ಮಿಡಗೇಶಿ
ರೈತರಿಗೆ ಭಾಷೆ ನೀಡಿದಂತಹ ಉತ್ತರೆ ಮಳೆ ಸುರಿದು, ಬಿದರಕೆರೆ ತುಂಬಲು ಕೇವಲ ಅರ್ಧ ಅಡಿ ಮಾತ್ರ ಬಾಕಿ ಇದೆ. ಪಾವಗಡ ಮಧುಗಿರಿ ಹೆದ್ದಾರಿ ಪ್ರಯಾಣಿಕರು ಕೆರೆಯ ನೀರನ್ನು ಕಂಡು ಸಂತೋಷ ಪಡುತ್ತಿದ್ದಾರೆ. ರೈತರ ಮುಖದಲ್ಲಿ ಸಂತಸ ಮೂಡಿದೆ. ಕೆರೆಯ ನೀರನ್ನು ವ್ಯವಸಾಯಕ್ಕೆ ಬಳಸಿಕೊಳ್ಳಲು ಸರ್ಕಾರ ಅನುಮತಿ ನೀಡಿದ್ದೆ ಆದಲ್ಲಿ ಬಿದರಕೆರೆಯ ಹಿಂಬದಿಯ ಬಿದರಕೆರೆ ಹಾಗೂ ಕ್ಯಾತಗೊಂಡನಹಳ್ಳಿಯ ರೈತರು ಭತ್ತದ ಫಸಲು ಬೆಳೆಯಲು ತುದಿಗಾಲ ಮೇಲೆ ನಿಂತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ