ಚನ್ನರಾಯಪಟ್ಟಣ:

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿತ್ಯವೂ ಸಾವಿರಾರು ವಾಹನ ಸಂಚಾರ ಮಾಡುತ್ತವೆ. ಆದರೆ ಕಳೆದ ಒಂದು ವಾರದಿಂದ ವಾಹನ ದಟ್ಟಣೆ ಕಡಿಮೆಯಾಗಿದ್ದು ಲಕ್ಷಾಂತರ ಮಂದಿ ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆಯಲು ತಂಡೋಪ ತಂಡವಾಗಿ ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ.
ಸ್ಥಳೀಯರು ಭಕ್ತರಿಗೆ ಮಜ್ಜಿಗೆ, ನೀರು ನೀಡಿ ಭಕ್ತಿ ಮೆರೆಯುತ್ತಿದ್ದಾರೆ.
ಕೇಸರಿ ಉಡುಪು:
ಬೆಂಗಳೂರು, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಜಿಲ್ಲೆಯ ಅನೇಕ ತಾಲೂಕುಗಳಿಂದ ಪಾದಯಾತ್ರೆ ಕೈಗೊಂಡಿರುವವರು ಕೇಸರಿ ಉಡುಪು ತೊಟ್ಟಿದ್ದಾರೆ. ಇವರಲ್ಲಿ ಅನೇಕ ಮಂದಿ ಪ್ರತಿ ಹೆಜ್ಜೆಯನ್ನುಮಂಜು ನಾಥನ ಜಪ ಮಾಡುತ್ತ ಹಾಕುತ್ತಿದ್ದರೆ, ಇನ್ನುಹಲವು ಮಂದಿ ಭಕ್ತಿ ಗೀತೆ ಹಾಡುತ್ತಾ ದೇವರನ್ನು ಜಪತಪ ಮಾಡುತ್ತಾ ಹೆದ್ದಾರಿಯಲ್ಲಿ ಸಾಗುತ್ತಿದ್ದಾರೆ. ಯುವಕರು ಕೇಸರಿ ಬಣ್ಣದ ಧರ್ಮ ಧ್ವಜ ಹಿಡಿದು ಯಾತ್ರೆ ಕೈಗೊಂಡಿದ್ದಾರೆ.
ಉಚಿತ ಹಣ್ಣು, ನೀರು ಮಜ್ಜಿಗೆ:
ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿರುವವರಿಗೆ ಹೆದ್ದಾರಿ ಬದಿ ಇರುವ ಅನೇಕ ಗ್ರಾಮಗಳ ಮುಖಂಡರು ಸಂಘ, ಸಂಸ್ಥೆಯವರು ಸ್ವಯಂ ಪ್ರೇರಣೆಯಿಂದ ಬಾಳೆಹಣ್ಣು, ಕಿತ್ತಳೆ ಹಣ್ಣು, ಕುಡಿವ ನೀರು, ಮಜ್ಜಿಗೆಯನ್ನು ಉಚಿತವಾಗಿ ನೀಡಿ ದಣಿವು ನಿವಾರಣೆಗೆ ಮುಂದಾಗಿದ್ದಾರೆ.
ಉರಿ ಬಿಸಿಲಿನಲ್ಲಿಯೂ ಯಾತ್ರೆ:
ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿರುವ ಭಕ್ತರು, ಬೆಳಗ್ಗೆ ಹಾಗೂಸಂಜೆ ತಂಪು ಹೊತ್ತಿನಲ್ಲಿ ಮಾತ್ರ ಯಾತ್ರೆ ಮಾಡದೇ, ಬಿಸಿಲಿನಲ್ಲಿಯೂ ಯಾತ್ರೆ ಕೈಗೊಂಡಿದ್ದಾರೆ. ಹಲವು ಮಂದಿ ತಮ್ಮ ಚಿಕ್ಕ ಮಕ್ಕಳನ್ನು ಹೊತ್ತು ಸಾಗುತ್ತಿದ್ದರೆ,ಅನೇಕರು ಕಾಲಿಗೆ ಪಾದರಕ್ಷೆಯನ್ನೂ ಸಾಗುತ್ತಿದ್ದಾರೆ.
ಮರದ ನೆರಳು ಆಶ್ರಯ:
ನೂರಾರು ಕಿ.ಮೀ.ವರೆಗೆ ನಡೆಯುವ ಭಕ್ತರು ಆಯಾಸ ಆದಾಗ ರಸ್ತೆ ಬದಿ ಇರುವ ಮರದ ನೆರಳನ್ನು ಆಶ್ರಯ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ,ಹೆದ್ದಾರಿ ಸಮೀಪದಲ್ಲಿ ಸಮುದಾಯ ಭವನ, ಮನೆ ಯ ಜಗುಲಿ ಹಾಗೂ ಆವರಣದಲ್ಲಿ ವಿಶ್ರಾಂತಿ ಪಡೆದುಮುಂದಕ್ಕೆ ಸಾಗುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.
ಹರಕೆ ಹೊತ್ತವರು:
ಯಾವುದೇ ವಯೋಮಿತಿ ಇಲ್ಲದೇ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಫೆ.28ರ ಸಂಜೆ ವೇಳೆಗೆ ಎಲ್ಲಾ ಭಕ್ತರು ಶ್ರೀಕ್ಷೇತ್ರವನ್ನುತಲುಪಲಿದ್ದಾರೆ. ಕಂಕಣ, ಸಂತಾನ ಭಾಗ್ಯ, ಕಂಟಕ, ದೋಷ ಪರಿಹಾರ ಹಾಗೂ ರೋಗ-ರುಜಿನ ನಿವಾರಣೆಸಲುವಾಗಿ ಹರಕೆ ಹೊತ್ತವರು, ಇಷ್ಟಾರ್ಥ ಫಲಿಸಿದ ಹಿನ್ನೆಲೆ ಪಾದಯಾತ್ರೆಯಲ್ಲಿ ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆ.
ಕಳೆದ 13 ವರ್ಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡುಶಿವರಾತ್ರಿ ಮಹೋತ್ಸವದಲ್ಲಿ ಮಂಜುನಾಥನದರ್ಶನ ಪಡೆಯುತ್ತಿದ್ದೇನೆ. ತಾಯಿಯಆಶಯದಂತೆ ಈ ಬಾರಿ ಮದುವೆ ವಿಚಾರವಾಗಿಹರಕೆ ಹೊತ್ತು ಪಾದಯಾತ್ರೆ ಕೈಗೊಂಡಿದ್ದೇನೆ.
– ಮೋಹನ್, ಮಹಾಲಕ್ಷ್ಮೀ ಲೇಔಟ್, ಬೆಂಗಳೂರು
ನನ್ನ ಜೀವನ ಮುಗಿಯಿತು ಎನ್ನುವ ವೇಳೆ ಹಿರಿಯರ ಮಾತಿನಂತೆ ಒಲ್ಲದಮನಸ್ಸಿನಿಂದ ಕಳೆದ 16 ವರ್ಷಗಳ ಹಿಂದೆ ಪಾದಯಾತ್ರೆ ಪ್ರಾರಂಭಿಸಿದೆ. ಎಲ್ಲವೂಒಳ್ಳೆಯದಾಯಿತು. ಬದುಕಿರುವವರೆಗೂ ಪಾದಯಾತ್ರೆ ಮುಂದುವರಿಸುವೆ.
– ಲಕ್ಷ್ಮಣ, ಪಾದಯಾತ್ರಿ, ನೆಲಮಂಗಲ.
ಶತಮಾನದ ಹಿಂದೆ ಕಾಶಿಯತ್ರೆ ಹೆಸರಿನಲ್ಲಿ ವಯೋವೃದ್ಧರು ಧರ್ಮಿಕ ಕ್ಷೇತ್ರಗಳ ಯಾತ್ರೆಮಾಡುತ್ತಿದ್ದರು. ಈಗ ಇತಿಹಾಸ ಮರುಕಳಿಸಿದ್ದು,ತಿರುಪತಿ, ಧರ್ಮಸ್ಥಳ, ಶಬರಿಮಲೆಗೆ ಪ್ರತಿ ವರ್ಷಸಾವಿರಾರು ಮಂದಿ ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ.
– ಗೌರಮ್ಮ, ಕತ್ತರಿಘಟ್ಟ ಗ್ರಾಮ, ಹೆದ್ದಾರಿಯಲ್ಲಿ ಪಾದಯಾತ್ರಿಕರಿಗೆ ಹಣ್ಣು ನೀರು ವಿತರಿಸುವ ಗೃಹಿಣಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








