ಬೋರನಕಣಿವೆ ಜಲಾಶಯದ ದುರಸ್ತಿ ಕಾರ್ಯ ಪೂರ್ಣ!!

 ಹುಳಿಯಾರು :

      ಕೆಆರ್‍ಎಸ್ ಜಲಾಶಯಕ್ಕಿಂತಲೂ ಮೊದಲೆ ನಿರ್ಮಾಣಗೊಂಡ 125 ವರ್ಷಗಳ ಇತಿಹಾಸವುಳ್ಳ ಹುಳಿಯಾರು ಹೋಬಳಿಯ ಬೋರನಕಣಿವೆ ಜಲಾಶಯದ ಒಳ ಗೋಡೆಗಳು ಶಿಥಿಲವಾಗಿದ್ದು, ಈ ಬಗ್ಗೆ ಪತ್ರಿಕೆಯಲ್ಲಿ ವಿಸ್ಕøತ ವರದಿ ಪ್ರಕಟಿಸಲಾಗಿತ್ತು. ವರದಿಯಿಂದ ಎಚ್ಚೆತ್ತ ಸಣ್ಣ ನೀರಾವರಿ ಇಲಾಖೆ ಈಗ ದುರಸ್ತಿ ಕಾರ್ಯ ಪೂರ್ಣಗೊಳಿಸಿದೆ.

 ಗಾರೆ ಸಂಪೂರ್ಣ ಹಾಳಾಗಿತ್ತು :

      1892ರಲ್ಲಿ ಮೈಸೂರು ಮಹಾರಾಜರು ಕಲ್ಲು, ಮಣ್ಣಿನ ಇಟ್ಟಿಗೆ ಮತ್ತು ಗಾರೆಯಿಂದ ಈ ಜಲಾಶಯವನ್ನು ಕಟ್ಟಿಸಿದ್ದರು. ಜಲಾಶಯ ಕಟ್ಟಿ ನೂರಾರು ವರ್ಷವಾಗಿರುವುದರಿಂದ ಸಹಜವಾಗಿ ಜಲಾಶಯದ ಒಳ ಗೋಡೆಯ ಗಾರೆ ಸಂಪೂರ್ಣ ಹಾಳಾಗಿತ್ತು. ಅಲ್ಲದೆ ಗೋಡೆಯ ಇಟ್ಟಿಗೆಯೂ ಸಹ ನೂರಾರು ವರ್ಷಗಳಿಂದ ನೀರಿನಲ್ಲಿ ನೆನೆದು ಕರಗುತ್ತಿದ್ದವು. ಒಂದು ವೇಳೆ ನಿರ್ಲಕ್ಷ್ಯಿಸಿದ್ದರೆ ಇಡೀ ಜಲಾಶಯವೇ ಶಿಥಿಲವಾಗುವ ಆತಂಕ ಎದುರಾಗಿತ್ತು.

ಗಿಡ-ಗೆಂಟೆ ಬೆಳೆದಿದ್ದವು :

      ಜಲಾಶಯದ ಗೋಡೆಯಲ್ಲಿ ಅರಳಿಗಿಡ ಸೇರಿದಂತೆ ವಿವಿಧ ಗಿಡಗಳು ಬೆಳೆದಿದ್ದು ಇವುಗಳ ಬೇರುಗಳು ಜಲಾಶಯ ಕೊರೆದು ಜಲಾಶಯಕ್ಕೆ ಭಾರಿ ಹಾನಿ ಮಾಡುವ ಸಂಭವವಿತ್ತು. ಕಳೆದ 2-3 ವರ್ಷಗಳಿಂದ ಬೋರನಕಣಿವೆ ಜಲಾಶಯ ಪ್ರದೇಶದಲ್ಲಿ ಉತ್ತಮ ಮಳೆಯಾಗದ ಪರಿಣಾಮ ಈಗ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ಮಟ್ಟಕ್ಕಿಂತಲೂ ಕೆಳಮಟ್ಟದಲ್ಲಿ ನೀರಿದ್ದು, ಶಿಥಿಲಗೊಂಡ ಗೋಡೆಗಳನ್ನು ಅನಾಯಾಸವಾಗಿ ದುರಸ್ತಿ ಮಾಡಬಹುದಾಗಿತ್ತು.

ದುರಸ್ತಿಗೆ ಸಾರ್ವಜನಿಕರ ಒತ್ತಡವಿತ್ತು :

ಬೋರನಕಣಿವೆ ಜಲಾಶಯದ ಗೋಡೆ ಶಿಥಿಲ

      ಜಲಾಶಯಕ್ಕೆ ಶೀಘ್ರದಲ್ಲೇ ಹೇಮೆ ಮತ್ತು ಭದ್ರೆಯ ನೀರು ಹರಿಯುವುದರಲ್ಲದೆ ಹುಳಿಯಾರು, ಗಾಣಧಾಳು, ಹೊಯ್ಸಲಕಟ್ಟೆ, ಕೆಂಕೆರೆ ಗ್ರಾಪಂ ವ್ಯಾಪ್ತಿಗೆ ಕುಡಿಯುವ ನೀರು ಪೂರೈಸಲು ಜಲಾಶಯದಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳಬೇಕಿದೆ. ಹಾಗಾಗಿ ಈ ಅವಕಾಶವನ್ನು ಬಿಟ್ಟರೆ ಇನ್ನೆಂದೂ ದುರಸ್ತಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸಾರ್ವಜನಿಕರು ದುರಸ್ತಿಗೆ ಒತ್ತಡ ಹಾಕಿದ್ದರು.

ಜನರಿಂದ ಸಚಿವರಿಗೆ ಅಭಿನಂದನೆ :

     ಸಣ್ಣ ನೀರಾವರಿ ಇಲಾಖೆಯು ಜಲಾಶಯದ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿದೆ. ಗೋಡೆಗೆ ವಾಟರ್‍ಪ್ರೂಫ್ ಸಿಮೆಂಟ್ ಪ್ಲಾಸ್ಟ್ರಿಂಗ್ ಮಾಡಲಾಗಿದೆ. ಸ್ಪೈಯರ್ ಮೂಲಕ ಸಿಮೆಂಟ್ ಗೋಡೆಗೆ ಸಿಂಪಡಿಸಿದು, ಇದಕ್ಕಾಗಿ ವಿಶೇಷ ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈಗ ಹೇಮಾವತಿ ನೀರು ತಿಮ್ಮಾಪುರ ಕೆರೆ ತುಂಬಿಸುತ್ತಿದ್ದು, ಕೆರೆ ತುಂಬಿದ ಬಳಿಕ ಜಲಾಶಯಕ್ಕೆ ನೀರು ಹರಿಯಲಿದೆ. ನೀರು ಹರಿಯುವಷ್ಟರಲ್ಲಿ ದುರಸ್ತಿಕಾರ್ಯ ಪೂರ್ಣಗೊಳಿಸಿ ಜಲಾಶಯ ರಕ್ಷಿಸಿರುವ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳನ್ನು ಸಾರ್ವಜನಿಕರು ಅಭಿನಂದಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link