ ಪ್ರಾಂಶುಪಾಲರು ಸೂಚಿಸಿದ್ದರು. ಇದಕ್ಕೆ ಒಪ್ಪಿದಂತ ಉಪನ್ಯಾಸಕಿಯರು ಆರಂಭದಲ್ಲಿ ಪ್ರಾಚಾರ್ಯರ ಸೂಚನೆ ಕೂಡ ಪಾಲಿ, ತರಗತಿಯಲ್ಲಿ ಹಿಜಾಬ್ ತೆಗೆದು ಇರಿಸಿ, ಪಾಠ ಮಾಡುತ್ತಿದ್ದರು.
ಆದ್ರೇ.. ಕೆಲ ದಿನಗಳ ಬಳಿಕ, ಇದೀಗ ಉಪನ್ಯಾಸಕಿಯರು ಕ್ರಮೇಣ ವರಸೆ ಬದಲಿಸಿದ್ದು, ನಮಗೆ ಹಿಜಾಬ್ ಧರಿಸಿ ಪಾಠ ಮಾಡಲು ಅವಕಾಶ ನೀಡಿ. ಇಲ್ಲವೇ ಹೈಕೋರ್ಟ್ ಅಂತಿಮ ತೀರ್ಪು ಬರುವವರೆಗೂ ರಜೆ ನೀಡಿ ಎಂಬುದಾಗಿ ಪಟ್ಟು ಹಿಡಿದ್ದಾರಂತೆ.
ಹೈಕೋರ್ಟ್ ಮಧ್ಯಂತರ ಆದೇಶ ವಿದ್ಯಾರ್ಥಿಗಳಿಗೆ ಮಾತ್ರ, ಉಪನ್ಯಾಸಕಿಯರಿಗೆ ಅನ್ವಯಿಸುವುದಿಲ್ಲ. ಹಿಜಾಬ್ ತೆಗೆದಿರಿಸಿ ಪಾಠ ಮಾಡುವಂತೆ ಸೂಚಿಸಿದ್ದಾರೆ. ಇದಕ್ಕೆ ಉಪನ್ಯಾಸಕಿಯರು ಮಾತ್ರ ಪಟ್ಟು ಸಡಿಸಿಲ್ಲ.
ಹೀಗಾಗಿ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದಂತ ಪ್ರಾಚಾರ್ಯರು, ಈಗ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರಿಗೆ ಪತ್ರ ಬರೆದು, ಸೂಕ್ತ ಮಾರ್ಗದರ್ಶನ ನೀಡುವಂತೆ ಕೋರಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ