ಬೆಂಗಳೂರು:
ITR ಫೈಲ್ ಮಾಡುವಂತಹ ಪ್ರಕ್ರಿಯೆ ತ್ವರಿತ ಗತಿಯಲ್ಲಿ ನಡೆಯುತ್ತಿದೆ. Taxable ಆದಾಯವನ್ನು ಹೊಂದಿರುವಂತಹ ಜನರು ITR File ಮಾಡಬೇಕಾಗುತ್ತದೆ. ಟ್ಯಾಕ್ಸ್ ಸ್ಲಾಬ್ ನಲ್ಲಿ ಇನ್ಕಮ್ ಟ್ಯಾಕ್ಸ್ ಫೈಲ್ ಮಾಡುವ ಚಟುವಟಿಕೆ Old Regime ಹಾಗೂ New Regime ಎನ್ನುವಂತಹ ಎರಡು ರೀತಿಯ ಟ್ಯಾಕ್ಸ್ ಕಟ್ಟುವಂತಹ ಪ್ರಕ್ರಿಯೆಗಳಿದ್ದು ಇವೆರಡು ಕೂಡ ಬೇರೆ ಬೇರೆ ಆಗಿರುತ್ತದೆ.
ಒಂದು ವೇಳೆ ನೀವು ಟ್ಯಾಕ್ಸ್ ಕಟ್ಟುವ ವರ್ಗಕ್ಕೆ ಸೇರಿದರೆ ಜುಲೈ 31ರ ಒಳಗೆ ITR File ಮಾಡಬೇಕಾಗುತ್ತದೆ. CBDT ಮೂಲಕ ಈಗಾಗಲೇ ಫೆಬ್ರವರಿಯಲ್ಲಿ ITR ಫಾರ್ಮ್ ಅನ್ನು ಜಾರಿಗೆ ತರಲಾಗಿತ್ತು. ಉದ್ಯೋಗಧಾರಿತ ವ್ಯಕ್ತಿಗಳಿಗೂ ಕೂಡ ಸಂಸ್ಥೆಯಿಂದ ಫಾರ್ಮ್ 16 ಅನ್ನು ಜಾರಿಗೊಳಿಸಲಾಗಿತ್ತು.
ಇದರ ಜಾರಿಗೆ ಬರುವಿಕೆಯ ನಂತರ ಐಟಿಆರ್ ಫೈಲ್ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚು ಆಗುತ್ತಿರುವುದು ಖಚಿತವಾಗಿದೆ. ಟ್ಯಾಕ್ಸ್ ಕಟ್ಟುವಂತಹ ಅಧಿಕೃತ ವೆಬ್ಸೈಟ್ನಲ್ಲಿ ಕೂಡ ಟ್ಯಾಕ್ಸ್ ಕಟ್ಟುವ ಜನರ ಟ್ರಾಫಿಕ್ ಹೆಚ್ಚಾಗಿ ಕಂಡುಬರುತ್ತಿರುವುದು ಕೂಡ ಗಮನಕ್ಕೆ ಬಂದಿದೆ. ಹೀಗಾಗಿ ನಿಗದಿತ ಸಮಯದಲ್ಲಿ ಟ್ಯಾಕ್ಸ್ ಕಟ್ಟುವುದು ಅತ್ಯಂತ ಪ್ರಮುಖವಾಗಿದೆ. ವೈಯಕ್ತಿಕ ಆದಾಯ, ವ್ಯವಸಾಯ ಹಾಗೂ ಕಂಪನಿಗಾಗಿ ಏಳು ವಿಧದ ITR ಫಾರ್ಮ್ ಆದಾಯ ಇಲಾಖೆಯಲ್ಲಿ ಇದೆ ಎಂಬುದನ್ನು ಕೂಡ ನೀವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗುತ್ತದೆ.
ಅಗತ್ಯಕ್ಕೆ ತಕ್ಕಂತೆ ಬೇರೆ ಬೇರೆ ಐಟಿಆರ್ ಫಾರ್ಮಗಳನ್ನು ಕೂಡ ದಾಖಲಿಸಲಾಗುತ್ತದೆ. ITR 1 ITR4 ಫಾರ್ಮ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಡಿಮೆ ಹಾಗೂ ಮಾಧ್ಯಮ ವರ್ಗದ ಟ್ಯಾಕ್ಸ್ ಕಟ್ಟುವಿಕೆಗಾಗಿ ಬಳಸಲಾಗುತ್ತದೆ. ಒಂದು ವೇಳೆ ಟ್ಯಾಕ್ಸ್ ಕಟ್ಟುತ್ತಿರುವ ವ್ಯಕ್ತಿಗಳು ಸಮಯಕ್ಕೆ ಸರಿಯಾಗಿ ಟ್ಯಾಕ್ಸ್ ಅನ್ನು ರಿಟರ್ನ್ ಫೈಲ್ ಮಾಡದೆ ಹೋದಲ್ಲಿ ಅವರಿಗೆ 5000 ವರೆಗೂ ಕೂಡ ದಂಡವನ್ನು ವಿಧಿಸಬಹುದಾದ ಸಾಧ್ಯತೆ ಇದೆ.
ಈ ವರ್ಷ ITR File ಮಾಡಲು ಜುಲೈ 31 ಕೊನೆಯ ದಿನಾಂಕವಾಗಿದ್ದು ಇದರ ಒಳಗೆ ಟ್ಯಾಕ್ಸ್ ಅನ್ನು ಭರಿಸುವುದು ಕಡ್ಡಾಯವಾಗಿದೆ. ಇದಾದ ನಂತರ 30 ಡಿಸೆಂಬರ್ ವರೆಗೂ ಕೂಡ ಹೆಚ್ಚಿನ ಸಮಯಾ ವಕಾಶವನ್ನು ನೀಡಲಾಗುತ್ತದೆ ಆದರೆ ಈ ಸಂದರ್ಭದಲ್ಲಿ ರಿಟರ್ನ್ ಫೈಲ್ ಮಾಡಬೇಕಾದರೆ 5000 ಪೆನಾಲ್ಟಿಯನ್ನು ನೀವು ಕಟ್ಟಬೇಕಾಗುತ್ತದೆ. ಹೀಗಾಗಿ ಜುಲೈ 31 ರ ನಂತರ ಐಟಿಆರ್ ಫೈಲ್ ಮಾಡಿದರೆ ಐದು ಸಾವಿರ ರೂಪಾಯಿಗಳನ್ನು ಡಿಸೆಂಬರ್ 30 ರವರೆಗೆ ಇರುವಂತಹ ಸಮಯದಲ್ಲಿ ಪೆನಾಲ್ಟಿಯ ರೂಪದಲ್ಲಿ ಕಟ್ಟಬೇಕಾಗುತ್ತದೆ ಹಾಗೂ ಡಿಸೆಂಬರ್ ನಂತರ ಈ Penaltyಯ ಹಣ ಇನ್ನಷ್ಟು ಹೆಚ್ಚಾಗಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ