ಭ್ರಷ್ಟಾಚಾರ ಕಡಿವಾಣಕ್ಕೆ ರೈತ ಸಂಘದಿಂದ ಒತ್ತಾಯ

ಹಿರಿಯೂರು :

    ನೊಂದಣಿ ಇಲಾಖೆಯಲ್ಲಿ ಇರುವ ಲೋಪದೋಷ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂಬುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.

ನಗರದ ತಾಲ್ಲೂಕು ಕಚೇರಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ವತಿಯಿಂದ ನೊಂದಣಿ ಇಲಾಖೆಯಲ್ಲಿ ಇರುವ ಲೋಪದೋಷ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ, ತಾಲ್ಲೂಕು ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಮುಖಾಂತರ ಕಂದಾಯ ಸಚಿವ ಆರ್.ಅಶೋಕ್ ರವರಿಗೆ ಮನವಿ ಸಲ್ಲಿಸಿ, ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅತಿ ಹೆಚ್ಚು ಭೂಮಿ ನೊಂದಣಿಯಾಗುತ್ತಿರುವುದು ಹಿರಿಯೂರು ತಾಲ್ಲೂಕಿನಲ್ಲಿ, ಆದರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 3 ಕಂಪ್ಯೂಟರ್ ಇಟ್ಟುಕೊಂಡು ಇರುವುದರಿಂದ ಸರದಿ ಸಾಲಿನಲ್ಲಿ 30 ದಿನಗಳಿಂದ 40 ದಿನಗಳವರೆಗೆ ಟೋಕನ್ ಕೊಟ್ಟು ಕಾಯಿಸುತ್ತಾರೆ, ಹೆಚ್ಚಿಗೆ ಲಂಚ ಕೊಟ್ಟವರಿಗೆ ಒಳಗೊಳಗೆ ನೊಂದಣಿ ಮಾಡಿಸುತ್ತಾರೆ ಎಂಬುದಾಗಿ ಅವರು ಆಪಾದಿಸಿದರು.
ಅಲ್ಲದೆ ಪತ್ರಬರಹಗಾರರ ಮುಖಾಂತರ 15 ರಿಂದ 20 ಸಾವಿರದವರೆಗೆ ಲಂಚ ಪಡೆಯುತ್ತಾರೆ, ನೊಂದಣಿ ಇಲಾಖೆಯಲ್ಲಿ ಪತ್ರ ಬರಹಗಾರರ ಅವಶ್ಯಕತೆ ಇಲ್ಲದೆ ಇದ್ದರೂ ಮಧ್ಯವರ್ತಿಗಳ ಸಹಾಯದಿಂದ ಲಂಚದ ದೊಡ್ಡ ಜಾಲವನ್ನೇ ನಿರ್ಮಿಸಿಕೊಂಡಿದ್ದಾರೆ, ಇದನ್ನು ಹೋಗಲಾಡಿಸಲು ಕನಿಷ್ಠ ನಮ್ಮ ತಾಲ್ಲೂಕಿಗೆ 8 ಕಂಪ್ಯೂಟರ್ ಅಳವಡಿಸುವ ಅವಶ್ಯಕತೆ ಇದ್ದು, ಕೂಡಲೇ ಇದನ್ನು ಸರಿಪಡಿಸಬೇಕು ಎಂಬುದಾಗಿ ಒತ್ತಾಯಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಹಿರಿಯೂರು ತಾಲ್ಲೂಕಿನಲ್ಲಿ ವಾಣಿವಿಲಾಸ ಸಾಗರವಿದ್ದು, ಭೂಮಿಯ ಬೆಲೆ ಹೆಚ್ಚಾಗಿದ್ದು, ನಮ್ಮ ತಾಲ್ಲೂಕಿನಲ್ಲಿ ಅತಿ ಕಡಿಮೆ ಸಬ್ ರಿಜಿಸ್ಟರ್ ವ್ಯಾಲ್ಯು ಇದೆ, ನಮ್ಮ ತಾಲ್ಲೂಕಿನಲ್ಲಿ ಎಲ್.ಪಿ.ಜಿ ಗ್ಯಾಸ್ ಕಂಪನಿಯವರು 20 ಲಕ್ಷ ಎಕರೆಗೆ 3 ಕಡೆ ಖರೀದಿ ಮಾಡಿರುತ್ತಾರೆ, ಅದರಂತೆ ತಾಲ್ಲೂಕಿನಲ್ಲಿ ಜಮೀನಿನ ಬೆಲೆ ನೊಂದಣಿ ಸಮಯದಲ್ಲಿ ಹೆಚ್ಚು ಮಾಡಬೇಕು ಎಂಬುದಾಗಿ ಅವರು ಹೇಳಿದರು.
ತಾಲ್ಲೂಕು ಕಚೇರಿಯಲ್ಲಿ ನೊಂದಣಿ ಇಲಾಖೆಗೆ ಜಾಗ ಇರುವುದಿಲ್ಲ, ತುಂಬಾ ಕಿರಿದಾಗಿರುವುದರಿಂದ ಕೂಡಲೇ ಕಚೇರಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಪಿಎಂಸಿ ಆವರಣದಲ್ಲಿ 2 ವಸತಿ ಗೃಹಗಳು ಖಾಲಿ ಇದ್ದು, ಅಲ್ಲಿಗೆ ಸ್ಥಳಾಂತರಿಸಿದರೆ ಅನುಕೂಲವಾಗುತ್ತದೆ ಎಂಬುದಾಗಿ ಅವರು ಮನವಿ ಮಾಡಿದ್ದಾರೆ.
ನೊಂದಣಿ ಇಲಾಖೆಯಲ್ಲಿ ಹಳೆಯ ಪತ್ರಗಳು ಮತ್ತು ಇಸಿ ಪ್ರತಿ ತೆಗೆದುಕೊಳ್ಳುವುದಕ್ಕೆ 10 ರಿಂದ 15 ದಿನ ಬೇಕಾಗುತ್ತದೆ. ಪತ್ರಕ್ಕೆ 500 ರಿಂದ 1000 ವರೆಗೆ ಲಂಚಕೊಡಬೇಕು. ಕಂಪ್ಯೂಟರ್ ಆಪರೇಟರ್ ಗೆ 500 ರಿಂದ 800 ರೂ ವರೆಗೂ ಲಂಚ ಕೊಡಬೇಕು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಕೂಡಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂಬುದಾಗಿ ಅವರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲ್ಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಆಲೂರು ಸಿದ್ಧರಾಮಣ್ಣ, ಎಂ.ತಿಮ್ಮಾರೆಡ್ಡಿ, ಕಸವನಹಳ್ಳಿ ರಮೇಶ್ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap