ಬೆಳಗಾವಿ:
ಅಲ್ಪಸಂಖ್ಯಾತ ಕೋಟಾ ದಲ್ಲಿ ನನಗೂ ಮಂತ್ರಿ ಸ್ಥಾನ ನೀಡಿ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಒತ್ತಾಯಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ 18 ಮತಕ್ಷೇತ್ರಗಳಿವೆ. ಇಷ್ಟು ದೊಡ್ಡ ಜಿಲ್ಲೆ ಮತ್ತೊಂದು ಸಚಿವ ಸ್ಥಾನ ಕೊಡಬೇಕು.
ಬೆಂಗಳೂರಿನಂತ ದೊಡ್ಡ ಜಿಲ್ಲೆಗೆ ಮೂರು, ನಾಲ್ಕು ಸಚಿವ ಸ್ಥಾನ ಕೊಟ್ಟಿದೀರಿ. ಬೆಳಗಾವಿಗೆ ಎರಡು ಸ್ಥಾನ ಯಾಕೇ.? ಬೆಳಗಾವಿ ಜಿಲ್ಲೆಗೆ ಅನ್ಯಾಯ ಮಾಡುತ್ತೀದ್ದಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ ಆಗಿರುವೆ.
ನಾನು ಯಾಕೇ ಸಚಿವ ಸ್ಥಾನ ಕೇಳಬಾರದು. ಯಾಕೇ ಉತ್ತರ ಕರ್ನಾಟಕದ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ಕೊಡುವುದಿಲ್ಲ ಎಂದು ನಮ್ಮ ಸಮುದಾಯದ ನನಗೆ ಕೇಳುತ್ತಿದೆ. ನಮ್ಮ ಜಿಲ್ಲಾ ಸಚಿವರು, ನಮ್ಮ ಲೀಡರ್ ಸತೀಶ್ ಜಾರಕಿಹೊಳಿ ಅವರನ್ನ ನಾನು ಕೇಳುತ್ತೇನೆ. ನನ್ನ ಹೆಸರನ್ನ ಅವರು ಶಿಫಾರಸು ಮಾಡಿದ್ರೆ ನಾನು ವರಿಷ್ಠರಿಗೆ ಕೇಳುತ್ತೇನೆ. ನಾನು ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
